Advertisment

ಕಾರು ಡ್ರೈವರ್​​ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!

author-image
Veena Gangani
Updated On
ಕಾರು ಡ್ರೈವರ್​​ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!
Advertisment
  • ಇದು ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
  • ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದ ಜೋಡಿ
  • ಮದುವೆಯಾದ 1 ವರ್ಷಕ್ಕೆ ಪ್ರಾಣವನ್ನೇ ಕಳೆದುಕೊಂಡ ಮಹಿಳೆ

ಬೆಂಗಳೂರು: ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಜೀವಬಿಟ್ಟಿರೋ ಘಟನೆ ಹೊರವಲಯದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಪಂದನಾ (24) ಮೃತ ಮಹಿಳೆ.

Advertisment

ಇದನ್ನೂ ಓದಿ: ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿಯಿಂದ ಕೇಸ್; ಈಗ ಪೋಕ್ಸೋ ಕೇಸ್​ ದಾಖಲು

ಮೃತ ಸ್ಪಂದನಾ ಬೃಂದಾವನ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದಾಗ ಇನ್​ಸ್ಟಾಗ್ರಾಮ್​ನಲ್ಲಿ ಅಭಿಷೇಕ್ ಎಂಬಾತನ ಪರಿಚಯ ಆಗಿತ್ತು. ಈ ಅಭಿಷೇಕ್​ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಬಳಿಕ ಪೋಷಕರ ವಿರೋಧದ ನಡುವೆಯೂ ಸ್ಪಂದನಾ ಹಾಗೂ ಅಭಿಷೇಕ್ ರಿಜಿಸ್ಟ್ರರ್ ಮ್ಯಾರೇಜ್ ಆಗಿದ್ದರಂತೆ. ಮದುವೆಯಾದ ಬಳಿಕ ಸ್ಪಂದನಾಗೇ ಅಭಿಷೇಕ್​ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಟಾರ್ಚರ್ ನೀಡುತ್ತಿದ್ದರು ಎಂಬ ಆರೋಪ ಇದೆ.

publive-image

ಅಭಿಷೇಕ್​ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರ ಬಗ್ಗೆ ಸ್ಪಂದನಾ ತಂದೆಗೆ ಹೇಳಿದ್ದಳಂತೆ. ಬಳಿಕ 5 ಲಕ್ಷ ಹಣವನ್ನು ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರಂತೆ. ಮತ್ತೆ ನಿನ್ನೆ ತಂದೆಗೆ ಕರೆ ಮಾಡಿ ಅತ್ತೆ ಮಾತನ್ನ ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಅಂಥ ಕಣ್ಣೀರಿಟ್ಟಿದ್ದಳಂತೆ ಸ್ಪಂದನಾ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ನಿಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳು ಪ್ರಾಣ ಬಿಟ್ಟಿದ್ದಳು.

Advertisment

publive-image

ಇನ್ನೂ, ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಸ್ಪಂದನಾ ಬಾಡಿ ಇತ್ತಂತೆ. ಬಳಿಕ ಯಾರಿಗೂ ಮಾಹಿತಿ ಕೊಡದೇ ತಾವೇ ಮೃತದೇಹವನ್ನು ಇಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರಂತೆ. ಅಲ್ಲದೇ, ಸ್ಪಂದನಾ ಮೈ ಮೇಲೆ ಗಾಯದ ಗುರುತುಗಳಿವೆ ಅನ್ನೋ ಆರೋಪ ಕೂಡ ಇದೆ. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದಾದ ಬಳಿಕ ಸ್ಪಂದನಾ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು. ಈ ಘಟನೆ ಸಂಬಂಧ ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment