/newsfirstlive-kannada/media/post_attachments/wp-content/uploads/2025/02/Dr.-Ananya13.jpg)
ರೆಡಿ ಒನ್... ಟು... ತ್ರಿ... ಜಂಪ್. ಇದೇನ್ ರನ್ನಿಂಗ್ ರೇಸ್ ಅಂತಾ ಈಕೆ ಅಂದುಕೊಂಡಿದ್ಲಾ? ಅಥವಾ ಪ್ರಕೃತಿಗೂ ಮೀರಿದ ತಾಕತ್ತು ನನ್ನ ಬಳಿ ಇದೆ ಅನ್ನೋ ಭ್ರಮೆಯಲ್ಲಿದ್ಲಾ? ಸ್ವಲ್ಪ ದೂರದಲ್ಲಿ ಕುಳಿತಿದ್ದ ಸ್ನೇಹಿತರು ಹೀಗೆ ಒನ್ ಟು ತ್ರಿ ಅಂತಾ ಮೂರು ಎಣಿಸಿದ್ದೇ ತಡ. ಬಂಡೆ ಮೇಲೆ ನಿಂತಿದ್ದಾಕೆ ಧಪ್ ಅಂತಾ ತುಂಬಿ ಹರಿಯೋ ನದಿಗೆ ಹಾರಿಯೇ ಬಿಟ್ಟಿದ್ದಾಳೆ.
ಆಳವಾದ ನೀರಿಗೆ ಬಿದ್ದವಳು ಕೆಲ ಸೆಕೆಂಡ್ಗಳು ಕಾಲ ನೀರಲ್ಲಿ ಈಜೋಕೆ ಪ್ರಯತ್ನಪಟ್ಟಿದ್ದಾಳೆ. ಇನ್ನೇನು ಜಂಪ್ ಮಾಡಿದ್ದಾಯ್ತು. ದಡ ಸೇರೋಣ ಅಂತಾ ಬರ್ತಿದ್ದವಳು ಏಕಾಏಕಿ ಕಣ್ಮರೆಯಾಗಿದ್ದಾಳೆ. ನೀರಿಗೆ ಬಿದ್ದಾಗ ಕಂಡಿದಷ್ಟೇ ಅಲ್ಲಿಂದ ಏನಾಯ್ತು ಅನ್ನೋದೇ ಗೊತ್ತಾಗಿಲ್ಲ.
ಜಸ್ಟ್ 27 ಸೆಕೆಂಡ್ಗಳ ಈ ವಿಡಿಯೋ ಅಕ್ಷರಶಃ ದಿಗಿಲು ಹುಟ್ಟಿಸಿದೆ. ನೋಡಿದವರ ಎದೆ ಕಂಪಿಸುವಂತೆ ಮಾಡ್ತಿದೆ. ಎತ್ತರದ ಬಂಡೆಗಲ್ಲಿನ ಮೇಲೆ ಕಪ್ಪು ಬಣ್ಣದ ಟೀ ಶರ್ಟ್ ಒಂದನ್ನ ಹಾಕೊಂಡು ಹುಡುಗಿ ನಿಂತಿದ್ದಳು. ಅವಳಿಂದ ಸ್ವಲ್ಪವೇ ದೂರದಲ್ಲಿ ಇನ್ನೊಬ್ಬ ಯುವತಿ ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಕೂತಿದ್ದಳು. ಈಕೆ ನದಿಗೆ ಹಾರ್ತಿರೋದನ್ನೆ ಆಕೆ ವಿಡಿಯೋ ಮಾಡ್ತಿದ್ದಾಳೆ ಅನ್ನೋದು ನೋಡಿದ್ರೆ ಅರ್ಥ ಆಗುತ್ತೆ. ಇತ್ತ ಇನ್ನೊಂದು ಬದಿಯಿಂದ ಯುವತಿ ನದಿಗೆ ಹಾರೋದನ್ನೇ ಮತ್ತೊಬ್ಬ ಯುವಕ ವಿಡಿಯೋ ಮಾಡ್ತಿದ್ದಾನೆ. ಇವನು ಒನ್ ಟು ತ್ರಿ ಅಂತ ಕೌಂಟ್ಡೌನ್ ಕೊಟ್ಟಿದ್ದೇ ತಡ ಯುವತಿ ಜಂಪ್ ಮಾಡಿದ್ದಾಳೆ.
ಮುಂಜಾನೆ ಹೊತ್ತಲ್ಲಿ ತುಂಗಭದ್ರಾ ನದಿ ಬಳಿ ಬಂದಿದಾಕೆಗೆ ನೀರಲ್ಲಿ ಈಜೋ ಆಸೆ ಮೂಡಿದೆ. ನದಿ ಬಳಿ ಬಂದವಳೇ ಕಲ್ಲು ಬಂಡೆಯ ಮೇಲಿಂದ ನದಿಗೆ ಹಾರಿಯೇ ಬಿಟ್ಟಿದ್ದಾಳೆ. ಆದ್ರೆ ನದಿಗೆ ಹಾರಿದವಳು ಏನಾದ್ಳು? ಅನ್ನೋದೇ ಗೊತ್ತಾಗಿಲ್ಲ. ನದಿಗೆ ಬಿದ್ದವಳು ನಾಪತ್ತೆಯಾಗಿದ್ದಾಳೆ. ಅಂದ ಹಾಗೇ, ಇಲ್ಲಿ ಈ ರೀತಿ ಹುಚ್ಚು ಹುಚ್ಚಾಗಿ ನೀರಿಗೆ ಹಾರಿದಾಕೆ ಸಾಮಾನ್ಯ ಮಹಿಳೆ ಅಲ್ವೇ ಅಲ್ಲ. ಈಕೆಯೊಬ್ಬಳು ಡಾಕ್ಟರ್.
ವೈದ್ಯೆಯಾಗಲು ವರ್ಷಗಳು..27 ಸೆಕೆಂಡಲ್ಲಿ ನೀರುಪಾಲು!
ಬೆಚ್ಚಿ ಬೀಳಿಸ್ತಿದೆ ಜಂಪಿಂಗ್ ವಿಡಿಯೋ! ಆಗಿದ್ದೇನು?
ಹಂಪಿಯ ಸಾಣಪುರದ ತುಂಗಭದ್ರಾ ನದಿಯಿದು. ನಿನ್ನೆ ಬುಧವಾರ ಮುಂಜಾನೆ ಹೈದ್ರಾಬಾದ್ನಿಂದ ಬಂದಿದ್ದ ವೈದ್ಯೆ ಅನನ್ಯಾ ರಾವ್ ಬಂಡೆ ಮೇಲೆ ನಿಂತು 20 ಅಡಿ ಮೇಲಿಂದ ನದಿಗೆ ಹಾರಿದ್ದಾಳೆ. ಆದ್ರೆ ನದಿಗೆ ಹಾರಿದ ಅನನ್ಯಾ ನೀರಿಂದ ಮೇಲೆ ಎದ್ದೇ ಇಲ್ಲ. ನೀರಲ್ಲಿ ಕೊಚ್ಚಿಕೊಂಡು ಹೋದವಳು ಏನಾದ್ಳು ಅನ್ನೋ ಸುಳಿವೇ ಸಿಕ್ಕಿಲ್ಲ.
ಅಂದ ಹಾಗೆ ಅನನ್ಯಾ ಈಜು ಬರದೇ ನೀರಿಗೆ ಇಳಿದಿಲ್ಲ. ಆಕೆ ಪಕ್ಕಾ ಸ್ವಿಮ್ಮರ್. ಡಾಕ್ಟರ್ ಅನನ್ಯಗೆ ಈಜು ಚೆನ್ನಾಗಿಯೇ ಬರ್ತಿತ್ತು. ಆದ್ರೆ, ನಿಮಗೊಂದು ವಿಷ್ಯ ಗೊತ್ತಿರಲಿ ಈಜು ಬರುತ್ತೆ ಅಂದಾಕ್ಷಣ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜೋದಕ್ಕೂ. ಹರಿಯೋ ನೀರಲ್ಲ್ಲಿ ಈಜೋದಕ್ಕೆ ತುಂಬಾ ವ್ಯತ್ಯವಾಸವಿದೆ. ಆಳವಾಗಿರೋ ಹಾಗೂ ನೀರಿನ ಹರಿತದ ವಿರುದ್ಧದ ದಿಕ್ಕಿನಲ್ಲಿ ಈಜೋದಕ್ಕೆ ತುಂಬಾನೇ ಅನುಭವ ಹಾಗೂ ಪರಿಣಿತಿ ಇರ್ಬೇಕು. ಜಾಗದ ಬಗ್ಗೆ ಸರಿಯಾಗಿ ಗೊತ್ತಿಲ್ಲ, ಅಲ್ಲೆಷ್ಟು ಆಳ ಇದೆ ಅನ್ನೋದನ್ನೂ ತಿಳಿದುಕೊಳ್ಳೋದಕ್ಕೆ ಹೋಗಿಲ್ಲ. ನೀರಿನ ರಭಸದ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಒಬ್ಬಳು ವೈದ್ಯೆಯಾಗಿದ್ದುಕೊಂಡು ಇದ್ಯಾವುದನ್ನೂ ಯೋಚನೆ ಮಾಡದೇ ಅನನ್ಯಾ ಸುಖಾಸುಮ್ಮನೆ ನೀರಿಗೆ ಹಾರಿಬಿಟ್ಲಾ?
ಟ್ರಿಪ್ಗೆ ಬಂದ್ಳು! ಸ್ನೇಹಿತರಿಗೆ ಹೇಳಿಯೇ ನೀರಿಗೆ ಹಾರಿದ್ಲು!
ಅಂದ ಹಾಗೇ, ತುಂಗೆಗೆ ಹಾರಿದ ಅನನ್ಯ ರಾವ್ ಹೈದ್ರಾಬಾದ್ನ ನ್ಯಾಮಪಲ್ಲಿ ಮೂಲದವಳು.. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದವಳು. ಬಿಡುವಿದ್ದ ಸಮಯದಲ್ಲಿ ಅನ್ಯಾನ್ಯಾಗೆ ಬೇರೆ ಬೇರೆ ಊರುಗಳನ್ನ ಸುತ್ತಾಡೋದು ಅಂದ್ರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಅನನ್ಯ ಕೊಪ್ಪಳದ ಗಂಗಾವತಿಗೆ ತನ್ನಿಬ್ಬರ ಫ್ರೆಂಡ್ಸ್ ಜೊತೆ ಟ್ರಿಪ್ಗೆ ಬಂದಿದ್ದಳಂತೆ. ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮದ ವೈಟ್ ಸ್ಟ್ಯಾಂಡ್ ಗೆಸ್ಟ್ ಹೌಸ್ನಲ್ಲಿ ಅನನ್ಯ ಆ್ಯಂಡ್ ಫ್ರೆಂಡ್ಸ್ ಸ್ಟೇ ಮಾಡಿದ್ದಾರೆ. ಅದ್ಯಾಕೋ ಏನೋ ಬುಧವಾರ ಮುಂಜಾನೆ ನದಿಯಲ್ಲಿ ಈಜಬೇಕು ಅಂತ ಅನಿಸಿದೆ. ಗೆಸ್ಟ್ ಹೌಸ್ ಹಿಂಭಾಗದಲ್ಲೇ ನದಿ ಇರೋ ಕಾರಣ ತನ್ನಿಬ್ಬರ ಫ್ರೆಂಡ್ಸ್ ಜೊತೆ ಸೀದಾ ನದಿ ಬಳಿ ಹೋಗಿದ್ದಾಳೆ. ತುಂಗಾ ನದಿಗೆ ಬಂಡೆ ಮೇಲಿಂದ ಹಾರಿದ್ದಾಳೆ. ಆಮೇಲೆ ನೀರಿನ ರಭಸಕ್ಕೆ ಕೊಚ್ಚಿಹೋದವಳು ನಾಪತ್ತೆಯಾಗಿಬಿಟ್ಟಳು.
ಇದನ್ನೂ ಓದಿ: ಕೊನೆಗೂ ಡಾ.ಅನನ್ಯ ಮೃತದೇಹ ಪತ್ತೆ; ರೀಲ್ಸ್ ಮಾಡುತ್ತಾ ನದಿಗೆ ಜಿಗಿದ ಮೇಲೆ ಏನಾಯ್ತು?
ಅನನ್ಯ ಪ್ಲೀಸ್ ಬಾರಮ್ಮ.. ಹೆತ್ತ ಕರುಳಿನ ಗೋಳಾಟ!
ರಾತ್ರಿ ಉಪವಾಸ ಕೂತು ರಾಮಕೋಟಿ ಬರೆದಿದ್ದ ವೈದ್ಯೆ!
ಅನನ್ಯ ತಂದೆ ಕೂಡ ದೊಡ್ಡ ಡಾಕ್ಟರ್. ಹೈದ್ರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಅನನ್ಯ ಅಪ್ಪ ಮನಮೋಹನ್ ರಾವ್ಗೆ ತುಂಬಾನೇ ಒಳ್ಳೆ ಹೆಸರಿದೆ. ಅವರದ್ದೇ ಸ್ವಂತ ಆಸ್ಪತ್ರೆ ಕೂಡ ಇದೆ. ಮಗಳನ್ನೂ ಡಾಕ್ಟರ್ ಮಾಡೋದಕ್ಕೆ ತಂದೆ ಸಾಕಷ್ಟು ಶ್ರಮ ಹಾಕಿದ್ದಾರೆ. ಮಗಳು ಬೇರೆ ರಾಜ್ಯಕ್ಕೆ ಹೋಗಿ ಮಗಳು ಮಾಡಿಕೊಂಡಿರೋ ಅನಾಹುತದ ಬಗ್ಗೆ ಗೊತ್ತಾಗ್ತಿದ್ದಂತೆ ಅನನ್ಯ ತಾಯಿಯ ದುಃಖದ ಕಟ್ಟೆ ಒಡೆದಿತ್ತು. ಮಗಳನ್ನ ನೆನೆದು ಅಕ್ಷರಶಃ ಕಣ್ಣೀರಾಗಿದ್ರು. ಮಗಳೇ ಏನಾಯ್ತಮ್ಮ ಅಂತ ಹೆತ್ತ ಕರುಳು ಆಕ್ರಂದನವಿಟ್ಟುಬಿಟ್ಟಿತ್ತು.
ಜೊತೆಯಲ್ಲಿ ಬಂದಿದ್ದ ಗೆಳತಿಯರಿಗೆ ಏನಾಯ್ತಮ್ಮ ನನ್ನ ಮಗಳಿಗೆ ಏನಾಯ್ತು ಅಂತ ಅನನ್ಯ ತಾಯಿ ಕೇಳ್ತಿದ್ರೆ.. ಯಾರ ಬಳಿಯೂ ಉತ್ತರವಿಲ್ಲ. ಮಗಳು ಮಾಡ್ಕೊಂಡ ಅನಾಹುತಕ್ಕೆ ಈ ತಾಯಿ ಜೀವ ಗೋಳಾಡುದನ್ನ ನೋಡ್ತಿದ್ರೆ ಕರುಳು ಕಿವುಚಿದಂತಾಗುತ್ತೆ.
ನನ್ನ ಮಗಳು ನನಗೆ ಬೇಕು.. ನಿಮ್ಮನ್ನೇ ನಂಬಿ ಕಳಿಸಿದ್ದೆ.. ನಾನು ಹೇಗ್ ಬದುಕೋದು ಈಗ. ರಾತ್ರಿಯೆಲ್ಲಾ ಹುಡುಕಾಡಿದ್ರೂ ಸಿಗ್ತಿಲ್ಲ... ಯಾರೆಲ್ಲಾ ಇದ್ರಿ.. ನನಗೆ ನನ್ನ ಮಗಳನ್ನ ತೋರಿಸಿ ಪ್ಲೀಸ್. ನಿಮ್ಮ ಕಾಲಿಗೆ ಬೀಳ್ತೀನಿ.. ನನ್ನ ಮಗಳೇ ನನಗೆ ಪ್ರಾಣ. ಅಯ್ಯೋ ಮಕ್ಕಳು ಹೇಳಿದ್ರೆ ಕೇಳಲ್ವೆ.. ದೇವರ ದರ್ಶನ ಮಾಡ್ತೀನಿ ಅಂದಿದ್ದಕ್ಕೆ ಕಳಿಸಿದ್ದೆ. ಸ್ಮಿತಾ ಏನಾಯ್ತು ಹೇಳು. ಅವಳು ಹಾರ್ತಿದ್ರೆ ನೀನು ಹೇಗಮ್ಮ ನೋಡ್ತಾ ನಿಂತಿದ್ದೆ?
ದುರಂತ ಏನಂದ್ರೆ ಅನನ್ಯ ರಾತ್ರಿಯೆಲ್ಲಾ ಕೂತು ರಾಮಾಯಣ ಓದಿದ್ದಳಂತೆ.. ಉಪವಾಸ ಇದ್ದು ರಾಮಕೋಟಿ ಬರೆದಿದ್ದಳಂತೆ. ಆಂಜನೇಯನ ದರ್ಶನ ಮಾಡಿದ್ದಳಂತೆ. ಆದ್ರೆ ದೇವರು ಮಾತ್ರ ಅನನ್ಯಾ ಬಾಳಲ್ಲಿ ಎಂದಿಗೂ ಕ್ಷಮಿಸಲಾರದ ದ್ರೋಹ ಮಾಡಿಬಿಟ್ಟಿದ್ದಾನೆ. ನನ್ನ ಮಗಳಿಗೆ ಒಂದೇ ಒಂದು ಕೆಟ್ಟ ಚಟ ಇರಲಿಲ್ಲ.. ಅವಳಿಗ್ಯಾಕೆ ಹೀಗಾಯ್ತು ಅಂತ ಅನನ್ಯ ಕುಟುಂಬ ಕಣ್ಣೀರಿಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ