/newsfirstlive-kannada/media/post_attachments/wp-content/uploads/2025/02/KAABA-DOOR-1.jpg)
ಸೌದಿ ಅರೇಬಿಯಾದಲ್ಲಿರುವ ಮೆಕ್ಕಾದ ಕಾಬಾ ವಿಶ್ವದಾದ್ಯಂತ ಇರುವ ಮುಸ್ಲಿಂರ ಪವಿತ್ರ ಕ್ಷೇತ್ರ. ಆ ಒಂದು ಗೋಡೆಯನ್ನು ಮುಟ್ಟಿ ಬರಲು ವಿಶ್ವದಾದ್ಯಂತದಲ್ಲಿರುವ ಮುಸ್ಲಿಂಮರು ಒಂದು ಬಾರಿಯಾದರೂ ಹಜ್ ಯಾತ್ರೆ ಮಾಡಬೇಕು ಎಂದು ಕನಸು ಕಂಡಿರುತ್ತಾರೆ. ಅಷ್ಟು ಪವಿತ್ರ ಕ್ಷೇತ್ರ ಇದು ಮುಸ್ಲಿಂಮರಿಗೆ
ಮೆಕ್ಕಾಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದೇ ರೀತಿ ಕಾಬಾದ ದ್ವಾರಕ್ಕೂ ಕೂಡ ಇನ್ನೂ ದೊಡ್ಡ ಇತಿಹಾಸವಿದೆ. ಕಾಬಾದ ಈ ಭವ್ಯವಾದ ಮಸೀದಿಯ ಬಾಗಿಲನ್ನು ಬರೋಬ್ಬರಿ 280 ಕೆಜಿ ಬಂಗಾರದಿಂದ ಮಾಡಲಾಗಿದೆ. ಆರಂಭದಲ್ಲಿ ಈ ಕಾಬಾದ ದ್ವಾರವನ್ನು ಕಟ್ಟಿಗೆಯಿಂದಲೇ ಮಾಡಲಾಗಿತ್ತು.
ಹಜರತ್ ಇಬ್ರಾಹಿಂ ಅವರಿಂದ ಹಿಡಿದು ಇಂದಿನ ಸೌದಿ ಅರೇಬಿಯಾದ ರಾಜರವರರೆಗೂ ಕಾಬಾ ದ್ವಾರದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿದ್ದಾರೆ. ವಿವಿಧ ರಾಜರು ಮಹಾರಾಜರು ಕಾಲಕ್ಕೆ ತಕ್ಕಂತೆ ಕಾಬಾ ಮಸೀದಿಯ ದ್ವಾರವನ್ನು ಬದಲಾಯಿಸಿದ್ದಾರೆ. ಅಲ್ ಅರಬಿಯಾ ಹೇಳುವ ಪ್ರಕಾರ ಕಾಬಾವನ್ನು ನಿರ್ಮಾಣ ಮಾಡಿದ್ದು ಹಜರತ್ ಇಬ್ರಾಹಿಂ ಅದು ಕೂಡ 5 ಸಾವಿರ ವರ್ಷಗಳ ಹಿಂದೆ
ಇತಿಹಾಸಕಾರರು ಹೇಳುವ ಪ್ರಕಾರ ಕಾಬಾ ನಿರ್ಮಾಣಗೊಂಡಾಗ ಅದಕ್ಕೆ ದ್ವಾರ ಮತ್ತು ಮೇಲ್ಚಾವಣಿ ಎರಡು ಇರಲಿಲ್ಲ. ಕೇವಲ ಗೋಡೆಗಳನ್ನು ಮಾತ್ರ ಕಟ್ಟಲಾಗಿತ್ತು ಅಂತ ಇಬ್ನ್ ಹಿಶಾಮ್ ಅವರ ಆತ್ಮಕಥೆಯಲ್ಲಿ ಉಲ್ಲೇಖವಾಗಿದೆ. ಮೊದಲ ಬಾರಿ ಕಾಬಾದ ದ್ವಾರವನ್ನು ನಿರ್ಮಿಸಿದ್ದು ರಾಜ ಟುಬ್ಬಾ. ಅದು ಕೂಡ ಪ್ರವಾದಿ ಹಜರತ್ ಮೊಹಮ್ಮದ ಅವರ ಕಾಲಕ್ಕಿಂತಲೂ ಸಾಕಷ್ಟು ಮೊದಲು.
ಇದನ್ನೂ ಓದಿ:ಉಪ್ಪಿಟ್ಟು ಬೇಡ, ಚಿಕನ್ ಬಿರಿಯಾನಿ ಬೇಕೆಂದ ಅಂಗನವಾಡಿಯ ಮಗು; ಕಂದನ ಬೇಡಿಕೆಗೆ ಸ್ಪಂದಿಸಿದ ಸರ್ಕಾರ
ಅಲ್ ಅಜ್ರಾಕಿ ತಮ್ಮ ಪುಸ್ತಕ ಅಕ್ಬರ್ ಮಕ್ಕಾಹ್ ದಲ್ಲಿ ಬರೆದ ಪ್ರಕಾರ ರಾಜ ಟುಬ್ಬಾ ಮೊದಲ ಬಾರಿ ಕಾಬಾವನ್ನು ಸಂಪೂರ್ಣವಾಗಿ ಬಾಗಿ ಹಾಗೂ ಮೇಲ್ಚಾವಣಿಯನ್ನು ನಿರ್ಮಿಸಿದ. ಜುಹ್ರುಮ್ ಬುಡಕಟ್ಟು ಜನರಿಂದ ಈ ಒಂದು ದ್ವಾರ ನಿರ್ಮಾಣವಾಯ್ತು. ಆರಂಭದಲ್ಲಿ ಈ ದ್ವಾರ ಕಟ್ಟಿಗೆಯಲ್ಲಿಯೇ ನಿರ್ಮಾಣವಾಗಿತ್ತು. ನಂತರ ಇಸ್ಲಾಂ ಕಾಲ ಬಂದ ಮೇಲೆ ಇದು ಹಲವು ರೀತಿಯಲ್ಲಿ ಬದಲಾಯಿತು.
ಇದನ್ನೂ ಓದಿ:ಸೌಂದರ್ಯದ ಸಂಪ್ರದಾಯವನ್ನೇ ಮುರಿದ ಹುಡುಗಿ.. ಬೋಳು ತಲೆಯಲ್ಲಿಯೇ ಹಸೆಮಣೆ ಏರಿದ ವಧು; ವಿಡಿಯೋ ವೈರಲ್
ನಾಲ್ಕನೇ ಮುರುದಾ ಆಡಳತ ಕಾಲದಲ್ಲಿ ಈ ದ್ವಾರವನ್ನು ಮತ್ತೆ ನವೀಕರಿಸಲಾಯ್ತು ಸುಮಾರು 200 ಪೌಂಡ್ ಬೆಳ್ಳಿಯನ್ನು ಉಪಯೋಗಿಸಿ ಹೊಸ ದ್ವಾರವನ್ನು ನಿರ್ಮಾಣ ಮಾಡಲಾಯ್ತು. ಇದಾದ 300 ವರ್ಷಗಳ ಕಾಲಗಳ ಬಳಿಕ ಸೌದಿ ಅರೇಬಿಯಾದ ಸಂಸ್ಥಾಪಕ ರಾಜ ಅಬ್ದುಲ್ಜಿಜ್ ಅಲ್ ಸೌದ್ 1363ರಲ್ಲಿ ಮತ್ತೊಂದು ದ್ವಾರ ನಿರ್ಮಿಸಿದ. ಈಗೀರುವ ದ್ವಾರ ಅಲಗಾಡುತ್ತಿದೆ ಹೀಗಾಗಿ ಇದನ್ನು ಬದಲಾಯಿಸುವಂತೆ ಆದೇಶ ನೀಡಿದ. ಈತನ ಕಾಲದಲ್ಲಿ ಕಾಬಾದ ದ್ವಾರ ನಿರ್ಮಾಣಗೊಳ್ಳಲು ಸುಮಾರು 3 ವರ್ಷಗಳು ಬೇಕಾದವರು. ಇದು ಲೋಹ ಮತ್ತು ಕಟ್ಟಿಗೆಯ ಪಟ್ಟಿಗಳಿಂದ ಸಿದ್ಧಪಡಿಸಿ ಸಿಲ್ವರ್ ಹಾಗೂ ತಾಮ್ರದಿಂದ ಅಲಂಕಾರ ಮಾಡಿ ಆಮೇಲೆ ಅಳವಡಿಸಲಾಯ್ತು.
ಸದ್ಯ ಇರುವ ಬಾಗಿಲು ಸುಮಾರು 280 ಕೆಜಿ ಅಪ್ಪಟ ಚಿನ್ನದಿಂದ ಮಾಡಲಾಗಿದೆ. ಅಹ್ಮದ್ ಬಿನ್ ಇಬ್ರಾಹಿಂ ಬದ್ರ್ ಎಂಬ ಆಭರಣ ವ್ಯಾಪಾರಿ ಈ ಒಂದು ಬಾಗಿಲನ್ನು
ಸುಮಾರು 1398ನೇ ಇಸ್ವಿಯಲ್ಲಿ ಖಲೀದ್ ಬಿನ್ ಅಬ್ದುಲ್ ಅಜಿಜ್ ಆದೇಶದ ಮೇಲೆ ಈ ಬಂಗಾರದ ಬಾಗಿಲು ನಿರ್ಮಿಸಲಾಯ್ತು. ಈ ದ್ವಾರ ನಿರ್ಮಿಸಲು ಸುಮಾರು 12 ತಿಂಗಳುಗಳು ಬೇಕಾದವು ಎಂಬ ಬಗ್ಗೆ ಮಾಹಿತಿಗಳಿವೆ. ಇದಕ್ಕೆ ತಗುಲಿದ ವೆಚ್ಚು ಸುಮಾರು 1 ಕೋಟಿ 34 ಲಕ್ಷ 20 ಸಾವಿರ ಸೌದಿ ರಿಯಾಲ್ಸ್ ಎಂದು ಹೇಳಲಾಗುತ್ತದೆ.
ಕಾಬಾದ ಅತ್ಯಂತ ಪ್ರಾಚೀನ ಬಾಗಿಲನ್ನು ಸೌದಿ ಅರೇಬಿಯಾದ ಐತಿಹಾಸಿಕ ಹಾಗೂ ಪುರತಾತ್ವಶಾಸ್ತ್ರದ ಕಲಾಕೃತಿ ಎಂದು ಮನ್ನಣೆ ನೀಡಲಾಗುತ್ತದೆ. ಈ ಒಂದು ಕಾಬಾ ದ್ವಾರವನ್ನು ಅಬುದಾಬಿಯ ಲೌವ್ರೆ ಮ್ಯೂಸಿಯಂನಲ್ಇ ಕಾಯ್ದಿರಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ