/newsfirstlive-kannada/media/post_attachments/wp-content/uploads/2024/10/bb18.jpg)
ಈಗಂತೂ ಎಲ್ಲಾ ಭಾಷೆಯಗಳಲ್ಲಿ ಬಿಗ್​ಬಾಸ್​ನ​ದ್ದೇ ಹವಾ ಸೃಷ್ಟಿಯಾಗಿದೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕೆಲವೊಂದು ಭಾಷೆಯಲ್ಲಿ ಈಗಾಗಲೇ ಬಿಗ್​ಬಾಸ್​ ಸೀಸನ್​ ಮುಕ್ತಾಯಗೊಂಡಿದೆ. ಹೀಗೆ ಬಿಗ್​ಬಾಸ್​ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿಕೊಂಡು ಮುನ್ನುಗ್ಗುತ್ತಿದೆ.
/newsfirstlive-kannada/media/post_attachments/wp-content/uploads/2024/10/bb181.jpg)
ಈಗಾಗಲೇ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ನಿನ್ನೆ ಅಂದ್ರೆ ಭಾನುವಾರ ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಹೌದು, ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಆದರೆ ಬಿಗ್​ಬಾಸ್​ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್​ಗಳ ಜೊತೆಗೆ ಒಂದು ಕತ್ತೆ ಕೂಡ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದೆ.
/newsfirstlive-kannada/media/post_attachments/wp-content/uploads/2024/10/donkey.jpg)
ಹೌದು, ಈ ಹಿಂದೆ ಸೀಸನ್​ 10ರ ಬಿಗ್​ಬಾಸ್​ಗೆ ಚಾರ್ಲಿ ಪ್ರವೇಶ ಮಾಡಲಿದೆ ಎಂದು ಕಲರ್ಸ್​ ಕನ್ನಡ ವಾಹಿನಿ ಹೇಳಿಕೊಂಡಿತ್ತು. ಚಾರ್ಲಿ ದೊಡ್ಮನೆಗೆ ಬಂದೇ ಬರುತ್ತಾಳೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದರು. ಆದರೆ ಗ್ರ್ಯಾಂಡ್ ಓಪನಿಂಗ್ ಸಮಯದಲ್ಲಿ ಚಾರ್ಲಿ ಕಾಣಿಸಿಕೊಂಡಿರಲಿಲ್ಲ. ಚಾರ್ಲಿ ಎಂಟ್ರಿಗೆ ಅನಿಮಲ್​ ಬೋರ್ಡ್​​​​ಗೆ ಬಿಗ್​ಬಾಸ್​ ತಂಡ ಅಪೀಲ್​ ಮಾಡಿತ್ತು, ಆದರೆ ಅನಿಮಲ್​ ಬೋರ್ಡ್​​​​ನಿಂದ​ ಒಪ್ಪಿಗೆ ಸಿಕ್ಕಿರಲಿಲ್ಲ. ಆದರೆ ಈ ಬಾರಿಯ ಹಿಂದಿ ಬಿಗ್​ಬಾಸ್​ 18ಕ್ಕೆ ಅಚ್ಚರಿಯ ರೀತಿಯಲ್ಲಿ ಸ್ಪರ್ಧಿಯಾಗಿ ಕತ್ತೆ ಎಂಟ್ರಿ ಕೊಟ್ಟಿದೆ.
View this post on Instagram
ಸಲ್ಮಾನ್ ಖಾನ್ ನಡೆಸಿಕೊಡುತ್ತಿರೋ ಬಿಗ್​ಬಾಸ್​ ಸೀಸನ್​ 18 ಕಾರ್ಯಕ್ರಮದಲ್ಲಿ ಈ ಕತ್ತೆ ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆಯನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಬಿಗ್​ಬಾಸ್​ ಮನೆಗೆ ಬಂದ ‘ಗಧರಾಜ್’ ಕತ್ತೆಯನ್ನು ಕಂಡು ಮನೆ ಮಂದಿ ಫುಲ್​ ಶಾಕ್​ ಆಗಿದ್ದಾರೆ. ಸದ್ಯ ಹೊಸ ಪ್ರೋಮೋಗಳನ್ನು ನೋಡಿದ ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us