ಕೊನೆಗೂ ಡಾ.ಅನನ್ಯ ಮೃತದೇಹ ಪತ್ತೆ; ರೀಲ್ಸ್ ಮಾಡುತ್ತಾ ನದಿಗೆ ಜಿಗಿದ ಮೇಲೆ ಏನಾಯ್ತು?

author-image
admin
Updated On
ಕೊನೆಗೂ ಡಾ.ಅನನ್ಯ ಮೃತದೇಹ ಪತ್ತೆ; ರೀಲ್ಸ್ ಮಾಡುತ್ತಾ ನದಿಗೆ ಜಿಗಿದ ಮೇಲೆ ಏನಾಯ್ತು?
Advertisment
  • ಕೊಪ್ಪಳದಲ್ಲಿ ರೀಲ್ಸ್ ಮಾಡಲು 20 ಅಡಿಯಿಂದ ನದಿಗೆ ಜಿಗಿದಿದ್ದ ಅನನ್ಯ
  • ನಿನ್ನೆಯಿಂದ ವೈದ್ಯೆ ಅನನ್ಯ ಅವರ ಮೃತದೇಹಕ್ಕಾಗಿ ಶೋಧ ಕಾರ್ಯ
  • ನದಿಯ ಸುರಂಗದೊಳಗೆ ಹೋಗಿ ಹುಡುಕಾಡಿದ ಮುಳುಗು ತಜ್ಞರು

ಕೊಪ್ಪಳ: ರೀಲ್ಸ್ ಮಾಡಲು ಹೋಗಿ 20 ಅಡಿಯಿಂದ ನದಿಗೆ ಜಿಗಿದ ಡಾ. ಅನನ್ಯ ಅವರ ಮೃತ ದೇಹ ಕೊನೆಗೂ ಪತ್ತೆಯಾಗಿದೆ. ನಿನ್ನೆ ಹೈದರಾಬಾದ್ ಮೂಲದ ಡಾ. ಅನನ್ಯ ರಾವ್ ಮೈನಮಪಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ‌ದಲ್ಲಿ ನದಿಗೆ ಜಿಗಿದು ಕೊಚ್ಚಿ ಹೋಗಿದ್ದರು.

ನಿನ್ನೆಯಿಂದ ವೈದ್ಯೆ ಅನನ್ಯ ಅವರ ಮೃತದೇಹಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳ, ತೆಪ್ಪ ಹಾಕುವ ಯುವಕರು ತೀವ್ರ ಹುಡುಕಾಟ ನಡೆಸಿದ್ದರು. ಮೃತದೇಹ ಸಿಗದ ಹಿನ್ನೆಲೆಯಲ್ಲಿ ಜಿಂದಾಲ್ ಕಾರ್ಖಾನೆಯ ಎಸ್‌ಡಿಆರ್ ತಂಡದಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಇದನ್ನೂ ಓದಿ: ನದಿಗೆ ಹಾರುವ ಕೆಲವೇ ಗಂಟೆಗಳ ಹಿಂದೆ ತಾಯಿಗೆ ಕರೆ.. ವೈದ್ಯೆ ಫೋನ್​ನಲ್ಲಿ ಅಮ್ಮನಿಗೆ ಹೇಳಿದ್ದೇನು..? 

ಇಂದು ಮುಳುಗು ತಜ್ಞರು ನೀರಿನಲ್ಲಿ ಶೋಧ ಕಾರ್ಯ ನಡೆಸುವಾಗ ಅನನ್ಯ ಅವರ ಮೃತದೇಹ ಪತ್ತೆಯಾಗಿದೆ. ರೀಲ್ಸ್ ಮಾಡಲು ಹೋಗಿ ನದಿಯಲ್ಲಿ ಜಿಗಿದ ವೈದ್ಯೆ ಈಜು ಬಾರದೆ ಕೊಚ್ಚಿ ಹೋಗಿದ್ದರು. ಮೃತದೇಹ ಸಿಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನದಿಯ ಸುರಂಗದೊಳಗೆ ಅನನ್ಯ ಮೃತದೇಹ ಸಿಲುಕಿತ್ತು. ಜಿಂದಾಲ್ ಕಾರ್ಖಾನೆಯ ರಕ್ಷಣೆ ಪಡೆಯ ಮುಳುಗು ತಜ್ಞ ರಾಜೇಶ್ ಅವರು ಮೊದಲಿಗೆ ಅನನ್ಯರ ಮೃತದೇಹ ಪತ್ತೆ ಹಚ್ಚಿದರು. ಅನನ್ಯ ಕಾಲು ಕಂಡು ರಾಜೇಶ್ ಹೊರತೆಗೆದಿದ್ದು, ತೆಪ್ಪ ಹಾಕುವ ಯುವಕ ತಿಮ್ಮಪ್ಪ, ನರಸಿಂಹ ಹಾಗೂ ಶ್ರೀನಿವಾಸ್ ಸಾಥ್ ನೀಡಿದರು.

ಅನನ್ಯ ತಾಯಿ ರಜಿತ ಹಾಗೂ ಮನಮೋಹನ್ ಮಗಳ ಮೃತದೇಹ ಕಂಡು ಕಣ್ಣೀರು ಹಾಕಿದ್ದು, ಮುಳುಗು ತಜ್ಞರು, ತೆಪ್ಪ ಹಾಕುವ ಯುವಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment