15 ದೇಶಗಳಿಗೆ ಡಬಲ್ ಶಾಕ್‌ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ; ಭಾರತಕ್ಕೆ ಎಷ್ಟು ನಷ್ಟ?

author-image
admin
Updated On
15 ದೇಶಗಳಿಗೆ ಡಬಲ್ ಶಾಕ್‌ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ; ಭಾರತಕ್ಕೆ ಎಷ್ಟು ನಷ್ಟ?
Advertisment
  • ಹೊಸ ಸುಂಕ ನೀತಿ ಜಾರಿಗೆ ತರಲು ಟ್ರಂಪ್ ಗ್ರೀನ್ ಸಿಗ್ನಲ್!
  • Dirty 15 ಪಟ್ಟಿಯಲ್ಲಿರುವ ದೇಶಗಳೇ ಅಮೆರಿಕಾದ ಟಾರ್ಗೆಟ್
  • 15 ದೇಶಗಳ ಮೇಲೆ ಹಿಂದೆಂದೂ ಕಾಣದಂತಹ ಅತಿ ಹೆಚ್ಚು ಸುಂಕ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಸುಂಕಯುದ್ಧ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಸಂಚಲನ ಸೃಷ್ಟಿಸಿದೆ. ಏಪ್ರಿಲ್ 2ರಿಂದ ಅಮೆರಿಕಾದಲ್ಲಿ ವಿಮೋಚನಾ ದಿನ ಆಚರಣೆಗೆ ಕರೆ ನೀಡಲಾಗಿದೆ. ಈ ವಿಮೋಚನಾ ದಿನದ ಹಿನ್ನೆಲೆಯಲ್ಲಿ ಹೊಸ ಸುಂಕ ನೀತಿ ಜಾರಿಗೆ ತರಲು ಕೊನೆಗೂ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಸರ್ಕಾರ ಅಮೆರಿಕಾದಲ್ಲಿ ವಾಣಿಜ್ಯ-ವ್ಯವಹಾರಕ್ಕೆ ಹೊಸ ಸುಂಕ ನೀತಿ ಜಾರಿಗೆ ತಂದಿದೆ. ಇದರಿಂದ ಅಮೆರಿಕಾದ ಸರಕು-ಸಾಗಣಿಕೆ ಮೇಲೆ ಹಿಂದೆಂದೂ ಕಾಣದಂತಹ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ Dirty 15 ಎಂದು ಪಟ್ಟಿ ಮಾಡಿರುವ ದೇಶಗಳನ್ನೇ ಟಾರ್ಗೆಟ್ ಮಾಡಿ ಟ್ಯಾಕ್ಸ್ ಹಾಕುವ ಸಾಧ್ಯತೆ ಇದೆ.

publive-image

ಅಮೆರಿಕಾದ ಹೊಸ ಸುಂಕ ನೀತಿ ಬಗ್ಗೆ ವೈಟ್‌ಹೌಸ್‌ ಅಧಿಕೃತವಾಗಿ ಪ್ರಕಟ ಮಾಡಲಿದೆ. ಇದರಿಂದ ವಿಶ್ವದ ಅನೇಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಆರ್ಥಿಕ ಹೊಡೆತ ಬೀಳಲಿದೆ.

ಇದನ್ನೂ ಓದಿ: ಪ್ರೀತಿಯ ಶ್ವಾನದ ಜೊತೆ ಮತ್ತೆ ಒಂದಾದ ಸುನಿತಾ ವಿಲಿಯಮ್ಸ್.. ಮನಮಿಡಿಯುವ ವಿಡಿಯೋ ಇಲ್ಲಿದೆ! 

ಯುಎಸ್ ವಾಣಿಜ್ಯ ಇಲಾಖೆಯ 2024ರ ಅಂಕಿ-ಅಂಶದ ಪ್ರಕಾರ ಈ Dirty 15 ದೇಶಗಳಿಗೆ ಅಮೆರಿಕಾ ಹೊಸ ಸುಂಕ ನೀತಿ ಹಾಕುವ ಸಾಧ್ಯತೆ ಹೆಚ್ಚಾಗಿದೆ.

Dirty 15 ದೇಶಗಳು ಯಾವುವು?
ಚೀನಾ, ಮೆಕ್ಸಿಕೊ, ವಿಯೆಟ್ನಾಂ, ಐರ್ಲೆಂಡ್, ಜರ್ಮನಿ, ತೈವಾನ್, ಜಪಾನ್, ದಕ್ಷಿಣ ಕೊರಿಯಾ, ಕೆನಡಾ, ಭಾರತ, ಥೈಲ್ಯಾಂಡ್, ಇಟಲಿ, ಸ್ವಿಟ್ಜರ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ.

ಅಮೆರಿಕಾದ ವಾಣಿಜ್ಯ ಇಲಾಖೆಯ ಪ್ರಕಾರ ಈ ಮೇಲಿನ ದೇಶಗಳಿಂದ ಅಮೆರಿಕಾ ಆರ್ಥಿಕತೆಗೆ ಹೊರೆಯಾಗುತ್ತಿದೆ. ಹೀಗಾಗಿ ಈ 15 ದೇಶಗಳ ಮೇಲೆ ಹೊಸ ತೆರಿಗೆ ನೀತಿಯನ್ನು ಅಮೆರಿಕಾ ಘೋಷಣೆ ಮಾಡಲು ಮುಂದಾಗಿದೆ. ಇದು ಜಾರಿಯಾದ್ರೆ ಭಾರತಕ್ಕೆ 3.1 ಬಿಲಿಯನ್ ಡಾಲರ್‌ನಷ್ಟು ಅಂದ್ರೆ 300 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಎದುರಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment