/newsfirstlive-kannada/media/post_attachments/wp-content/uploads/2025/03/Sunita-Williams2.jpg)
ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬರೋಬ್ಬರಿ 9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿದ್ದದ್ದನ್ನು ನೋಡಿ ಸಾಕಷ್ಟು ಮಂದಿ ಇವ್ರು ವಾಪಸ್ ಬರ್ತಾರೋ ಬರೋದಿಲ್ವೋ ಅನ್ನೋ ಡೌಟಲ್ಲಿದ್ರು. ಅವರಿಬ್ಬರೂ ಬಾಹ್ಯಾಕಾಶದಲ್ಲಿ ಈ 9 ತಿಂಗಳಲ್ಲಿ ಎದುರಿಸಿದ ಸವಾಲುಗಳು ಅದೆಷ್ಟೋ. ಆದ್ರೆ, ಭೂಮಿಗೆ ಬಂದ್ಮೇಲೂ ಇಬ್ಬರಿಗೂ ಸಂಕಷ್ಟಗಳು ತಪ್ಪೋದಿಲ್ಲ. ಇಲ್ಲೂ ಕೂಡ ಇಳಿಯುತ್ತಿದ್ದಂತೆ ಹತ್ತಾರು ಸವಾಲುಗಳಿಗೆ ಎದೆಯೊಡ್ಡಲೇಬೇಕಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 17 ಗಂಟೆಗಳ ಪ್ರಯಾಣ ಮುಗಿಸಿ ಸೇಫಾಗಿ ಸುನೀತಾ ಭೂಮಿಗೆ ಬಂದಿಳಿದ್ರೂ ಕೂಡ ಸುನೀತಾಗೆ ನೂರಾರು ಚಾಲೆಂಜ್ ಎದುರಾಗಲಿವೆ. 9 ತಿಂಗಳು ಕಾಲ ಐಎಸ್ಎಸ್ನಲ್ಲಿ ಸಾವು-ಬದುಕಿನ ಹೋರಾಟ ನಡೆಸಿದ್ದ ಸುನೀತಾ ಭೂಮಿಗೆ ಇಳಿದ್ಮೇಲೂ ಹತ್ತಾರು ಚಾಲೆಂಜ್ಗಳನ್ನ ಎದುರಿಸಬೇಕಾಗುತ್ತೆ.
ಇದನ್ನೂ ಓದಿ:ರೆಬೆಲ್ ಸ್ಟಾರ್ ಮೊಮ್ಮಗ ಅಂದ್ರೆ ಸುಮ್ನೆನಾ? ಫ್ಯಾನ್ಸ್ ಮನಗೆದ್ದ ಅವಿವಾ ಬಿದ್ದಪ್ಪ; ಟಾಪ್ 10 ಫೋಟೋ ಇಲ್ಲಿವೆ!
ಸುನೀತಾಗೆ ಇರುವ ಸವಾಲುಗಳು?
ಬಾಹ್ಯಕಾಶದಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅಕ್ಷರಶಃ ಮೈಕ್ರೋ ಗ್ರ್ಯಾವಿಟಿ ಅಂದ್ರೆ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿದ್ರು. ಈ ಟೈಮ್ನಲ್ಲಿ ಗಗನಯಾತ್ರಿಗಳು ಅಂತರಿಕ್ಷೆಯಲ್ಲಿರೋ ರೇಡಿಯೇಷನ್ ಅಂದ್ರೆ ಅಲ್ಲಿನ ವಿಕಿರಣಗಳಿಗೆ ಎಕ್ಸಪೋಸ್ ಆಗಿರ್ತಾರೆ. ಈ ಕಾರಣಕ್ಕೆ ಗಗನಯಾತ್ರಿಗಳ ಮಾಂಸಖಂಡಗಳು ಮತ್ತು ಮೂಳೆಗಳು ವೀಕ್ ಆಗಿರುವ ಸಾಧ್ಯತೆಗಳಿರುತ್ತವೆ. ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸೂಕ್ಷ್ಮ ಗುರುತ್ವಾಕರ್ಷಣೆಯಿಂದ ದೇಹದ ಮಾಂಸಖಂಡ ಮತ್ತು ಸ್ನಾಯುಗಳಲ್ಲಿ ಶಕ್ತಿ ಕಡಿಮೆಯಾಗಿರುತ್ತೆ.
ನಿಲ್ಲೋದಕ್ಕೂ ಆಗಲ್ಲ! ಬಾಡಿ ಬ್ಯಾಲೆನ್ಸಿಂಗ್ ಕಷ್ಟ ಕಷ್ಟ!
ಬಾಹ್ಯಾಕಾಶದಲ್ಲಿ ಹಾರಾಡಿಕೊಂಡೇ ಗಗನಯಾತ್ರಿಗಳು ಎಲ್ಲಾ ಕಡೆ ಓಡಾಡ್ತಿರ್ತಾರೆ. ಅದಕ್ಕೆ ಕಾರಣ ಅಲ್ಲಿ ಗುರುತ್ವಾಕರ್ಷರ್ಣೆ ಬಲ ಇಲ್ಲದೇ ಇರೋದು. ಆದ್ರೆ, ಗಗನಯಾತ್ರಿಗಳು ಭೂಮಿಗೆ ಬರ್ತಿದ್ದಂತೆ ಅದೇ ಗುರುತ್ವಾಕರ್ಷಣೆಗೆ ಒಳಪಡ್ತಾರೆ. ಇದ್ರಿಂದ ದೇಹವನ್ನ ನಿಯಂತ್ರಣ ಮಾಡೋದು ತುಂಬಾನೆ ಕಷ್ಟ ಆಗುತ್ತೆ. ನಡೆಯೋದಕ್ಕೆ ನಿಲ್ಲೋದಕ್ಕೆ ತುಂಬಾನೇ ಕಷ್ಟ ಪಡ್ಬೇಕಾಗುತ್ತೆ. ಇದೆಲ್ಲದರ ಜೊತೆಗೆ ಒತ್ತಡ, ಆತಂಕ, ಮತ್ತು ಖಿನ್ನತೆ ಕಾಡುವ ಸಾಧ್ಯತೆಯಿರುತ್ತೆ. ಇನ್ನೂ ದೇಹ ಕಾಸ್ಮಿಕ್ ಕಿರಣಗಳಿಗೆ ಎಕ್ಸಪೋಸ್ ಆಗಿದ್ದ ಪರಿಣಾಮ ಗಗನಯಾತ್ರಿಗಳ ರೋಗ ನೀರೋಧಕ ಶಕ್ತಿಯಲ್ಲೂ ವ್ಯತ್ಯಾಸವಾಗಬಹುದು.
ಇದಷ್ಟೇ ಅಲ್ಲ.. ಗಗನಯಾತ್ರಿಗಳ ಆರೋಗ್ಯದಲ್ಲಿ ಏರುಪೇರಾಗಿ ತಲೆ ಸುತ್ತುವುದು ದೃಷ್ಟಿ ಮಂಜಾಗುವುದು. ಎಲ್ಲದಕ್ಕಿಂತ ಬೆಚ್ಚಿ ಬೀಳಿಸೋದು ಏನಂದ್ರೆ ಹೃದಯ ರಕ್ತನಾಳ ಸೇರಿ ಕ್ಯಾನ್ಸರ್ ಕೂಡ ಬರೋ ಸಾಧ್ಯತೆ ಇರುತ್ತೆ. ಅದಕ್ಕೆ ಕಾರಣ ಏನಂದ್ರೆ ಸೂರ್ಯನ ಕಿರಣ.. ಸೂರ್ಯನ ಕಿರಣಗಳು ಭೂಮಿಗೆ ಬರಬೇಕಂದ್ರೆ 9ರಿಂದ 10 ನಿಮಿಷಗಳು ಬೇಕು. ಅಂದ್ರೆ, ಭೂಮಿಯ ಮೇಲ್ಮೈ ವಾತಾವರಣದ ನಾಲ್ಕು ಪದರಗಳನ್ನ ದಾಟಿ ಸೂರ್ಯನ ಕಿರಣ ಭೂಮಿಗೆ ಬರುತ್ತೆ.
ಆದ್ರೆ ಬಾಹ್ಯಕಾಶದಲ್ಲಿ ಇಂತಾ ರಕ್ಷಣಾ ಪದರಗಳು ಇರೋದಿಲ್ಲ. ಹೀಗಾಗಿ ನೇರವಾಗಿ ದೇಹದ ಮೇಲೆ ಬೀಳುವ ಸೂರ್ಯನ ಕಿರಣದಲ್ಲಿ 9 ತಿಂಗಳು ಜೀವಿಸಬೇಕಾಗಿತ್ತು. ಇದಕ್ಕಾಗಿ ನಿರಂತರವಾಗಿ ಪ್ರೋಟೀನ್, ಹೈ ಎನರ್ಜಿ ಟ್ಯಾಬ್ಲೆಟ್ ತೆಗೆದುಕೊಳ್ಳುವ ಅನಿವಾರ್ಯತೆಯೂ ಇತ್ತು. ಹಾಗಾಗಿ ಭೂಮಿಗೆ ವಾಪಸ್ ಆದ್ಮೇಲೆ ಸುನಿತಾ ಹಾಗೂ ಬುಚ್ ವಿಲ್ಮೋರ್ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.ಮೂಳೆ ಮಾತ್ರವಲ್ಲ.. ಸುನೀತಾ ಕಣ್ಣಿಗೂ ಸಮಸ್ಯೆ ಕಾಡಬಹುದು. ಯಾಕಂದ್ರೆ, ಸುನೀತಾ ಬಾಹ್ಯಾಕಾಶದಿಂದ ಜಸ್ಟ್ ಎಂಟು ದಿನಗಳ ಬಳಿಕ ಭೂಮಿಗೆ ವಾಪಸ್ ಆಗ್ಬೇಕಿತ್ತು. ಆದ್ರೆ ದುರಾದೃಷ್ಟವಶಾತ್ 9 ತಿಂಗಳು ಅಂತರಿಕ್ಷೆಯಲ್ಲೇ ರೋಚಕ ಹೋರಾಟ ಮಾಡುವಂತಾಗಿದೆ. ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಅವಧಿಗಿಂತ ಹೆಚ್ಚು ಕಾಲ ಇದ್ರೆ ಕಣ್ಣಿಗೂ ಎಫೆಕ್ಟ್ ಆಗೋ ಸಾಧ್ಯತೆಯಿದ್ದು, ಇದ್ರಿಂದ ಮೆದುಳಿಗೂ ಎಫೆಕ್ಟ್ ಆಗಿ ಯೋಚನಾ ಸಾಮಾರ್ಥ್ಯದ ಮೇಲೆ ಪರಿಣಾಮ ಬೀರಲಿದೆ.
ಗಗನ ಯಾತ್ರಿಗಳಿಗೆ 45 ದಿನಗಳ ರಿಕವರಿ ಪ್ರೋಗ್ರಾಂ!
ಅಂತರಿಕ್ಷೆಯಿಂದ ಭೂಮಿಗೆ ವಾಪಸ್ ಆದ ಮೇಲೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ ಅಂತಾನೇ ಹೇಳಲಾಗುತ್ತೆ. ಆದ್ರೆ, ಇದ್ರಿಂದ ಗಗನಯಾನಿಗಳನ್ನ ಪಾರು ಮಾಡೋದಕ್ಕೆ ಅಂತ ನಾಸಾ ರಿಕವರಿ ಪ್ರೋಗ್ರಾಂ ಕೈಗೊಳ್ಳಾಲಾಗುತ್ತೆ. ಭೂಮಿಗೆ ವಾಪಸ್ ಬಂದ ತಕ್ಷಣ ಸುನೀತಾರನ್ನ ನೇರವಾಗಿ ಮನೆಗೆ ಕಳಿಸಲಾಗುವುದಿಲ್ಲ. ದೈಹಿಕವಾಗಿ ಆಗಿರುವ ಬದಲಾವಣೆಗಳಿಂದ ಚೇತರಿಸಿಕೊಳ್ಳೋದಕ್ಕೆ ನೆರವು ನೀಡೋ ಸಲುವಾಗಿ, ನಾಸಾ 45 ದಿನಗಳ ಒಂದು ದೇಹದ ಪುನಸ್ಥಾಪನೆಗೆ ಕಾರ್ಯಕಮ್ರವನ್ನೇ ಕೈಗೊಂಡಿರುತ್ತೆ.
ಇದು 45 ದಿನದ ಕಾರ್ಯಕ್ರಮ ಆಗಿದ್ರೂ, ರಿಕವರಿ ಆಗೋಕೇ ಇನ್ನೂ ಹೆಚ್ಚು ಸಮಯ ಬೇಕಾಗಬಹುದು. ಯಾಕಂದ್ರೆ, ಈ 45 ದಿನದ ರಿಕವರಿಯಲ್ಲಿ ಆರೋಗ್ಯ ಸರಿಯಾದ್ರೆ ಓಕೆ. ಇಲ್ಲವಾದ್ರೆ ಅದೇ ಚಿಕಿತ್ಸೆಯನ್ನೇ ಮುಂದುವರಿಸಲಾಗುತ್ತೆ. ಕೊನೆಗೆ ಆರೋಗ್ಯದಲ್ಲಿ ಎಲ್ಲವೂ ಸರಿ ಇದೆ ಅಂತ ವರದಿ ಬಂದ್ಮೇಲೆ ಮನೆಯವರ ಭೇಟಿಗೆ ಅವಕಾಶ ನೀಡಲಾಗುತ್ತೆ. ಒಟ್ಟಾರೆ, 9 ತಿಂಗಳ ರಣಯಾತನೆಗೆ ಮುಕ್ತಿ ಸಿಗ್ತಿದೆ. ಯಾವುದೇ ಅಡ್ಡಿ ಆತಂಕವಿಲ್ಲದೇ ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲಿ ಅನ್ನೋದೇ ಭಾರತ ಸೇರಿ ಜಗತ್ತಿನ ನೂರಾರು ಕೋಟಿ ಜನರ ಆಶಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ