ಯುಗಾದಿ ಸಮೀಪದಲ್ಲೇ ಮತ್ತೆ ಮುನ್ನೆಲೆಗೆ ಬಂದ ಹಲಾಲ್ ಕಟ್​! ಪ್ರಮೋದ್ ಮುತಾಲಿಕ್ ಹೇಳಿದ್ದೇನು?

author-image
Gopal Kulkarni
Updated On
ಯುಗಾದಿ ಸಮೀಪದಲ್ಲೇ ಮತ್ತೆ ಮುನ್ನೆಲೆಗೆ ಬಂದ ಹಲಾಲ್ ಕಟ್​! ಪ್ರಮೋದ್ ಮುತಾಲಿಕ್ ಹೇಳಿದ್ದೇನು?
Advertisment
  • ಯುಗಾದಿ ಹೊಸ ತೊಡಕಿಗೆ ಹಿಂದೂಗಳ ಬಳಿ ಮಾಂಸ ಖರೀದಿ ಮಾಡಿ
  • ತುಮಕೂರಿನಲ್ಲಿ ಹಲಾಲ್ ಕಟ್ ಬಗ್ಗೆ ಮಾತನಾಡಿದ ಪ್ರಮೋದ್ ಮುತಾಲಿಕ್
  • ಮಾಂಸದ ಮೇಲೆ ಉಗುಳುವ, ಮೂತ್ರ ವಿಸರ್ಜಿಸುವವರಿಂದ ಖರೀದಿ ಬೇಡ

ಹಲಾಲ್ ಕಟ್ ಈ ಹಿಂದೊಮ್ಮೆ ರಾಜ್ಯದಲ್ಲಿ ದೊಡ್ಡದಾಗಿ ಸದ್ದು ಮಾಡಿದ ವಿಷಯ. ಈಗ ಮತ್ತೊಮ್ಮೆ ಅದು ಯುಗಾದಿ ಹಬ್ಬ ಸಮೀಪವಿರುವಾಗಲೇ ಮತ್ತೆ ಮುನ್ನೆಲೆಗೆ ಬಂದಿದೆ. ಯುಗಾದಿ ಹೊಸತೊಡಕಿಗೆ ಮುಸ್ಲಿಂ ಅಂಗಡಿಗಳಿಂದ ಮಾಂಸ ಖರೀದಿ ಮಾಡದಂತೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಿಂದೂಗಳಿಗೆ ಕರೆ ನೀಡಿದ್ದಾರೆ.

ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ಪ್ರಮೋದ್​ ಮುತಾಲಿಕ್, ಶ್ರೀರಾಮನವಮಿ ಮತ್ತು ಯುಗಾದಿಯನ್ನು ಹಲಾಲ್​ ಮುಕ್ತವಾಗಿ ಆಚರಣೆ ಮಾಡಿ. ಯುಗಾದಿ ಹೊಸ ವರ್ಷದ ಹಬ್ಬ, ಶಾಸ್ತ್ರೋಕ್ತ ವೈಜ್ಞಾನಿಕವಾದ ಅತ್ಯಂತ ಶ್ರೇಷ್ಠವಾದ ದಿನ, ಹೂವು, ಹಣ್ಣು ತರಕಾರಿ, ಮಾಂಸದ ಮೇಲೆ ಉಗುಳಿರುತ್ತಾರೆ ಮತ್ತು ಮೂತ್ರ ವಿಸರ್ಜನೆ ಮಾಡಿರುತ್ತಾರೆ ಇದನ್ನು ನೀವು ಖರೀದಿ ಮಾಡಬೇಡಿ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಪ್ರಯಾಣಿಕರೇ ಎಚ್ಚರ.. ನಿಮ್ಮಿಂದ ಒನ್ ಟು ತ್ರಿಬಲ್ ಹಣ ದೋಚುತ್ತಿದ್ದಾರೆ! ಅದು ಹೇಗೆ ಗೊತ್ತಾ?

ಶುದ್ಧವಾದ ಪವಿತ್ರವಾದ ಅಂಗಡಿಗಳಲ್ಲಿ ಖರೀದಿ ಮಾಡಿ ಹಬ್ಬ ಆಚರಣೆ ಮಾಡಿ. ಗೋಹಂತಕರು, ಗೋ ಭಕ್ಷಕರು, ಗೋಕಳ್ಳರ ಜೊತೆಗೆ ಹಬ್ಬವನ್ನು ಆಚರಣೆ ಮಾಡಬೇಡಿ. ಪಾಕಿಸ್ತಾನ್ ಜಿಂದಾಬಾದ್​ ಎಂದು ಘೋಷಣೆಗಳನ್ನು ಕೂಗುವ ದೇಶ ದ್ರೋಹಿಗಳಿಗೆ ಬೆಂಬಲ ಕೊಡುವಂತವರ ಜೊತೆಗೆ ವ್ಯಾಪಾರ ವ್ಯವಹಾರ ಬೇಡ. ಯುಗಾಗಿ ಹಬ್ಬವನ್ನು ಶುದ್ಧವಾಗಿ ಆಚರಣೆ ಮಾಡಿ. ಹಿಂದೂಗಳ ಅಂಗಡಿಗಳ ಜೊತೆಗೆ ವ್ಯವಹಾರ ಮಾಡಿ ಎಂದು ಹೇಳಿದ್ದು, ನಾವು ರಾಜ್ಯಾದ್ಯಂತ ಕರಪತ್ರ ಮೂಲಕ ಪ್ರಚಾರ ಮಾಡ್ತೀವಿ. ಹಲಾಲ್ ಮಾಂಸ ಬೇಡ, ಜಟಕ ಬೇಡ, ಜಟಕ ಮಾಂಸ ಖರೀದಿಸಿ ಎಂದು ಹೇಳುತ್ತೇವೆ. ಲವ್ ಜಿಹಾದ್​ಗೆ ಸಂಬಂಧಿಸಿದ್ದಂತೆ ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವವರ ಜೊತೆ ವ್ಯವಹಾರ ಬೇಡ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment