/newsfirstlive-kannada/media/post_attachments/wp-content/uploads/2024/11/America-Election.jpg)
ಜಗತ್ತಿನ ಎಲ್ಲ ರಾಷ್ಟ್ರಗಳು ತಮ್ಮ ದೇಶದ ಚುನಾವಣೆಯನ್ನು ಬಿಟ್ಟು ಬೇರಾವ ರಾಷ್ಟ್ರದ ಚುನಾವಣೆಯ ಬಗ್ಗೆ ಕುತೂಹಲ ಇಟ್ಟುಕೊಳ್ಳುತ್ತದೆ ಅಂದ್ರೆ ಅದು ಅಮೆರಿಕಾದ ಅಧ್ಯಕ್ಷೀಯ ಚುನಾವಣೆ. ಈ ಚುನಾವಣೆಯನ್ನು ಇಡೀ ಜಗತ್ತೇ ತುದಿಗಾಲಿನ ಮೇಲೆ ನಿಂತುಕೊಂಡು ನೋಡುತ್ತದೆ. ಯಾರ ಪಾಲಿಗೆ ವೈಟ್ಹೌಸ್ ಗದ್ದುಗೆ ಒಲಿಯಲಿದೆ ಎಂದು ಕುತೂಹಲ ಕಣ್ಣಿನಿಂದ ನೋಡುತ್ತಿರುತ್ತಾರೆ. ನಾಲ್ಕು ವರ್ಷಗಳ ಜೋ ಬೈಡನ್ ಆಡಳಿತ ಕೊನೆಯಾಗಲು, ಹೊಸ ಅಧ್ಯಕ್ಷರು ಬಂದು ಕೂರಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ನಾಳೆ ಅಂದ್ರೆ ನವೆಂಬರ್ 5 ರಂದು ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ.
ಈ ಮತದಾನ ನಡುವೆಯೇ ಈ ಬಾರಿ ಅಮೆರಿಕಾ ತನ್ನ ಮೊದಲ ಮಹಿಳಾ ಅಧ್ಯಕ್ಷೆಯನ್ನು ಪಡೆಯುತ್ತೋ ಇಲ್ಲ ಟ್ರಂಪ್ರನ್ನು ಎರಡನೇ ಬಾರಿಯಾಗಿ ಅಧ್ಯಕ್ಷರನ್ನಾಗಿ ಪಡೆಯುತ್ತೋ ಅನ್ನೋ ಎನ್ನುವ ಕುತೂಹಲಗಳು ಮೊಳಕೆಯೊಡೆದಿವೆ. ಈ ಎಲ್ಲಾ ಕುತೂಹಲಗಳಿಗೂ ನಾಳೆ ಅಂದ್ರೆ ನವೆಂಬರ್ 5 ರಂದು ಉತ್ತರ ದೊರಕಲಿದೆ.
ಈ ಬಾರಿಯ ಚುನಾವಣೆ ಈ ಹಿಂದೆ ನಡೆದ ಚುನಾವಣೆಗಿಂತ ರಣರೋಚಕವಾಗಿದೆ. ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಮಧ್ಯೆ ನೆಕ್ ಟು ನೆಕ್ ಫೈಟ್ ಒಂದು ಗೋಚರವಾಗುತ್ತಿದೆ. ಎಲ್ಲಾ ಓಪಿನಿಯನ್ ಪೋಲ್ಗಳು ಸ್ಪಷ್ಟವಾದ ಫಲಿತಾಂಶವನ್ನು ಕಟ್ಟಿಕೊಡುವಲ್ಲಿ ವಿಫಲವಾಗಿವೆ.
ಇದನ್ನೂ ಓದಿ:ಹಬ್ಬದ ಸಂಭ್ರಮದಂದೇ ಭಾರತ-ಚೀನಾ ಗಡಿಯಲ್ಲಿ ಮಹತ್ವದ ಬೆಳವಣಿಗೆ.. 2 ದೇಶಗಳ ನಿರ್ಧಾರ ಸ್ವಾಗತಿಸಿದ USA
ಹಾಗಿದ್ರೆ ಚುನಾವಣಾ ಸಮೀಕ್ಷೆಗಳು ಏನು ಹೇಳಲಿವೆ. ಯಾರ ಪಾಲಿಗೆ ವೈಟ್ಹೌಸ್ನ ಗದ್ದುಗೆ ಒಲಿದು ಬರಲಿದೆ. ಅಮೆರಿಕಾದ ಮೊದಲ ಮಹಿಳಾ ಅಧ್ಯಕ್ಷೆಯಯಾಗುವಲ್ಲಿ ಕಮಲಾ ಹ್ಯಾರಿಸ್ ಯಶಸ್ವಿಯಾಗುತ್ತಾರಾ. ಎರಡನೇ ಬಾರಿ ಅಧ್ಯಕ್ಷ ಗಾದಿ ಏರುವಲ್ಲಿ ಟ್ರಂಪ್ ಸಫಲರಾಗುತ್ತಾರಾ?
ಒಂದು ಕಡೆ ಅಟ್ಲಾಸ್ ಇಂಟೆಲ್ ನಡೆಸಿದ ಚುನಾವಣೆ ಸಮೀಕ್ಷೆಯಲ್ಲಿ ಈ ಬಾರಿ ಅಮೆರಿಕಾ ಪ್ರಜೆಗಳು ಡೊನಾಲ್ಡ್ ಟ್ರಂಪ್ಗೆ ಮಣೆ ಹಾಕುವುದು ನಿಶ್ಚಿತ ಎಂದೇ ಹೇಳುತ್ತಿದೆ. ಕನಿಷ್ಠ ಏಳು ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಕಮಲಾ ಹ್ಯಾರಿಸ್ಗೆ ಕಂಟಕವಾಗಿ ಕಾಡುತ್ತಾರೆ ಎಂದು ಈ ಚುನಾವಣಾ ಪೂರ್ವ ಸಮೀಕ್ಷೆ ವರದಿ ಮಾಡಿದೆ. ಸರ್ವೇ ಹೇಳುವ ಪ್ರಕಾರ ಟ್ರಂಪ್ಗೆ ಅರಿಜೊನಾದಲ್ಲಿ ಶೇಕಡಾ 52.3 ರಷ್ಟು ಬೆಂಬಲ ದೊರಕಿದರೆ ಕಮಲಾ ಹ್ಯಾರಿಸ್ಗೆ 45.8 ರಷ್ಟು ಬೆಂಬಲ ದೊರೆಯಲಿದೆ. ನೆವಾಡದಲ್ಲಿ ಟ್ರಂಪ್ ಶೇಕಡಾ 51.2ರಷ್ಟು ಬೆಂಬಲ ದಕ್ಕಿಸಿಕೊಂಡರೆ ಕಮಲಾ ಹ್ಯಾರಿಸ್ 46 ರಷ್ಟು ಬೆಂಬಲ ದಕ್ಕಿಸಿಕೊಂಡಿದ್ದಾರೆ. ನಾರ್ಥ್ ಕ್ಯಾರೊಲಿನಾದಲ್ಲಿ ಟ್ರಂಪ್ ಶೇಕಡಾ 50.5 ರಷ್ಟು ಬೆಂಬಲವನ್ನು ಹೊಂದಿದ್ದರೆ,. ಹ್ಯಾರಿಸ್ 47.1ರಷ್ಟು ಬೆಂಬಲ ಹೊಂದಿದ್ದಾರೆ. ಹೀಗೆ ಗಾರ್ಜಿಯಾ ಮಿಚಿಗನ್ ಪೆನ್ಸಿಲ್ನ್ವಿಯಾ, ವಿಸ್ಕಾನ್ಸಿನ್ನಲ್ಲಿಯೂ ಕೂಡ ಟ್ರಂಪ್ಗೆ ಬಹುದೊಡ್ಡ ಬೆಂಬಲ ದೊರೆಯಲಿದೆ ಈ ಎಳು ರಾಜ್ಯಗಳಲ್ಲಿ ಟ್ರಂಪ್ ದೊಡ್ಡದಾಗಿ ಸಾಧನೆ ಮಾಡಲಿದ್ದು, ಕಮಲಾ ಹ್ಯಾರಿಸ್ಗೆ ಹಿನ್ನಡೆ ಆಗಲಿದೆ ಎಂದು ಸರ್ವೆ ಹೇಳಿದೆ.
ಇದನ್ನೂ ಓದಿ: ಅರಬ್ ಅಮೆರಿಕನ್ ಮತಗಳ ಮೇಲೆ ಕಣ್ಣು; ಮಿಚಿಗನ್ನಲ್ಲಿ ಹ್ಯಾರಿಸ್, ಟ್ರಂಪ್ ಭರ್ಜರಿ ಕ್ಯಾಂಪೇನ್
ಇನ್ನೂ ಎನ್ವೈಟಿ ಸೈನಾ ಕಾಲೇಜ್ ನಡೆಸಿರುವ ಸಮೀಕ್ಷೆ ಪ್ರಕಾರ ಎರಡು ಬದಿ ನೆಕ್ ಟು ನೆಕ್ ಫೈಟ್ ಆಗಲಿದೆ ಅಂತ ಇದೆ. ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಿಗಿಂತ ಈ ಚುನಾವಣೆ ಅತ್ಯಂತ ರಣರೋಚಕ ಫೈಟ್ ಕಟ್ಟಿಕೊಡಲಿದೆ ಎಂದು ಸೈನಾ ಕಾಲೇಜ್ನ ಸಮಿಕ್ಷೆ ಹೇಳಿದೆ. ಹೆಚ್ಚು ಕಡಿಮೆ ಶೇಕಡಾ 40 ರಷ್ಟು ಜನರು ನಾವು ಈಗಾಗಲೇ ಕಮಲಾ ಹ್ಯಾರಿಸ್ಗೆ ಮತ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗೆ ಈಗಾಗಲೇ ವೋಟು ಮಾಡಿದವರ ವಿಚಾರದಲ್ಲಿ ಟ್ರಂಪ್ ಕೊಂಚ ಮುಂದೆ ಇರುವುದು ಈ ಒಂದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ.
ಒಟ್ಟಾರೆ ಈ ಬಾರಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹೊಸದೊಂದು ರೋಚಕತೆ ಪಡೆಯುವದಂತೂ ಪಕ್ಕಾ ಆಗಿದೆ. ಯಾರು ಅಧ್ಯಕ್ಷೀಯ ಗಾದಿ ಏರಲಿದ್ದಾರೆ. ಯಾರಿಗೆ ಅಮೆರಿಕಾದ ಮತದಾರ ಪ್ರಭು ಜೈ ಎನ್ನಲಿದ್ದಾರೆ ಅನ್ನೋದರ ಸ್ಪಷ್ಟ ಚಿತ್ರಣ ನವೆಂಬರ್ 5 ರಂದು ಗೊತ್ತಾಗಲಿದೆ. ಟ್ರಂಪ್ ಎರಡನೇಯ ಅವಧಿಯೋ. ಕಮಲ ಹ್ಯಾರಿಸ್ ಅಮೆರಿಕಾದ ಮೊದಲ ಮಹಿಳಾ ಅಧ್ಯಕ್ಷೆಯೋ ಅನ್ನೋದರ ಸ್ಪಷ್ಟನೆಗೆ ಇನ್ನೂ ಕೆಲವು ಗಂಟೆಗಳು ಕಾಯಲೇಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ