Advertisment

ಶರಣಾಗಲು ಇರಾನ್​​ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..

author-image
Ganesh
Updated On
ಶರಣಾಗಲು ಇರಾನ್​​ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..
Advertisment
  • ಇರಾನ್​ನಿಂದಲೂ ಇಸ್ರೇಲ್​ ಮೇಲೆ ಪ್ರತೀಕಾರದ ಕ್ಷಿಪಣಿ ದಾಳಿ
  • ಇಸ್ರೇಲ್​-ಇರಾನ್​ ಸಂಘರ್ಷಕ್ಕೆ ಅಮೆರಿಕಾ ಅಧ್ಯಕ್ಷ ಎಂಟ್ರಿ
  • ಮಧ್ಯಪ್ರಾಚ್ಯದತ್ತ ಹೆಚ್ಚಿನ ಯುದ್ಧ ವಿಮಾನ ಕಳಿಸಿದ ಟ್ರಂಪ್​

ಇರಾನ್​ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ ಮುಂದುವರಿದಿದೆ. ಇರಾನ್​ನ ಹಲವು ಭಾಗಗಳಲ್ಲಿ ಇಂಟರ್​ ನೆಟ್ ಸ್ಥಗಿತಗೊಂಡಿದೆ. ಜೊತೆಗೆ ಮಧ್ಯಪ್ರಾಚ್ಯಕ್ಕೆ ಅಮೆರಿಕ ಹೆಚ್ಚಿನ ಯುದ್ಧ ವಿಮಾನಗಳನ್ನು ರವಾನೆ ಮಾಡಿದೆ. ಅಲ್ಲದೇ ಇರಾನ್​ನ ಸುಪ್ರೀಂ ಲೀಡರ್​ಗೆ ಟ್ರಂಪ್​ ಎಚ್ಚರಿಕೆ ಕೊಟ್ಟಿದ್ದಾರೆ.

Advertisment

5ನೇ ದಿನಕ್ಕೆ ಕಾಲಿಟ್ಟ ಇರಾನ್​-ಇಸ್ರೇಲ್​ನ ಸಂಘರ್ಷ

ಇಸ್ರೇಲ್​ ಮತ್ತು ಇರಾನ್ ಅಣ್ವಸ್ತ್ರದ ವಿಷಯಕ್ಕೆ ನಾನಾ, ನೀನಾ ಎಂದು ಸಂಘರ್ಷಕ್ಕಿಳಿದಿವೆ. ಎರಡೂ ದೇಶಗಳು ಜಿದ್ದಿಗೆ ಬಿದ್ದವರಂತೆ ಮಿಸೈಲ್​ಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಸದ್ಯ ತಾರಕಕ್ಕೇರಿರುವ ಉಭಯ ದೇಶಗಳ ಕದನ ನಿಲ್ಲುವ ಲಕ್ಷಣಗಳೇ ಕಾಣ್ತಿಲ್ಲ. 6ನೇ ದಿನಕ್ಕೆ ಕದನ ಕಾಲಿಟ್ಟಿದ್ದು, ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ವಾತಾವರಣ ಸೃಷ್ಟಿಯಾಗಿದೆ..

ಇದನ್ನೂ ಓದಿ:ಇರಾನ್​ ಟಿವಿ ಚಾನಲ್​ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ.. ನ್ಯೂಸ್ ಓದುತ್ತಿದ್ದ ಆ್ಯಂಕರ್​ ಜಸ್ಟ್​ ಮಿಸ್​.. VIDEO​​

publive-image

ಇರಾನ್​ನ ನ್ಯೂಕ್ಲಿಯರ್​ ತಾಣಗಳನ್ನೇ ಗುರಿಯಾಗಿಸಿಕೊಂಡು ಇಸ್ರೇಲ್​ ರಣಭಯಂಕರ ಮಿಸೈಲ್​ ದಾಳಿ ನಡೆಸುತ್ತಿದೆ. ಇಸ್ರೇಲ್ ಬ್ಯಾಲೆಸ್ಟಿಕ್​ ಕ್ಷಿಪಣಿ ದಾಳಿ ಮಾಡಿದೆ ಎಂದು ಇರಾನ್​ ಆರೋಪ ಮಾಡಿದೆ. ಆದ್ರೆ ಇದನ್ನು ಇಸ್ರೇಲ್​ ನಿರಾಕರಿಸಿದೆ. ಟೆಹ್ರಾನ್​ನ ಅತ್ಯಂತ ಭದ್ರವಾದ ಸ್ಥಳದಲ್ಲಿರುವ ಪರಮಾಣು ತಾಣವನ್ನು ನಾಶ ಮಾಡಲು ಇಸ್ರೇಲ್​ ಬಂಕರ್​ ಬಸ್ಟರ್ ಪ್ರಯೋಗಕ್ಕೆ ಮುಂದಾಗಿದೆ. ​ಇಸ್ರೇಲ್​ ದಾಳಿಯಿಂದ ಪರಮಾಣು ಕೇಂದ್ರ ಧ್ವಂಸ ಆಗಿರುವ ಉಪಗ್ರಹ ಫೋಟೋಗಳು ಲಭ್ಯವಾಗಿವೆ.

Advertisment

ಇರಾನ್​ನಿಂದಲೂ ಇಸ್ರೇಲ್​ ಮೇಲೆ ಪ್ರತೀಕಾರದ ಕ್ಷಿಪಣಿ ದಾಳಿ

ಇರಾನ್​ ಕೂಡ ಸುಮ್ಮನೆ ಕುಳಿತಿಲ್ಲ. ಇಸ್ರೇಲ್​ ಮೇಲೆ ಮಿಸೈಲ್​ಗಳನ್ನು ತೂರಿ ಬಿಡ್ತಿದೆ. ಇರಾನ್​ ಕ್ಷಿಪಣಿಗಳನ್ನು ಹಾರಿಸುತ್ತಿದ್ದಂತೆ ಇಸ್ರೇಲ್​ನಲ್ಲಿ ಸೈರನ್​ ಮೊಳಗಿದ್ದು ಜನ ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. ಇನ್ನು ಪರಮಾಣು ಕೇಂದ್ರವಿರುವ ಇಸ್ರೇಲ್ ಪಟ್ಟಣದಲ್ಲೂ ಸೈರಲ್​ ಮೊಳಗಿದೆ. ಆದ್ರೆ ಇಸ್ರೇಲ್​ ಅಧ್ಯಕ್ಷ ನಮ್ಮ ಪರಮಾಣು ಕೇಂದ್ರಕ್ಕೆ ಏನೂ ಆಗಿಲ್ಲ ಎಂದಿದ್ದಾರೆ.

ಮಧ್ಯಪ್ರಾಚ್ಯದತ್ತ ಹೆಚ್ಚಿನ ಯುದ್ಧ ವಿಮಾನ ಕಳಿಸಿದ ಟ್ರಂಪ್​

ಇಸ್ರೇಲ್‌-ಇರಾನ್‌ ನಡುವಿನ ಯುದ್ಧಕ್ಕೆ ಅಮೆರಿಕ ಅಧಿಕೃತವಾಗಿ ಎಂಟ್ರಿಯಾಗಿದೆ. ಇದರಿಂದ ಮಧ್ಯಪ್ರಚ್ಯದಲ್ಲಿ 3ನೇ ಮಹಾಯುದ್ಧ ಆತಂಕ ಮನೆ ಮಾಡಿದೆ. ಜಿ7 ದೇಶಗಳ ಶೃಂಗಸಭೆಯಿಂದ ಅರ್ಧದಲ್ಲೇ ಹೊರಬಂದ ಟ್ರಂಪ್‌.. ಇರಾನ್​-ಇಸ್ರೇಲ್​ ಕದನಕ್ಕೆ ಸಂಪೂರ್ಣ ಮುಕ್ತಿ ಆಡುವ ಮಾತುಗಳನ್ನಾಡಿದ್ದಾರೆ. ಮಧ್ಯಪ್ರಾಚ್ಯಕ್ಕೆ ತನ್ನ ಹೆಚ್ಚಿನ ಯುದ್ಧ ವಿಮಾನಗಳ ರವಾನೆ ಮಾಡಿರೋದು, 3ನೇ ಮಹಾಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಇರಾನ್‌ನ ಸರ್ವೋಚ್ಛ ನಾಯಕ ಅಜ್ಞಾತ ಸ್ಥಳಕ್ಕೆ ಶಿಫ್ಟ್.. ಟೆಹ್ರಾನ್ ನಗರ ಖಾಲಿ ಖಾಲಿ..

Advertisment

publive-image

ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿ ಖಮೇನಿಗೆ ಟ್ರಂಪ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಇರಾನ್​ನ ಸುಪ್ರೀಂ ನಾಯಕ ಎಲ್ಲಿ ಅಡಗಿದ್ದಾನೆ ಅನ್ನೋದು ಗೊತ್ತಿದೆ. ಆತ ಬೇಷರತ್​ ಶರಣಾಗಬೇಕೆಂದು ವಿಶ್ವದ ದೊಡ್ಡಣ್ಣ ಟ್ರಂಪ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ.. ತಾರಕಕ್ಕೇರಿದ ಇರಾನ್​-ಇಸ್ರೇಲ್​ ಸಂಘರ್ಷಕ್ಕೆ ಅಮೆರಿಕ ಅಧಿಕೃತ ಎಂಟ್ರಿಕೊಟ್ಟಿದ್ದು, ಮಧ್ಯಪ್ರಾಚ್ಯದಲ್ಲಿ ವಾತಾವರಣವನ್ನೇ ಬದಲಿಸಿದೆ. ಇರಾನ್​-ಇಸ್ರೇಲ್​ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯದಲ್ಲಿ ಏರ್​ಪೋರ್ಟ್​ಗಳನ್ನು ಕ್ಲೋಸ್​ ಮಾಡಲಾಗಿದೆ.

ಇದನ್ನೂ ಓದಿ: ಇರಾನ್‌ಗೆ ಡಬಲ್ ಶಾಕ್.. 5 ದಿನಕ್ಕೆ ಇಸ್ರೇಲ್ ದಾಳಿಯಲ್ಲಿ ಮತ್ತೊಬ್ಬ ಸೇನಾ ಮುಖ್ಯಸ್ಥನ ಹತ್ಯೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment