/newsfirstlive-kannada/media/post_attachments/wp-content/uploads/2025/07/DONALD_TRUMP.jpg)
ಭಾರತ- ಪಾಕಿಸ್ತಾನ ಸಂಘರ್ಷದ ವೇಳೆ 5 ಫೈಟರ್ ಜೆಟ್ಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೇ, ಯಾವ ದೇಶದ ಫೈಟರ್ ಜೆಟ್ಗಳನ್ನು, ಯಾವ ದೇಶ ಹೊಡೆದುರುಳಿಸಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಲ್ಲ. ಆಪರೇಷನ್ ಸಿಂಧೂರ್ ವೇಳೆ 5 ಫೈಟರ್ ಜೆಟ್ ಹೊಡೆದುರುಳಿಸಲಾಗಿತ್ತು ಎಂದಿದ್ದಾರೆ. ರಿಪಬ್ಲಿಕನ್ ಸಂಸದರಿಗೆ ಏರ್ಪಡಿಸಿದ್ದ ಭೋಜನಕೂಟದ ವೇಳೆ ಶ್ವೇತಭವನದಲ್ಲಿ ಟ್ರಂಪ್ ಭಾರತ ಹಾಗೂ ಪಾಕ್ ನಡುವಿನ ಸಂಘರ್ಷದ ಕುರಿತು ಮಾತನಾಡಿದ್ದಾರೆ.
ವಾಸ್ತವವಾಗಿ ಆಗಸದಲ್ಲೇ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಐದು, ಐದು, ನಾಲ್ಕು ಅಥವಾ ಐದು. ಆದರೇ, ನನಗನ್ನಿಸುವ ಪ್ರಕಾರ, ಐದು ಫೈಟರ್ ಜೆಟ್ಗಳನ್ನು ವಾಸ್ತವವಾಗಿ ಹೊಡೆದುರುಳಿಸಲಾಗಿತ್ತು ಎಂದು ಡೊನಾಲ್ಡ್ ಟ್ರಂಪ್ ಸಂಕ್ಷಿಪ್ತವಾಗಿ ಹೇಳಿದ್ದಾರೆ.
ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ
ಆದರೇ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ. ಇದರಿಂದಾಗಿ ಆಪರೇಷನ್ ಸಿಂಧೂರ್ ಬಗ್ಗೆ ಮತ್ತೆ ಚರ್ಚಿಸುವಂತೆ ಮಾಡಿದ್ದಾರೆ. ಮೇ, 22 ರಂದು ಕಾಶ್ಮೀರದ ಪಹಲ್ಗಾಮ್ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಜೂನ್ ತಿಂಗಳಿನಲ್ಲಿ ಭಾರತವು ಅಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. 4 ದಿನಗಳ ಕಾಲ ಭಾರತ, ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. 9 ವಾಯುನೆಲೆಗಳು ಹಾಗೂ ಪಾಕ್ ಉಗ್ರರ ಹೆಡ್ ಕ್ವಾರ್ಟರ್ಗಳನ್ನು ಧ್ವಂಸ ಮಾಡುವಲ್ಲಿ ಭಾರತ ಯಶಸ್ವಿಯಾಗಿತ್ತು.
ಇನ್ನೂ ಅಪರೇಷನ್ ಸಿಂಧೂರ್ ವೇಳೆ, ಭಾರತದ ಫೈಟರ್ ಜೆಟ್ಗಳನ್ನು ಪಾಕಿಸ್ತಾನ ಹೊಡೆದುರುಳಿಸಿಲ್ಲ ಎಂದು ಸಿಡಿಎಸ್ ಅನಿಲ್ ಚೌಹಾಣ್ ಹಾಗೂ ಹಿರಿಯ ಸೇನಾಧಿಕಾರಿಗಳು ಹೇಳಿದ್ದಾರೆ. ಯುದ್ಧದಂಥ ಸಂದರ್ಭದಲ್ಲಿ ಕೆಲವೊಂದು ನಷ್ಟ ಸಂಭವಿಸುತ್ತೆ ಎಂದು ಭಾರತದ ಡಿಜಿಎಂಓ ಹೇಳಿದ್ದರು.
ಇದನ್ನೂ ಓದಿ:ಪತ್ನಿ ಜೀವ ತೆಗೆದಿದ್ದ ಕೇಸ್; ಆಪರೇಷನ್ ಸಿಂಧೂರ್ನಲ್ಲಿ ಭಾಗಿ ಆದ್ರೂ ರಿಲೀಫ್ ನೀಡಲ್ಲ- ಸುಪ್ರೀಂ ಕೋರ್ಟ್
ಇನ್ನೂ ಭಾರತದ ಫೈಟರ್ ಜೆಟ್ ಹೊಡೆದುರುಳಿಸಿರುವುದಕ್ಕೆ, ಭಾರತದ ಯಾವುದೇ ಮಿಲಿಟರಿ ನೆಲೆಗೆ ಪಾಕ್ ನಿಂದ ಹಾನಿಯಾಗಿರುವುದಕ್ಕೆ ಒಂದೇ ಒಂದು ಸ್ಯಾಟಲೈಟ್ ಇಮೇಜ್, ಪೋಟೋ ಸಾಕ್ಷ್ಯ ನೀಡಲಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಹಾರ ಅಜಿತ್ ದೋವಲ್ ಇತ್ತೀಚೆಗೆ ಚೆನ್ನೈನ ಐಐಟಿ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಸವಾಲು ಹಾಕಿದ್ದರು. ಭಾರತವು ಪಾಕಿಸ್ತಾನದ ವಾಯುನೆೆಲೆಗಳನ್ನ ಧ್ವಂಸ ಮಾಡಿರುವುದಕ್ಕೆ ಸ್ಯಾಟಲೈಟ್ ಇಮೇಜ್, ಪೋಟೋ ಸಾಕ್ಷ್ಯ ಎಲ್ಲೆಡೆ ಲಭ್ಯ ಇದೆ ಎಂದು ಅಜಿತ್ ದೋವಲ್ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ