ಸ್ಟಾರ್​ ಬ್ಯಾಟರ್​​ ಶ್ರೇಯಸ್​​ ಅಯ್ಯರ್​ಗೆ ಡಬಲ್​ ಆಘಾತ.. ಗೌತಮ್​ ಗಂಭೀರ್​ ಕಠಿಣ ನಿರ್ಧಾರ!

author-image
Ganesh Nachikethu
Updated On
ಶತಕ ಸಿಡಿಸಿದ ಬಳಿಕ ಮಾತಾಡಿದ ಶ್ರೇಯಸ್​ ಅಯ್ಯರ್​​.. ವಿರಾಟ್​​​ ಕೊಹ್ಲಿ ಬಗ್ಗೆ ಏನಂದ್ರು..?
Advertisment
  • ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಈಗಿನಿಂದಲೇ ತಯಾರಿ!
  • ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆಗೆ ಗಂಭೀರ್​​​, ರೋಹಿತ್​ ಕಸರತ್ತು
  • ಟೀಮ್​ ಇಂಡಿಯಾದ ಸ್ಟಾರ್​ ಆಟಗಾರನಿಗೆ ಡಬಲ್​ ಶಾಕ್​​ ಸಾಧ್ಯತೆ

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಕ್ರಿಕೆಟ್​ ತಂಡವು 0-2 ಅಂತರದಲ್ಲಿ ಸೋಲು ಅನುಭವಿಸಿದೆ. ಈ ಸೋಲು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಮುನ್ನ ಭಾರತ ತಂಡಕ್ಕೆ ಭಾರೀ ಹಿನ್ನಡೆ ಮಾಡಿದೆ. ಮುಂದೆ 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. ಅದಕ್ಕೂ ಮುನ್ನ ಭಾರತ ಕ್ರಿಕೆಟ್​ ತಂಡ ಆಡುವುದು ಕೇವಲ ಏಕದಿನ ಪಂದ್ಯಗಳು ಮಾತ್ರ.

ಭಾರತ ತಂಡವು 2025ರ ಜನವರಿಯಲ್ಲಿ ಇಂಗ್ಲೆಂಡ್‌ ಏಕದಿನ ಸರಣಿ ಆಡಲಿದೆ. ಹಾಗಾಗಿ ಇದಾದ ಬೆನ್ನಲ್ಲೇ ನಡೆಯಲಿರೋ ಚಾಂಪಿಯನ್ಸ್‌ ಟ್ರೋಫಿಗೆ ಬಲಿಷ್ಠ ಟೀಮ್​ ಇಂಡಿಯಾ ತಯಾರು ಮಾಡಬೇಕಿದೆ. ಸ್ಟಾರ್​ ಆಟಗಾರರೇ ಬ್ಯಾಟಿಂಗ್​ನಲ್ಲಿ ವೈಫಲ್ಯರಾಗಿದ್ದು, ಬಲಿಷ್ಠ ತಂಡ ಕಟ್ಟುವುದು ಹೇಗೆ? ಅನ್ನೋ ಚಿಂತೆ ಕ್ಯಾಪ್ಟನ್​​ ರೋಹಿತ್‌ ಶರ್ಮಾ ಮತ್ತು ಹೆಡ್‌ ಕೋಚ್‌ ಗೌತಮ್‌ ಗಂಭೀರ್​ ಅವರಿಗೆ ಕಾಡುತ್ತಿದೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆದಾರರು ಕಸರತ್ತು ನಡೆಸುತ್ತಿದ್ದಾರೆ. ಕ್ಯಾಪ್ಟನ್​ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಮತ್ತು ಜಸ್‌ಪ್ರೀತ್‌ ಬುಮ್ರಾ ಅವರ ಸ್ಥಾನಗಳು ಪಕ್ಕಾ ಆಗಿವೆ. ಉಳಿದ ಆಟಗಾರರಿಗಾಗಿ ಇನ್ನೂ ಸ್ಪರ್ಧೆ ಮುಂದುವರಿದಿದೆ. ವೈಸ್​ ಕ್ಯಾಪ್ಟನ್​ ಆಗಿರೋ ಶುಭ್ಮನ್​ ಗಿಲ್​ ಕೂಡ ಆಡುವುದು ಪಕ್ಕಾ.

publive-image

ಅಯ್ಯರ್​​ಗೂ ಕೊಕ್​​ ನೀಡೋ ಸಾಧ್ಯತೆ!

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌. ಇವರು ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಇದರೊಂದಿಗೆ ಟಿ20 ತಂಡದಲ್ಲೂ ಸ್ಥಾನ ಕಳೆದುಕೊಂಡಿದ್ದಾರೆ. ಮುಂಬರೋ ಟೆಸ್ಟ್‌ ಸರಣಿಗಳಲ್ಲಿ ಭಾರತ ತಂಡದ ಪರ ಶ್ರೇಯಸ್‌ ಅಯ್ಯರ್‌ ಕಳಪೆ ನೀಡಿದ್ರೆ, ಪರ್ಮನೆಂಟ್​ ಆಗಿ ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ. ಟಿ20 ಮತ್ತು ಏಕದಿನದಲ್ಲೂ ಸ್ಥಾನ ಸಿಗದಿರುವುದು ಅಯ್ಯರ್​ಗೆ ಡಬಲ್​ ಆಘಾತ ಆಗಿದೆ. ಗೌತಮ್​ ಗಂಭೀರ್​ ಕೂಡ ಉತ್ತಮ ಪ್ರದರ್ಶನ ನೀಡಿದ್ರೆ ಮಾತ್ರ ಶ್ರೇಯಸ್​ ಅಯ್ಯರ್​ ಅವರನ್ನು ಆಯ್ಕೆ ಮಾಡಲಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವಿಕೆಟ್‌ ಕೀಪರ್‌ಗಳಾಗಿ ಕೆಎಲ್‌ ರಾಹುಲ್‌ ಮತ್ತು ರಿಷಭ್‌ ಪಂತ್‌ ಆಡಿದ್ದರು. ಕೆಎಲ್‌ ರಾಹುಲ್‌ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದು, ಮೂರನೇ ಪಂದ್ಯದಲ್ಲಿ ಅವರ ಬದಲಿಗೆ ರಿಷಭ್‌ ಪಂತ್‌ ಅವರನ್ನು ಆಡಿಸಲಾಯಿತು. ಸರಣಿಯಲ್ಲೂ ಕೆಎಲ್‌ ರಾಹುಲ್‌ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಹಾಗಾಗಿ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರು ಸಂಜು ಸ್ಯಾಮ್ಸನ್ ಅವರನ್ನು ಏಕದಿನ ಸರಣಿಗೆ ಆಯ್ಕೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕೆ.ಎಲ್​ ರಾಹುಲ್​​, ಪಂತ್​ಗೆ ಗಂಭೀರ್​ ಬಿಗ್​ ಶಾಕ್​​.. ಸ್ಟಾರ್​ ಆಟಗಾರನಿಗೆ ಕೋಚ್​​ ಮಣೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment