/newsfirstlive-kannada/media/post_attachments/wp-content/uploads/2025/06/TRUMP-2.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( Donald Trump) ತಂತ್ರಜ್ಞಾನದ ಜಗತ್ತಿಗೆ ಪ್ರವೇಶ ಮಾಡಿದ್ದಾರೆ. The Trump Organization ಕಂಪನಿಯು ‘ಟ್ರಂಪ್ ಮೊಬೈಲ್’ ಎಂಬ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಆ್ಯಪಲ್‌ನ ಐಫೋನ್‌ನೊಂದಿಗೆ ನೇರವಾಗಿ ಸ್ಪರ್ಧಿಸಲು ಮಾರುಕಟ್ಟೆಗೆ ಲಗ್ಗೆ ಇಡ್ತಿದೆ. ಪ್ರಸ್ತುತ ಅಮೆರಿಕದಲ್ಲಿ ಈಗಾಗಲೇ ಬುಕಿಂಗ್ ಶುರುವಾಗಿದೆ. ಮುಂದಿನ ಆರು ತಿಂಗಳ ನಂತರ ಟ್ರಂಪ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಟ್ರಂಪ್ ಮೊಬೈಲ್ ಭಾರತಕ್ಕೆ ಬರುತ್ತಾ..?
ಐಫೋನ್-17 ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಭಾರತದಂತಹ ದೊಡ್ಡ ಮಾರುಕಟ್ಟೆಗೆ ಐಫೋನ್-17 ಪ್ರವೇಶ ಬಹುತೇಕ ಖಚಿತ. ಅಂತಹ ಪರಿಸ್ಥಿತಿಯಲ್ಲಿ ಟ್ರಂಪ್ ಮೊಬೈಲ್ ಭಾರತಕ್ಕೂ ಕಾಲಿಡಬಹುದು ಎಂದು ನಂಬಲಾಗಿದೆ.
ಅಮೆರಿಕದಲ್ಲಿ ಬೆಲೆ ಎಷ್ಟು?
ಸದ್ಯ ಅಮೆರಿಕದಲ್ಲಿ ಟ್ರಂಪ್ ಫೋನ್​​ ಬಲೆ 499 ಡಾಲರ್​. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 42,911 ರೂಪಾಯಿ. ಒಂದು ವೇಳೆ ಭಾರತದಲ್ಲಿ ಬಿಡುಗಡೆಯಾದರೆ ಅದರ ಮೇಲೆ ಸುಂಕ ವಿಧಿಸೋದು ಪಕ್ಕಾ ಆಗಿದೆ. ಭಾರತ ಸರ್ಕಾರ ಈ ಫೋನ್ ಮೇಲೆ 25% ಸುಂಕ ವಿಧಿಸಿದರೆ ಅದರ ಬೆಲೆ ಸುಮಾರು 53,638 ರೂಪಾಯಿ ಆಗಲಿದೆ. ಶೇಕಡಾ 50 ರಷ್ಟು ತೆರಿಗೆ ವಿಧಿಸಿದರೆ 64,366 ರೂಪಾಯಿಗಳಿಗೆ ಹೆಚ್ಚಳವಾಗಬಹುದು.
ಟ್ರಂಪ್ ಮೊಬೈಲ್‌ನ ವಿಶೇಷತೆ ಏನು..?
T1 Phone ಎಂಬ ಹೆಸರಿನಲ್ಲಿ ಟ್ರಂಪ್ ಫೋನ್ ಬಿಡುಗಡೆ ಮಾಡಲಾಗಿದೆ. ಇದನ್ನು ‘ಮೇಡ್ ಇನ್ ಅಮೆರಿಕಾ’ ಎಂದು ವಿವರಿಸಲಾಗಿದೆ. ಅಮೇರಿಕನ್ ಬ್ರ್ಯಾಂಡ್ ಬೆಂಬಲಿಸುವ ಗ್ರಾಹಕರ ಗಮನದಲ್ಲಿಟ್ಟುಕೊಂಡು ಫೋನ್ ವಿನ್ಯಾಸ ಮಾಡಲಾಗಿದೆ. ಫೋನ್​ ಫೀಚರ್ಸ್​ ಬಗ್ಗೆ ಯಾವುದೇ ವಿವರಣೆ ಇಲ್ಲ. ಆದರೆ, ಗೋಲ್ಡ್ ಕಲರ್​​ನಲ್ಲಿ ಮೊಬೈಲ್ ಇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ