/newsfirstlive-kannada/media/post_attachments/wp-content/uploads/2025/05/mango2.jpg)
ಮಾವಿನ ಹಣ್ಣು ಅಂದ್ರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಭಾರತದ ರಾಷ್ಟ್ರೀಯ ಹಣ್ಣು ಮಾವು. ಹಣ್ಣುಗಳ ರಾಜ ಎಂದೇ ಪ್ರಖ್ಯಾತಿ ಪಡೆದುಕೊಂಡಿದೆ ಮಾವಿನ ಹಣ್ಣು. ಸದ್ಯ ಈಗ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣಿಗೆ ಅತಿ ಹೆಚ್ಚು ಬೇಡಿಕೆ ಇದೆ. ಮಾವು ರುಚಿಕರವಾಗಿರುವುದರ ಜೊತೆಗೆ ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿದೆ. ಆದ್ರೆ ಈ ಮಾವಿನ ಹಣ್ಣನ್ನು ತಿಂದ ಮೇಲೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಲೇಬೇಡಿ.
ಇದನ್ನೂ ಓದಿ: ನಿಮಗಿದು ಗೊತ್ತೇ.. ಮಾವಿನ ಹಣ್ಣು ತಿನ್ನುವುದರಿಂದ ದೇಹದಲ್ಲಿ ಈ 3 ಸಮಸ್ಯೆ ಮಂಗಮಾಯ!
ಸಾಮಾನ್ಯವಾಗಿ ಸಾಕಷ್ಟು ಮಂದಿ ಹಣ್ಣು ತಿಂದ ಮೇಲೆ ನೀರು ಕುಡಿಯುತ್ತಾರೆ. ಆದ್ರೆ ಮಾವಿನ ಹಣ್ಣು ತಿಂದ ನಂತರ ತಂಪು ಪಾನೀಯಗಳನ್ನು ಕುಡಿಯಬಾರದಂತೆ.. ಏಕೆಂದರೆ ಮಾವಿನ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಮತ್ತು ತಂಪು ಪಾನೀಯದಲ್ಲಿರುವ ಕಾರ್ಬೊನಿಕ್ ಆಮ್ಲ ಸೇರಿ ದೇಹದಲ್ಲಿ ವಿಷವನ್ನು ಸೃಷ್ಟಿಸುತ್ತದೆ. ಇದರಿಂದ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಹೇಳಲಾಗಿದೆ. ಆದ್ರೆ ಮಾವಿನ ಹಣ್ಣನ್ನು ತಿಂದ ಬಳಿಕ ತಂಪು ಪಾನೀಯಗಳನ್ನು ಕುಡಿದರೇ ಸಾವು ಸಂಭವಿಸುತ್ತದೆ ಎಂಬುವುದಕ್ಕೆ ನಿಖರ ಮಾಹಿತಿ ಇಲ್ಲ.
ಇನ್ನೂ, ಮಾವಿನ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ತಿಳಿದುಕೊಳ್ಳಿ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್, ಫೋಲೇಟ್ ಮತ್ತು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸೆಲೆನಿಯಮ್, ರಂಜಕ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್, ಫೋಲೇಟ್ ಮತ್ತು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸೆಲೆನಿಯಮ್, ರಂಜಕ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೇ ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ