newsfirstkannada.com

IND vs ENG: ಯಶಸ್ವಿ ಜೈಸ್ವಾಲ್​ ಡಬಲ್​ ಸೆಂಚುರಿ ಧಮಾಕ.. ಇಡೀ ಊರಿಗೆ ಊರೇ ಪಟಾಕಿ ಸಿಡಿಸಿ ಸಂಭ್ರಮ

Share :

Published February 4, 2024 at 2:38pm

    ಯಂಗ್​ ಡೇರ್​ ಡೆವಿಲ್​ ಬ್ಯಾಟಿಂಗ್​ಗೆ ಕಂಗಾಲಾದ ಇಂಗ್ಲೆಂಡ್​ ಟೀಮ್

    ಜೈಸ್ವಾಲ್ ದ್ವಿಶತಕ, ಹುಟ್ಟೂರಲ್ಲಿ ಡಬಲ ಸೆಂಚುರಿ ಸಂಭ್ರಮ ಹೇಗಿತ್ತು.?

    ಛಲದಿಂದ ಹೋರಾಡಿದ ಮಗನ ಯಶಸ್ಸಿನ ಗುರಿ ನೆನೆದು ತಂದೆ ಭಾವುಕ

ವಿಶಾಖಪಟ್ಟಣಂನಲ್ಲಿ ಯಶಸ್ವಿ ಜೈಸ್ವಾಲ್​ ಬ್ಯಾಟ್​ನಿಂದ ಡಬಲ್​ ಸೆಂಚುರಿ ಸಿಡಿದಿದ್ದೇ ಸಿಡಿದಿದ್ದು.. ಉತ್ತರ ಪ್ರದೇಶದ ಭದೋಹಿಯಲ್ಲಿ ಅದೇನು ಸಂಭ್ರಮ ಅಂತೀರಾ. ಪಟಾಕಿ ಹಚ್ಚೋದೇನು, ಸ್ವೀಟ್​​ ಹಂಚೋರೇನು, ಊರ ಹುಡುಗ ವಿಶ್ವವೇ ತಿರುಗಿ ನೋಡುವಂತಾ ಸಾಧನೆ ಮಾಡಿದ್ರೆ ಸುಮ್ನಿರೋಕಾಗುತ್ತಾ..! ಹಾಗಾದ್ರೆ ಜೈಸ್ವಾಲ್​​ ಊರಲ್ಲಿ ಡಬಲ್​ ಸೆಂಚುರಿ ಸಂಭ್ರಮ ಹೇಗಿತ್ತು?.

ಹೈದ್ರಾಬಾದ್​​ನಲ್ಲಿ ಟೆಸ್ಟ್​ ಪಂದ್ಯ ಗೆದ್ದ ಅತ್ಯುತ್ಸಾಹದಲ್ಲಿ ವಿಶಾಖಪಟ್ಟಣಂನಲ್ಲಿ ಕಣಕ್ಕಿಳಿದ ಆಂಗ್ಲರಿಗೆ ಆಗಿದ್ದು ಆಘಾತ. ಏನೇನೋ ಗೇಮ್​ಪ್ಲಾನ್​ ಹಾಕ್ಕೊಂಡು ಕಣಕ್ಕಿಳಿದ ಇಂಗ್ಲೆಂಡ್​ನ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಬಿಡ್ತು. ಟಾಸ್​ ಸೋತು ಫೀಲ್ಡಿಂಗ್​ಗಿಳಿದ ಇಂಗ್ಲೆಂಡ್​ ತಂಡವನ್ನ, 22 ವರ್ಷದ ಹುಡುಗ ಬೆಚ್ಚಿ ಬೀಳಿಸಿಬಿಟ್ಟ.. ಈತನ ಆಟಕ್ಕೆ ಆಂಗ್ಲರ ತಂತ್ರ-ರಣತಂತ್ರವೆಲ್ಲಾ ಧೂಳಿಪಟ ಆಯ್ತು.

ವೈಜಾಗ್​​ನಲ್ಲಿ ಜೈಸ್ವಾಲ್​​ ಡಬಲ್​ ಸೆಂಚುರಿ ಧಮಾಕ.!

ಅಂದ್ಹಾಗೆ ಆನ್​ಫೀಲ್ಡ್​ನಲ್ಲಿ ಆಂಗ್ಲರನ್ನ ಕಾಡಿದ್ದು ಬೇರಾರೂ ಅಲ್ಲ.. 22 ವರ್ಷದ ಯಶಸ್ವಿ ಜೈಸ್ವಾಲ್​.. ಅಂದುಕೊಂಡಂತೆ ಟೀಮ್​ ಇಂಡಿಯಾದ ಉಳಿದೆಲ್ಲ ಬ್ಯಾಟರ್​​ಗಳನ್ನ ಇಂಗ್ಲೆಂಡ್​ ಬೌಲರ್ಸ್​ ಪೆವಿಲಿಯನ್​ಗೆ ಕಳುಹಿಸಿದ್ರು. ಆದ್ರೆ, ಈತನೊಬ್ಬನ ವಿಕೆಟ್​ ಕಬಳಿಸೋಕೆ ಪರದಾಡಿದ್ರು. ಈ ಯಂಗ್​ ಡೇರ್​ ಡೆವಿಲ್​ ಬ್ಯಾಟ್ಸ್​ಮನ್​ ಆಟಕ್ಕೆ ಇಡೀ ಇಂಗ್ಲೆಂಡ್​ ತಂಡ ಕಂಗಾಲಾಗಿ ಹೋಯ್ತು.

ವೈಜಾಗ್​​ನಲ್ಲಿ ದ್ವಿಶತಕ, ಭದೋಹಿಯಲ್ಲಿ ಸಂಭ್ರಮ.!

ವಿಶಾಖಪಟ್ಟಣಂನಲ್ಲಿ 19 ಬೌಂಡರಿ, 7 ಸೊಗಸಾದ ಸಿಕ್ಸರ್​ ಸಹಿತ ಯಶಸ್ವಿ ಜೈಸ್ವಾಲ್​​ 290 ಎಸೆತಗಳಲ್ಲಿ 209 ರನ್​ಗಳ ಸಾಲಿಡ್​ ಇನ್ನಿಂಗ್ಸ್​ ಕಟ್ಟಿ ಮಿಂಚಿದ್ರು. ಮೊದಲ ದಿನದಾಟದಲ್ಲಿ ಸಿಕ್ಸರ್​ ಸಿಡಿಸಿ ಶತಕ ಪೂರೈಸಿದ್ದ ಜೈಸ್ವಾಲ್​, 2ನೇ ದಿನದಾಟದಲ್ಲೂ ಬೌಂಡರಿ ಚಚ್ಚಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ರು. ಇದ್ರ ಬೆನ್ನಲ್ಲೇ, ಉತ್ತರ ಪ್ರದೇಶದ ಭದೋಹಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಇಡೀ ಊರೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.

ದಿಗ್ಗಜರ ನೆನಪಿಸಿದ ಜೈಸ್ವಾಲ್,​ ತಂದೆ ಭಾವುಕ.!

ವೈಜಾಗ್​ನಲ್ಲಿ ದಿಗ್ಗಜರೇ ನೆನಪಾಗುವಂತೆ ಯಶಸ್ವಿ ಜೈಸ್ವಾಲ್​ ಬ್ಯಾಟ್​ ಬೀಸಿದ್ರು. ಕ್ರಿಕೆಟ್​ ಫ್ಯಾನ್ಸ್​, ಫಿದಾ ಆದ್ರು. ಫ್ಯಾನ್ಸ್​ ಇಷ್ಟು ಸಂತೋಷವಾಗಿರುವಾಗ ಹೆತ್ತ ತಂದೆ ಇನ್ನೆಷ್ಟು ಖುಷಿಯಾಗಿರಬೇಡ. ಕಿತ್ತು ತಿನ್ನುವ ಬಡತನದ ನಡುವೆ ಛಲದಿಂದ ಹೋರಾಡಿ, ಯಶಸ್ಸಿನ ಗುರಿ ಮುಟ್ಟಿದ್ದ ಮಗನ ನೆನೆದ ತಂದೆ ಭಾವುಕರಾದ್ರು..

ತುಂಬಾ ಖುಷಿಯಾಗ್ತಿದೆ. ಎಲ್ಲ ನಗರವಾಸಿಗಳು ಖುಷಿಯಾಗಿದ್ದಾರೆ. ನಮ್ಮ ಜಿಲ್ಲೆ ಹಾಗೂ ನಗರದ ಹೆಸರನ್ನ ಬೆಳಗಿಸಲಿ ಅನ್ನೋದು ನಮ್ಮ ಇಚ್ಚೆ.

ಭುಪೇಂದ್ರ ಜೈಸ್ವಾಲ್​​, ಯಶಸ್ವಿ ತಂದೆ

ಜೈಸ್ವಾಲ್​​ ಸಾಧನೆಯ ಬಗ್ಗೆ ಬಾಲ್ಯದ ಕೋಚ್ ಹೆಮ್ಮೆಯ ಮಾತು​.!

ಸಾಧಿಸಲು ಹೊರಟವನಿಗೆ ಸ್ಪಷ್ಟವಾದ ಗುರಿ ಇರಬೇಕು ಮತ್ತು ಸರಿಯಾದ ಗುರು ಇರಬೇಕು. ಆದ್ರೆ, ಕ್ರಿಕೆಟರ್​ ಆಗೋ​ ಕನಸು ಕಂಡ ಯಶಸ್ವಿ ಜೈಸ್ವಾಲ್​ಗೆ ಅಂದು ಗುರಿ ಇತ್ತು. ಆದ್ರೆ ಗುರು ಇರಲಿಲ್ಲ. ಆಗ ಸಿಕ್ಕಿದ್ದೇ ಜ್ವಾಲಾ ಸಿಂಗ್​. ಜೈಸ್ವಾಲ್​ರನ್ನ ತಿದ್ದಿ ತೀಡಿ ಇಂಟರ್​ ನ್ಯಾಷನಲ್​​ ಕ್ರಿಕೆಟರ್​ ಆಗಿ ರೂಪಿಸಿದ್ದೇ ಜ್ವಾಲಾ ಸಿಂಗ್​.. ಶಿಷ್ಯ ಟೆಸ್ಟ್​ ಕ್ರಿಕೆಟ್​ನಲ್ಲಿ ಡಬಲ್​ ಸೆಂಚುರಿ ಸಿಡಿಸಿದಾಗ ಗುರುವಿಗಾದ ಖುಷಿ ಅಷ್ಟಿಷ್ಟಲ್ಲ.

ಕೋಚ್​​ಗಳಿಗೆ ಅವರ ಆಟಗಾರ ಭಾರತದ ಪರ ಆಡಬೇಕು ಅನ್ನೋ ಆಸೆಯಿರುತ್ತೆ. ಅದಕ್ಕಾಗಿಯೇ ಕಷ್ಟ ಪಟ್ಟು ಕೆಲಸ ಮಾಡ್ತೀವಿ. ಈಗ ಯಶಸ್ವಿ ಜೈಸ್ವಾಲ್​, ದಾಖಲೆಗಳನ್ನ ಬರೀತಾ ಇದ್ದಾನೆ. ನನಗೆ ತುಂಬಾ ಖುಷಿಯಾಗ್ತಿದೆ. ಆತ ತುಂಬಾ ಪರಿಶ್ರಮ ಪಟ್ಟಿದ್ದ. ಈಗ ನಿರೀಕ್ಷೆಗೂ ಮೀರಿ ಪರ್ಫಾಮ್​ ಮಾಡ್ತಿದ್ದಾನೆ.

ಜ್ವಾಲಾ ಸಿಂಗ್​, ಬಾಲ್ಯದ ಕೋಚ್​

ಟೆಸ್ಟ್​ ಕ್ರಿಕೆಟ್​​ನಲ್ಲಿ ಮಾತ್ರವಲ್ಲ.. ಯಾವಾಗ್ಲೂ ಅಷ್ಟೇ ಬಿಗ್​ ಸ್ಕೋರ್​​ಗಳಿಸೋದೆ ಜೈಸ್ವಾಲ್​ ಗುರಿಯಂತೆ. ಸ್ಕೂಲ್​ ಲೆವೆಲ್​​ ಕ್ರಿಕೆಟ್​​ ನಿಂದ ಹಿಡಿದು, ಇಂಟರ್​ನ್ಯಾಷನಲ್​ ಲೆವೆಲ್​ಗೆ ಜೈಸ್ವಾಲ್​ ಸಾಧನೆಯ ಕಥೆಯನ್ನ ಕೋಚ್​ ಹೇಳಿದ್ದಾರೆ ನೋಡಿ..

ಚಿಕ್ಕ ವಯಸ್ಸಿನಿಂದಲೂ ಆತ ದೊಡ್ಡ ಇನ್ನಿಂಗ್ಸ್​ಗಳನ್ನ ಆಡಿದ್ದಾನೆ. ಸ್ಕೂಲ್​ ಕ್ರಿಕೆಟ್​ನಲ್ಲಿ 300 ರನ್​ ಹೊಡೆದಿದ್ರು. ಮುಂಬೈ ಅಂಡರ್​ 16 ಸೆಲೆಕ್ಷನ್​​ ಪಂದ್ಯದಲ್ಲಿ 1 ದಿನದಲ್ಲಿ 274 ರನ್​ ಹೊಡೆದಿದ್ದ. ಆ ಬಳಿಕ ಮುಂಬೈ ಅಂಡರ್-16ನಲ್ಲಿ 200 ಹೊಡೆದ. ಮುಂಬೈ ಅಂಡರ್​​ 19ನಲ್ಲಿ 200, ಮುಂಬೈ ಅಂಡರ್​ 23ರಲ್ಲಿ 200, ರಣಜಿ ಟ್ರೋಫಿಯಲ್ಲಿ 180, ದುಲಿಪ್ ಟ್ರೋಫಿಯಲ್ಲಿ 200, ಇರಾನಿ ಟ್ರೋಫಿ 200 ರನ್​ ಹೊಡೆದಿದ್ದಾನೆ. ಇವತ್ತು ಟೆಸ್ಟ್​ ಕ್ರಿಕೆಟ್​​ನಲ್ಲೂ 200 ರನ್​ ಹೊಡೆದಿದ್ದಾನೆ.

ಜ್ವಾಲಾ ಸಿಂಗ್​, ಬಾಲ್ಯದ ಕೋಚ್​

ಕ್ರಿಕೆಟ್​​ ಆಗೋ ಕನಸು ಕಂಡ ಯಶಸ್ವಿ ಜೈಸ್ವಾಲ್​, ತನ್ನ ಮುಂದೆ ಯಾವುದೇ ಕಷ್ಟಗಳಿಗೂ ಬೆನ್ನು ತೋರಿಸ್ಲೇಯಿಲ್ಲ. ಪ್ರತಿಯೊಂದು ಹಿನ್ನೆಡೆ, ಅವಮಾನ, ಸೋಲನ್ನ ಯಶಸ್ಸಿನೆಡೆಗೆ ಸಾಗುವ ಮೆಟ್ಟಿಲಿಲಾಗಿಸಿಕೊಂಡ್ರು. ಛಲದ ಹೋರಾಟ, ಕಠಿಣ ಪರಿಶ್ರಮದಿಂದ ಚಿಕ್ಕ ವಯಸ್ಸಿಗೆ ಜೈಸ್ವಾಲ್​, ದಿಗ್ಗಜರ ಸಾಲು ಸೇರಿದ್ದಾರೆ. ಜೈಸ್ವಾಲ್​ ಅಬ್ಬರ ಮುಂದೆ ಹೀಗೆ ಮುಂದುವರೆಯಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs ENG: ಯಶಸ್ವಿ ಜೈಸ್ವಾಲ್​ ಡಬಲ್​ ಸೆಂಚುರಿ ಧಮಾಕ.. ಇಡೀ ಊರಿಗೆ ಊರೇ ಪಟಾಕಿ ಸಿಡಿಸಿ ಸಂಭ್ರಮ

https://newsfirstlive.com/wp-content/uploads/2024/02/JAISWAL_HOME_TOWN.jpg

Load More