RCB ಅಭಿಮಾನಿಗಳು ಯಾವಾಗಲೂ ಲಾಯಲ್ ಎನ್ನುವುದಕ್ಕೆ ಈ ಸ್ಟೋರಿನೇ ಸಾಕ್ಷಿ.. ಹೇಗೆ?

author-image
Bheemappa
Updated On
RCB ಅಭಿಮಾನಿಗಳು ಯಾವಾಗಲೂ ಲಾಯಲ್ ಎನ್ನುವುದಕ್ಕೆ ಈ ಸ್ಟೋರಿನೇ ಸಾಕ್ಷಿ.. ಹೇಗೆ?
Advertisment
  • ಆರ್​ಸಿಬಿ ತಂಡಕ್ಕೆ ಶುಭವಾಗಲೆಂದು ಹಾರೈಸುವವರು ಹೆಚ್ಚು ಜನ ಇದ್ದಾರೆ
  • ತಮಾಷೆಗಾಗಿ ಮಾಡಿದ ಆದ್ರೆ ಅಭಿಮಾನಿಗಳು ವಿಶ್ವಾಸ ತೋರಿಸಿದರು
  • ಕೇವಲ ಒಂದೇ ಒಂದು ದಿನದಲ್ಲಿ ಎಷ್ಟು ಹಣ ಗಳಿಸಿದನು ಸಾರ್ಥಕ್.? ​

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಸೀಸನ್​ನಿಂದಲೂ ಈ ಸೀಸನ್​ವರೆಗೂ ಐಪಿಎಲ್​ ಟ್ರೋಫಿ ಗೆದ್ದಿಲ್ಲ. ಫೈನಲ್​ವರೆಗೆ ಹೋಗಿದ್ದರೂ ಟ್ರೋಫಿಯನ್ನು ಪಡೆಯುವಲ್ಲಿ ಸತತ ವಿಫಲವಾಗಿದೆ. ಆ ನೋವು ಇನ್ನು ತಂಡದಲ್ಲಿ ಇದೆ. ಆದರೆ ಅಭಿಮಾನಿಗಳು ಮಾತ್ರ ಎಂದಿಗೂ ಆರ್​ಸಿಬಿಯನ್ನು ಕೈ ಬಿಟ್ಟಿಲ್ಲ. ಸೀಸನ್​​ ಇಂದ ಸೀಸನ್​ಗೆ ಫ್ಯಾನ್ಸ್​ ಹೆಚ್ಚಾಗಿದ್ದಾರೆ ವಿನಃ ಬಿಟ್ಟು ಹೋಗಿಲ್ಲ. ನಂಬಿಕೆಯ ಅಭಿಮಾನಿಗಳು ಎಂತಹವರು ಎನ್ನುವುದಕ್ಕೆ ಇಲ್ಲೊಂದು ನಿದರ್ಶನವೇ ಇದೆ.

ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್​ ಕ್ರಿಯೇಟರ್ ಆಗಿರುವ ಮಹಾರಾಷ್ಟ್ರದ ಸಾರ್ಥಕ್​ ಸಚ್​ದೇವ್ ಎನ್ನುವರು ಪ್ರಯೋಗ ಮಾಡಿದ್ದಾರೆ. ಅದು ಆರ್​ಸಿಬಿ ಫ್ಯಾನ್ಸ್​ ಬಗ್ಗೆ ಪ್ರಯೋಗ ಮಾಡಿ ಬಿಗ್ ಶಾಕ್​ಗೆ ಒಳಗಾಗಿದ್ದಾರೆ. ಲಾಯಲ್ ಫ್ಯಾನ್ಸ್​ ಎಂದರೆ ಏನೆಂದು ತಿಳಿಯಲು ಮುಂದಾದ ಸಾರ್ಥಕ್​ ಸಚ್​ದೇವ್, ತನ್ನ ಬ್ಯಾಂಕ್ ಅಕೌಂಟ್​ ಇರುವ ಕ್ಯೂರ್​ ಕೋಡ್​ ಪ್ರಿಂಟ್​ ಔಟ್ ತೆಗೆದುಕೊಂಡಿದ್ದಾರೆ. ಇದರ ಕೆಳಗೆ ‘ಆರ್​ಸಿಬಿಗೆ ಶುಭವಾಗಲು 10 ರೂಪಾಯಿ ಪಾವತಿಸಿ’ (Donate ₹10 for RCB Goodluck) ಎಂದು ಟ್ಯಾಗ್​ಲೈನ್ ಬರೆದಿದ್ದಾರೆ.

ಇದನ್ನೂ ಓದಿ: ಇವತ್ತಿನ ಪಂದ್ಯಕ್ಕೂ ಮುನ್ನವೇ RCBಗೆ ಬಿಗ್ ಶಾಕ್​.. ವಿಸ್ಫೋಟಕ ಬ್ಯಾಟರ್ ಆಡೋದಿಲ್ಲ

publive-image

ಬಳಿಕ ವಿರಾಟ್​ ಕೊಹ್ಲಿ ಫೋಟೋ ಜೊತೆ ಕ್ಯೂರ್​ ಕೋಡ್​ ಪ್ರಿಂಟ್​ ಔಟ್​ ಅನ್ನು ಜೆರಾಕ್ಸ್ ಮಾಡಿಸಿ, ನಗರದ ರಸ್ತೆ ರಸ್ತೆಗಳ ಬದಿಗಳಲ್ಲಿರುವ ಗೋಡೆ, ಕರೆಂಟ್ ಕಂಬ, ಆಟೋ, ಬಸ್​, ಕಾರು, ಮರಗಳಿಗೆ ಹೀಗೆ ಎಲ್ಲ ಕಡೆಗೂ ಅಂಟಿಸಿದ್ದಾನೆ. ಅಂಟಿಸಿರುವುದೇ ತಡ ಪೋಸ್ಟರ್​ ಅನ್ನು ನೋಡಿದ ಎಷ್ಟೋ ಆರ್​​ಸಿಬಿ ಅಭಿಮಾನಿಗಳು 10 ರೂಪಾಯಿ ಪೋನ್ ಪೇ ಮಾಡಿದ್ದಾರೆ. ಹೀಗೆ ಆರ್​ಸಿಬಿ ಫ್ಯಾನ್ಸ್​ ಪೋನ್ ಪೇ ಮಾಡಿದ ಹಣ ಒಂದಿನದಲ್ಲಿ ಒಟ್ಟು 1200 ರೂಪಾಯಿ ಆಗಿತ್ತು ಎಂದು ಸ್ವತಹ ಸಾರ್ಥಕ್​ ಸಚ್​ದೇವ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಾರ್ಥಕ್​ ಸಚ್​ದೇವ್, ನಿಜವಾಗಲೂ ಜನರು ಇದನ್ನು ಇಷ್ಟೊಂದು ಸೀರೀಯಸ್​ ಆಗಿ ತೆಗೆದುಕೊಳ್ಳುತ್ತಾರೆ ಎಂದು ಗೊತ್ತಿರಲಿಲ್ಲ. ತಮಾಷೆಗಾಗಿ ನಾನು ಇದನ್ನು ಕ್ರಿಯೇಟ್ ಮಾಡಿದ್ದೇ ಅಷ್ಟೇ. ಆರ್​ಸಿಬಿ ಶುಭವಾಗಲಿ ಎಂದು ಹೇಳುವ ಅಭಿಮಾನಿಗಳಿಂದ ಒಂದೇ ದಿನದಲ್ಲಿ 1200 ರೂಪಾಯಿ ನನ್ನ ಬ್ಯಾಂಕ್​ ಅಕೌಂಟ್​ಗೆ ಬಂದಿದೆ ಎಂದು ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 18 ವರ್ಷಗಳಿಂದ ಟ್ರೋಫಿ ಗೆಲ್ಲದಿದ್ದರೂ ಎಂದು ಮರೆಯದಂತಹ ಅಭಿಮಾನಿಗಳನ್ನು ಗಳಿಸಿರುವುದು ಟ್ರೋಫಿಗಿಂತ ದೊಡ್ಡದು ಎಂದು ಇಲ್ಲಿ ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment