newsfirstkannada.com

Farmers Protest: ದೆಹಲಿಯಲ್ಲಿ ಅನ್ನದಾತರ ಕಹಳೆ.. ಬಿಜೆಪಿ ಲೋಕಸಭೆ ಗೆಲುವಿನ ಭರವಸೆಗೆ ಭಂಗ..!

Share :

Published February 14, 2024 at 6:33am

    ರಾಷ್ಟ್ರ ರಾಜಧಾನಿ ದೆಹಲಿಗೆ ಅನ್ನದಾತರ ದಿಗ್ಬಂಧನ

    ಸುದೀರ್ಘ ಪ್ರತಿಭಟನೆ ನಡೆಸಲು ರೈತರ ರಣತಂತ್ರ

    ಲೋಕ ಕದನದ ಹೊತ್ತಲ್ಲಿ ಎದ್ದ ರೈತರ ಆಕ್ರೋಶದ ಕಿಡಿ

ದಶದಿಕ್ಕುಗಳಲ್ಲೂ ರಾಷ್ಟ್ರರಾಜಧಾನಿಗೆ ದಿಗ್ಬಂಧನ ವಿಧಿಸಿರೋ ಹಸಿರು ಕಿಚ್ಚು, ಕೇಂದ್ರವನ್ನ ಸುಡಲು ಸಜ್ಜಾಗಿದೆ. ಲೋಕ ಕದನದ ಹೊತ್ತಲ್ಲಿ ಎದ್ದಿರೋ ಎದ್ದಿರೋ ರೈತರ ಆಕ್ರೋಶದ ಕಿಡಿ ಒಂದೆರಡು ದಿನಕ್ಕೆ ತಣ್ಣಗಾಗಲ್ಲ ಎಂಬ ಸೂಚನೆ ಕೊಟ್ಟಿದೆ. ತಿಂಗಳು ಗಟ್ಟಲೇ ದೆಹಲಿಯಲ್ಲಿ ಹೋರಾಟ ನಡೆಸಲು ಅನ್ನದಾತರು ಸಜ್ಜಾಗಿದ್ದಾರೆ. ಮೋದಿ ಸರ್ಕಾರಕ್ಕೆ ತಲೆನೋವು ತರಲು ರಣಕಹಳೆ ಮೊಳಗಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಮತ್ತೆ ಅನ್ನದಾತರ ಆಕ್ರೋಶದ ಕಿಚ್ಚು ಮತ್ತೆ ಧಗಧಗಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಹಸಿರು ಕ್ರಾಂತಿ ಮತ್ತೊಮ್ಮೆ ದಂಗೆ ಎದ್ದಿದೆ. ದೆಹಲಿಯ ಸುತ್ತಮುತ್ತದ ಸ್ಥಳಗಳಿಗೆ ಟ್ರ್ಯಾಕ್ಟರ್‌ಗಳಲ್ಲಿ ಧಾವಿಸಿ ರೈತರು ರಣಕಹಳೆ ಮೊಳಗಿಸಿದ್ದಾರೆ. ನಿರಂತರವಾಗಿ ಸರ್ಕಾರವನ್ನ ಕಾಡಲು ಸಜ್ಜಾಗಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ಕಿಸಾನ್ ಕ್ರಾಂತಿಯ ಕಹಳೆ ಮೊಳಗಿದೆ. ದೆಹಲಿ ಗಡಿಭಾಗದಲ್ಲೇ ಸಾವಿರಾರು ಅನ್ನದಾತರು ಮೊಕ್ಕಾಂ ಹೂಡಿದ್ದಾರೆ. ಇದೀಗ ಸುದೀರ್ಘವಾಗಿ ಕೇಂದ್ರ ಸರ್ಕಾರವನ್ನ ಕಾಡಲು ರೈತರು ಸಜ್ಜಾಗಿದ್ದಾರೆ. 2020ರಲ್ಲಿ ನಡೆದಿದ್ದ ರೈತರ ಹೋರಾಟ ಸುಮಾರು 13 ತಿಂಗಳ ಕಾಲ ನಡೆದಿತ್ತು. ಇದೀಗ ಮತ್ತೆ ದೆಹಲಿಯ ಗಡಿಯಲ್ಲಿ ವಾಸ್ತವ್ಯ ಹೂಡಿ ಲೋಕ ಕದನದ ಹೊತ್ತಲ್ಲಿ ಮೋದಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆಯಲು ರೈತರು ಸಜ್ಜಾಗಿದ್ದಾರೆ.

ದಶದಿಕ್ಕುಗಳಿಂದಲೂ ದೆಹಲಿಗೆ ಅನ್ನದಾತರು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ರಾಷ್ಟ್ರರಾಜಧಾನಿಯ ಗಡಿಯಲ್ಲಿ ಸಾವಿರಾರು ಟ್ರ್ಯಾಕ್ಟರ್‌ಗಳು ಎಂಟ್ರಿ ಕೊಟ್ಟಿವೆ.. ಮೋದಿ ಸರ್ಕಾರದ ವಿರುದ್ಧ ಸುಧೀರ್ಘ ಪ್ರತಿಭಟನೆ ನಡೆಸಲು ರೈತರು ಪ್ಲಾನ್‌ ರೂಪಿಸಿದ್ದಾರೆ. ಸುಮಾರು 6 ತಿಂಗಳುಗಳ ಕಾಲ ಹೋರಾಟಕ್ಕೆ ಅನ್ನದಾತರ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ 6 ತಿಂಗಳಿಗೆ ಬೇಕಾದ ದಿನಸಿ ಮತ್ತು ಡೀಸೆಲ್‌ನ ರೈತರು ತಂದಿದ್ದು, ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಅವಶ್ಯಕ ವಸ್ತುಗಳ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಜೊತೆಗೆ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಟೆಂಟ್​ ಹಾಕಿ ಅದರಲ್ಲೇ ವಾಸ್ತವ್ಯ ಹೂಡಲು ರೈತರು ಪ್ಲಾನ್​ ಮಾಡಿದ್ದಾರೆ. ದೆಹಲಿ ಚಲೋ ನಡೆಸ್ತಿರೋ ರೈತರಲ್ಲಿ ಪಂಜಾಬ್‌ನವರೇ ಹೆಚ್ಚಾಗಿದ್ದಾರೆ.. ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಪ್ರತಿಭಟನೆಗೆ ಬೇಕಾದ ಎಲ್ಲಾ ವಸ್ತುಗಳನ್ನೂ ಸಂಗ್ರಹಿಸಿ ತಂದಿದ್ದಾರೆ.. ಅಲ್ಲದೇ ಸರ್ಕಾರದ ವಿರುದ್ಧ ನಿರಂತವಾಗಿ ಹೋರಾಟ ಮಾಡೇ ಮಾಡ್ತೀವಿ ಅಂತ ಪಟ್ಟು ಹಿಡಿದಿದ್ದಾರೆ.

‘ತಾಳ್ಮೆ ಪರೀಕ್ಷಿಸಬೇಡಿ’

ಕೇಂದ್ರ ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಹೀಗಾಗಿ ಈ ಸರ್ಕಾರವನ್ನು ಪ್ರತಿಭಟನೆ ಮೂಲಕ ಮಣಿಸಬೇಕಿದೆ.. ಸುಮಾರು 6 ತಿಂಗಳ ಕಾಲ ಪ್ರತಿಭಟನೆಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳೂ ನಮ್ಮಲ್ಲಿವೆ. 2020ರಲ್ಲಿ 13 ತಿಂಗಳ ಕಾಲ ಪ್ರತಿಭಟನೆ ನಡೆಸಿ ಸರ್ಕಾರದ ಮನವಿಗೆ ಮಣಿದು ಪ್ರತಿಭಟನೆ ವಾಪಸ್ ತಂಗೊಂಡಿದ್ವಿ. ಆದ್ರೆ, ಈ ಸಲ ನಮ್ಮ ಬೇಡಿಕೆ ಈಡೇರುವವರೆಗೂ ನಾವು ವಾಪಸ್ ಹೋಗಲ್ಲ.

-ಹರ್ಭಜನ್ ಸಿಂಗ್, ಪಂಜಾಬ್ ರೈತ

ಲೋಕಕದನದ ಹೊತ್ತಲ್ಲಿ ಮೋದಿ ಸರ್ಕಾರಕ್ಕೆ ರೈತರ ಹೋರಾಟ ಬಿಸಿ ತಟ್ಟುವ ಸಾಧ್ಯತೆ ಇದೆ. ಹಿಂದಿ ಹಾರ್ಟ್‌ಲ್ಯಾಂಡ್‌ನಲ್ಲಿ ಎಂದ್ದಿರೋ ಹಸಿರು ಕ್ರಾಂತಿ ಬಿಜೆಪಿಯ ಗೆಲುವಿನ ಭರವಸೆಗೆ ಭಂಗ ತಂದಂತಿದೆ. ಇದೀಗ ಅನ್ನದಾತರ ಅಕ್ರೋಶವನ್ನ ತಟ್ಟಗಾಗಿಸಲು ಮೋದಿ ಸರ್ಕಾರ ಅದ್ಯಾವ ಮದ್ದನ್ನ ಹುಡುಕುತ್ತೆ ಅನ್ನೋದೆ ಮುಂದಿರೋ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Farmers Protest: ದೆಹಲಿಯಲ್ಲಿ ಅನ್ನದಾತರ ಕಹಳೆ.. ಬಿಜೆಪಿ ಲೋಕಸಭೆ ಗೆಲುವಿನ ಭರವಸೆಗೆ ಭಂಗ..!

https://newsfirstlive.com/wp-content/uploads/2024/02/farmers.jpg

Load More