ದೋಸೆ ವ್ಯಾಪಾರಿಯ ತಿಂಗಳ ಗಳಿಕೆ 6 ಲಕ್ಷ.. ಆದ್ರೂ ಟ್ಯಾಕ್ಸ್ ಕಟ್ಟಲ್ಲ ! ಸೋಷಿಯಲ್ ಮೀಡಿಯಾದಲ್ಲಿನ ಆಕ್ರೋಶ ಇಷ್ಟೊಂದು ವೈರಲ್ ಆಗಿದ್ದೇಕೆ?

author-image
Gopal Kulkarni
Updated On
ದೋಸೆ ವ್ಯಾಪಾರಿಯ ತಿಂಗಳ ಗಳಿಕೆ 6 ಲಕ್ಷ.. ಆದ್ರೂ ಟ್ಯಾಕ್ಸ್ ಕಟ್ಟಲ್ಲ ! ಸೋಷಿಯಲ್ ಮೀಡಿಯಾದಲ್ಲಿನ ಆಕ್ರೋಶ ಇಷ್ಟೊಂದು ವೈರಲ್ ಆಗಿದ್ದೇಕೆ?
Advertisment
  • ದೋಸೆ ವ್ಯಾಪಾರಿ ಗಳಿಕೆಯನ್ನು ಎಕ್ಸ್​​ನಲ್ಲಿ ಪ್ರಶ್ನಿಸಿದ ಪೋಸ್ಟ್ ವೈರಲ್
  • ತಿಂಗಳಿಗೆ 6 ಲಕ್ಷ ಗಳಿಸುವ ವ್ಯಾಪಾರಿಗೆ ಯಾಕಿಲ್ಲ ಆದಾಯ ತೆರಿಗೆ ?
  • ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ ವ್ಯಕ್ತಿಯ ಪೋಸ್ಟ್​ಗೆ ಪರ-ವಿರೋಧ ಪ್ರತಿಕ್ರಿಯೆ

ಮಧ್ಯಮ ವರ್ಗ ಜನರು ತೆರಿಗೆ ವಿಚಾರದಲ್ಲಿ ರೋಸಿ ಹೋಗಿದ್ದಾನೆ ಎಂಬುದು ಇತ್ತೀಚೆಗೆ ಸ್ಪಷ್ಟವಾಗಿ ಕಾಣುತ್ತಿದೆ. ಬೆಲೆ ಏರಿಕೆ, ಟ್ಯಾಕ್ಸ್ ಇವೆಲ್ಲವೂ ಹೆಚ್ಚು ಕಡಿಮೆ ಮಧ್ಯಮ ವರ್ಗದ ಜನರನ್ನು ಹೈರಾಣು ಮಾಡಿ ಹಾಕಿದೆ. ಇದರ ಪ್ರತಿಫಲನ ಎನ್ನುವಂತೆಯೇ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಮಾಡಿದ ಪೋಸ್ಟ್ ಈಗ ದೊಡ್ಡ ವೈರಲ್ ಆಗಿದೆ. ಅನೇಕರ ನೆಟ್ಟಿಗರು ಈ ಒಂದು ಪೋಸ್ಟ್​ನ್ನು ತುಂಬಾ ಗಂಭೀರವಾಗಿಯೇ ಪರಿಗಣಿಸಿದ್ದಾರೆ.

ನವೀನ್ ಕೊಪ್ಪರಮ್ ಎಂಬ ವ್ಯಕ್ತಿ ತಮ್ಮ ಮನೆಯ ಹತ್ತಿರ ಇರುವ ದೋಸೆ ವ್ಯಾಪಾರಿಯ ಬಗ್ಗೆ ಒಂದು ಪೋಸ್ಟ್​ ಮಾಡಿದ್ದಾರೆ. ನಮ್ಮ ಮನೆಯ ಪಕ್ಕದಲ್ಲಿ ಇರುವ ದೋಸೆ ವ್ಯಾಪಾರಿ ದಿನಕ್ಕೆ ಕನಿಷ್ಠ ಅಂದ್ರು 20 ಸಾವಿರ ರೂಪಾಯಿ ವ್ಯಾಪಾರ ಮಾಡುತ್ತಾನೆ, ಅಂದ್ರೆ ತಿಂಗಳಿಗೆ ಆರು ಲಕ್ಷ ರೂಪಾಯಿ ಎಲ್ಲ ಖರ್ಚು ತೆಗೆದರೂ ಅವನು ತಿಂಗಳಿಗೆ ಉಳಿಸುವುದು 3 ರಿಂದ 3.5 ಲಕ್ಷ ರೂಪಾಯಿ ಆದರೆ ಒಂದೇ ಒಂದು ರೂಪಾಯಿ ಟ್ಯಾಕ್ಸ್ ಕಟ್ಟುವುದಿಲ್ಲ. ನಾವು ತಿಂಗಳಿಗೆ 60 ಸಾವಿರ ರೂಪಾಯಿ ಗಳಿಸಿ ವರ್ಷಕ್ಕೆ 10 ಪರ್ಸೆಂಟ್ ಆದಾಯ ತೆರಿಗೆ ಕಟ್ಟಬೇಕು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜರ್ಮನ್, ಇಟಲಿ, ಫ್ರಾನ್ಸ್ ರಷ್ಯಾದ ಗೋಲ್ಡ್​ ರಿಸರ್ವ್​ ಮೀರಿಸುತ್ತೆ! ಭಾರತೀಯ ಮಹಿಳೆಯರ ಬಳಿ ಇರುವ ಚಿನ್ನ ಎಷ್ಟು ಗೊತ್ತಾ?

ನವೀನ್ ಕೊಪ್ಪರಮ ಈ ಒಂದು ಪೋಸ್ಟ್ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರ ಗಮನವನ್ನು ಸೆಳೆದಿದೆ. ಇದು ಸಂಬಳ ಹಾಗೂ ಸ್ವಂತ ಉದ್ಯಮ ಮಾಡುತ್ತಿರುವವರ ಆದಾಯ ಹಾಗೂ ಕಟ್ಟುತ್ತಿರುವ ಆದಾಯ ತೆರಿಗೆ ಬಗ್ಗೆ ಚರ್ಚೆಗಳು ಶುರುವಾಗಿವೆ. ಇದೇ ಪೋಸ್ಟ್​​ಗೆ ಪ್ರತಿಕ್ರಿಯಿಸಿರುವ ರೆಬೆಲ್​ ಎಂಬ ಎಕ್ಸ್ ಖಾತೆಯ ವ್ಯಕ್ತಿ ಬೇರೆ ಬೇರೆ ವೃತ್ತಿಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ.

publive-image

ಇದನ್ನು ತಿಳಿದುಕೊಳ್ಳುವ ಮುನ್ನ, ನಾವು ಮತ್ತೊಂದು ಕಡೆಯೂ ಗಮನಹರಿಸಬೇಕಿದೆ. ವೈದ್ಯರು, ವಕೀಲರು, ಟೀ ಶಾಪ್​ನವರು, ಗ್ಯಾರೇಜ್​ನವರು ವಾಣಿಜ್ಯ ಪ್ರದೇಶಗಳಲ್ಲಿನ ವ್ಯಾಪಾರಿಗಳು ಇವರ ಬಗ್ಗೆ ಏನು? ಅವರೆಲ್ಲರೂ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ತಮ್ಮ ಮನೆಗಳನ್ನು ನವೀಕರಿಸುತ್ತಾರೆ ಮತ್ತು ಹೊಸ ಹೊಸ ವಾಹನಗಳನ್ನು ಪ್ರತಿ ವರ್ಷ ಖರೀದಿಸುತ್ತಾರೆ, ಆದ್ರೆ ಒಂದೇ ಒಂದು ರೂಪಾಯಿ ಟ್ಯಾಕ್ಸ್ ಕಟ್ಟುವುದಿಲ್ಲ. ಹೇಗೆ ಮತ್ತು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:IPL ಹರಾಜಿನಲ್ಲಿ ನೀತಾ ಅಂಬಾನಿ ಸೆನ್ಸೇಷನ್; ಈ ವಿಚಾರಕ್ಕೆ ಹೆಚ್ಚು ಸುದ್ದಿಯಾದರು..!

ಇನ್ನು ಕಲಿ ಎಂಬ ಎಕ್ಸ್ ಖಾತೆಯನ್ನು ಹೊಂದಿರುವ ವ್ಯಕ್ತಿ ನವೀನ್ ಕೊಪ್ಪರಮ್ ಅವರ ಅಭಿಪ್ರಾಯವನ್ನು ವಿರೋಧಿಸಿದ್ದಾರೆ. ಅವರಿಗೆ ಕಾರ್ಪೋರೇಟ್​ ಕಂಪನಿಯವರ ಹಾಗೆ ಇನ್ಸೂರೆನ್ಸ್ ಇರುವುದಿಲ್ಲ. ಪಿಎಫ್​ನಂತಹ ಸೌಲಭ್ಯಗಳಿರುವುದಿಲ್ಲ. ನಿಯಮಿತವಾದ ಆದಾಯವೂ ಇರುವುದಿಲ್ಲ . ಅವರು 60 ಸಾವಿರ ರೂಪಾಯಿ ಗಳಿಸುವ ಸಾಫ್ಟವೇರ್ ಇಂಜನೀಯರ್​ ಕಟ್ಟುವ ಆದಾಯ ತೆರಿಗೆಗಿಂತ ಹೆಚ್ಚು ಜಿಎಸ್​ಟಿಯನ್ನು ಕಟ್ಟಿರುತ್ತಾರೆ. ದೇಶ ಏನಾದರೂ ಈಗ ನಡೆಯುತ್ತಿದೆ ಅಂದ್ರೆ ಅದು ಇಂತವರಿಂದಲೇ ಎಂದು ಹೇಳಿದ್ದಾರೆ.

ಒಟ್ಟಾರೆ ನವೀನ್ ಕೊಪ್ಪಾರಮ್ ಮಾಡಿದ ಒಂದು ಪೋಸ್ಟ್ ಈಗ ಪರ ವಿರೋಧದ ಚರ್ಚೆಯನ್ನು ಹುಟ್ಟು ಹಾಕಿವೆ. ಆದರೂ ಕೂಡ ಈ ಒಂದು ವಿಚಾರ ನೆಟ್ಟಿಗರ ಗಮನ ಸೆಳೆದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment