Advertisment

ವರದಕ್ಷಿಣೆ ಕಿರುಕುಳ.. 4 ತಿಂಗಳ ಗರ್ಭಿಣಿ ಸೊಸೆಯನ್ನು ಕೊಂದು ಸುಟ್ಟು ಹಾಕಿದ ಅತ್ತೆ-ಮಾವ

author-image
AS Harshith
Updated On
ವರದಕ್ಷಿಣೆ ಕಿರುಕುಳ.. 4 ತಿಂಗಳ ಗರ್ಭಿಣಿ ಸೊಸೆಯನ್ನು ಕೊಂದು ಸುಟ್ಟು ಹಾಕಿದ ಅತ್ತೆ-ಮಾವ
Advertisment
  • ಗರ್ಭಿಣಿ ಹೆಂಡತಿಯ ಕೈ-ಕಾಲು ಕತ್ತರಿಸಿದ ಗಂಡ
  • ಯುವತಿ ಪೋಷಕರು ಬರುವ ಮುನ್ನ ಚಿತೆಗೆ ಬೆಂಕಿ
  • ಚಿತೆಯಲ್ಲಿದ್ದ ಶವವನ್ನು ಹೊರತೆಗೆದ ಯುವತಿ ಪೋಷಕರು 

ವರದಕ್ಷಿಣೆಗಾಗಿ ತಾಳಿ ಕಟ್ಟಿದ ಗಂಡನೇ ತನ್ನ ಹೆಂಡತಿಯ ಕೈ-ಕಾಲುಗಳನ್ನು ಕತ್ತರಿಸಿ ಕೊಲೆ ಮಾಡಿದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಸೊಸೆಯನ್ನು ಕೊಲೆ ಮಾಡಲು ಮಗನ ಜೊತೆಗೆ ಅತ್ತೆ-ಮಾವ ಕೂಡ ಸೇರಿರುವುದು ಬೆಳಕಿಗೆ ಬಂದಿದೆ.

Advertisment

ಮಧ್ಯಪ್ರದೇಶದ ತಂದಿ ಖುರ್ದ್​​​ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಲಕ್ಷ್ಮಣಪುರ ಗ್ರಾಮದ ನಿವಾಸಿ ರಾಮಪ್ರಸಾದ್​ ತನ್ವಾರ್ ಎಂಬವರು ತನ್ನ 23 ವರ್ಷದ ರೀನಾ ಎಂಬಾಕೆಯನ್ನು ​​ ತಂದಿ ಖುರ್ದ್​​​ ಗ್ರಾಮದ ಮಿಥುನ್​​ ತನ್ವಾರ್​ ಎಂಬಾತನಿಗೆ ಮದ್ವೆ ಮಾಡಿಕೊಟ್ಟಿದ್ದರು. ಐದು ವರ್ಷದ ಹಿಂದೆ ಇವರಿಬ್ಬರ ವಿವಾಹ ನಡೆದಿತ್ತು. ಬಳಿಕ ರೀನಾಗೆ ಒಂದು ವರ್ಷದ ಮಗಳು ಮತ್ತು ಸದ್ಯ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ವರದಕ್ಷಿಣೆ ಆಸೆಗೆ ಬಿದ್ದ ಗಂಡ ತನ್ನ ತಾಯಿ ಜೊತೆಗೆ ಸೇರಿಕೊಂಡು ಹೆಂಡತಿಯನ್ನು ಬರ್ಬರವಾಗಿ ಕೊಂದಿದ್ದಾನೆ.

ಇದನ್ನೂ ಓದಿ: ಚೂರಿ ಜೊತೆಗೆ ಲೇಡೀಸ್​ ಪಿಜಿಗೆ ನುಗ್ಗಿದ ಯುವಕ.. ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಎಸ್ಕೇಪ್

publive-image

ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಮನೆಯ ಬಳಿಯೇ ಸುಟ್ಟು ಹಾಕಿದ್ದಾನೆ. ಈ ವಿಚಾರ ತಿಳಿದಂತೆ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ರೀನಾ ಪೋಷಕರು ಚಿತೆಯ ಬೆಂಕಿ ನಂದಿಸಿ ಅರ್ಧ ಸುಟ್ಟ ಮೃತದೇಹವನ್ನು ಹೊರತೆಗೆದಿದ್ದಾರೆ. ಅಲ್ಲಿನ ಗ್ರಾಮಸ್ಥರ ನೆರವಿನಿಂದ ಹೊಳೆಯ ನೀರನ್ನು ತಂದು ಬೆಂಕಿ ನಂದಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಂತೆ ರೀನಾ ಗಂಡ ಮತ್ತು ಅತ್ತೆ ರಾಜುಬಾಯಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

Advertisment

ಇದನ್ನೂ ಓದಿ: ದೇವಸ್ಥಾನದ ಮೇಲೆ ಬಿದ್ದ ಮರ, ಕುಸಿದು ಬಿದ್ದ ಸರ್ಕಾರಿ ಶಾಲಾ ಗೋಡೆ.. ಮಳೆಯಿಂದಾಗಿ ಸಾವಿರಾರು ಸಮಸ್ಯೆ

ರೀನಾಳ ಗಂಡ ಮತ್ತು ಮಾವ ಇತ್ತೀಚೆಗೆ 7 ಲಕ್ಷ ರೂಪಾಯಿಗೆ ಭೂಮಿಯೊಂದನ್ನು ಖರೀದಿಸಿದ್ದರು. ಅದರ ಸಾಲ ತೀರಿಸಲು ಚಿನ್ನಾಭರಣ ಮತ್ತು 1.5 ಲಕ್ಷ ರೂಪಾಯಿ ನೀಡಿದ್ದರು.

ಇದನ್ನೂ ಓದಿ: ಪ್ರೇಮಿಗಳಿಗಾಗಿ ತಯಾರಾಗಿದೆ ಟು ಇನ್​ ಒನ್​​ ಛತ್ರಿ.. ನಿಮ್ಮ ಪ್ರೇಯಸಿಗಾಗಿ ಖರೀದಿ ಮಾಡಿ!

Advertisment

ಉಳಿದ ಸಾಲ ತೀರಿಸಲು ರೀನಾಳಿಗೆ ತನ್ನ ಗಂಡ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ಬೇಕೆಂದು ಪೀಡಿಸುತ್ತಿದ್ದರು. ತವರು ಮನೆಯಿಂದ ಹಣ ತಂದು ಕೊಡದೇ ಹೋದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ರೀನಾಳ ಉಳಿದ ಚಿನ್ನವನ್ನು ಸಾಲ ತೀರಿಸಲು ಗಂಡನ ಮನೆಯವರು ಮುಂದಾಗಿದ್ದಾರೆ. ಆದರೆ ಇದಕ್ಕೆ ಒಪ್ಪದ ರೀನಾ ಮತ್ತು ಗಂಡನ ನಡುವೆ ಜಗಳವಾಗಿದೆ. ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment