ರೀಲ್ಸ್‌ಗಾಗಿ ನದಿಗೆ ಹಾರಿದ ದುರಂತ.. ನೋವಿನಲ್ಲೂ ಮಾನವೀಯತೆ ಮೆರೆದ ಡಾ. ಅನನ್ಯ ಕುಟುಂಬ

author-image
admin
Updated On
ರೀಲ್ಸ್‌ಗಾಗಿ ನದಿಗೆ ಹಾರಿದ ದುರಂತ.. ನೋವಿನಲ್ಲೂ ಮಾನವೀಯತೆ ಮೆರೆದ ಡಾ. ಅನನ್ಯ ಕುಟುಂಬ
Advertisment
  • 22 ಗಂಟೆಗಳ ಹುಡುಕಾಟ ನಡೆಸಿದ್ದ ತೆಪ್ಪ ಹಾಕುವ ಯುವಕರ ತಂಡ
  • ಸಾಣಾಪುರ ಭಾಗದ ತೆಪ್ಪ ಹಾಕುವ ಯುವಕರ ಕಾರ್ಯಕ್ಕೆ ಮೆಚ್ಚುಗೆ
  • ‘ನಮ್ಮ ಪಾಲಿಗೆ ನೀವೇ ದೇವರು ನಮ್ಮ ಮಗುವನ್ನು ಹುಡುಕಿಕೊಟ್ಟಿದ್ದೀರಿ’

ಕೊಪ್ಪಳ: ರೀಲ್ಸ್‌ಗಾಗಿ ಸಾಣಾಪುರ ನದಿಯಲ್ಲಿ ಜಿಗಿದು ಪ್ರಾಣ ಕಳೆದುಕೊಂಡ ಡಾ. ಅನನ್ಯ ಅವರ ಮೃತದೇಹ 22 ಗಂಟೆಗಳ ಬಳಿಕ ಪತ್ತೆಯಾಗಿದೆ. 20 ಅಡಿಯಿಂದ ಹಾರಿದ ಡಾ. ಅನನ್ಯ ಮೈನಪಲ್ಲಿ ಅವರ ಸುಳಿವು ಪತ್ತೆ ಹಚ್ಚುವುದು ಬಹಳ ದೊಡ್ಡ ಸವಾಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ತೆಪ್ಪ ಹಾಕುವ ಯುವಕರ ಪಾತ್ರ ಬಹಳ ಪ್ರಮುಖ ಪಾತ್ರವಹಿಸಿದೆ.

ಫೆಬ್ರವರಿ 19ರ ಬೆಳಗ್ಗೆ ಪ್ರವಾಸಕ್ಕೆ ಬಂದಿದ್ದ ಅನನ್ಯ ಅವರು ಕೊಪ್ಪಳ ಗಂಗಾವತಿ ತಾಲೂಕಿನ, ಆಂಧ್ರ ಮತ್ತು ತೆಲಂಗಾಣ ಭಾಗಕ್ಕೆ ಹರಿಸುವ ಸಾಣಾಪುರ ನದಿಯಲ್ಲಿ ರೀಲ್ಸ್‌ಗಾಗಿ ಹಾರಿದ್ದರು.

publive-image

ಫೆಬ್ರವರಿ 19 ಹಾಗೂ 20ರಂದು ಸತತ 22 ಗಂಟೆಗಳ ಹುಡುಕಾಟದ ಬಳಿಕ ಡಾ.ಅನನ್ಯ ಮೃತದೇಹ ಸಿಕ್ಕಿತ್ತು. ಈ ಶೋಧ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಾಣಾಪುರ ಭಾಗದ ತೆಪ್ಪ ಹಾಕುವ ಯುವಕರು.

ಇದನ್ನೂ ಓದಿ: ಕೊನೆಗೂ ಡಾ.ಅನನ್ಯ ಮೃತದೇಹ ಪತ್ತೆ; ರೀಲ್ಸ್ ಮಾಡುತ್ತಾ ನದಿಗೆ ಜಿಗಿದ ಮೇಲೆ ಏನಾಯ್ತು? 

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿಯ ಜನರಲ್ ತಿಮ್ಮಯ್ಯ ಅಕಾಡೆಮಿಯಲ್ಲಿ ತೆಪ್ಪ ಹಾಕುವ ತರಬೇತಿ ಪಡೆದ ಈ ಯುವಕರ ತಂಡದ ಕಾರ್ಯಾಕ್ಕೆ ಡಾ. ಅನನ್ಯ ಕುಟುಂಬಸ್ಥರು ಕೃತಜ್ಞತೆ ತಿಳಿಸಿದ್ದಾರೆ.
ಡಾ.ಅನನ್ಯ ಸಾವಿನ ನೋವಿನಲ್ಲಿಯೂ ಸಾಣಾಪುರ ತೆಪ್ಪ ಹಾಕುವ ಯುವಕರ ಮೃತದೇಹ ಪತ್ತೆ ಮಾಡಿದ ಹಿನ್ನೆಲೆ ಕೃತಜ್ಞತೆ ಸಲ್ಲಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿದ ಹೈದ್ರಾಬಾದ್‌ನ ಮೈನಪ್ಪಲ್ಲಿ ಮಾಜಿ ಶಾಸಕ ಹನುಂತರಾವ್ 40 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ಯುವಕರು ಬೇಡ ಅಂದ್ರೂ ಇಲ್ಲ ನಮ್ಮ ಪಾಲಿಗೆ ನೀವೇ ದೇವರು ನಮ್ಮ ಮಗುವನ್ನು ಹುಡುಕಿಕೊಟ್ಟಿದ್ದೀರಿ ಎಂದು ಹಣವನ್ನು ಕೊಟ್ಟಿದ್ದಾರೆ.

publive-image

ಇನ್ನು, ಜಿಂದಾಲ್‌ನಿಂದ ಬಂದಿದ್ದ ರಕ್ಷಣಾ ಪಡೆಯ ಕಾರ್ಯವನ್ನು ಮೆಚ್ಚಿ 20 ಸಾವಿರ ರೂಪಾಯಿಗಳನ್ನು ನೀಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ತೆಪ್ಪ ಹಾಕುವ ಯುವಕರಾದ ತಿಮ್ಮಪ್ಪ, ಶ್ರೀನಿವಾಸ, ನರಸಿಂಹ ಅವರ ತಂಡದ ಯುವಕರಿಗೆ ನದಿಯ ಆಳ ಹಾಗೂ ತಿರುವುಗಳ ಬಗ್ಗೆ ಅನುಭವ ಇದೆ. ಜಿಂದಾಲ್ ರಕ್ಷಣಾ ಪಡೆಯ ಮುಳುಗು ತಜ್ಞ ರಾಜೇಶ್ ಪಯತ್ನ ಹಾಗೂ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಸಾಥ್‌ನಿಂದ 22 ಗಂಟೆಗಳಲ್ಲಿ ಮೃತದೇಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment