newsfirstkannada.com

ಶಕ್ತಿ ಯೋಜನೆಯಿಂದಾಗಿ ಆಟೋದವರ ಜೀವನ ಹೇಗೆ?; ಸರ್ಕಾರಕ್ಕೆ ಡಾ.ಬಾಬು ರಾಜೇಂದ್ರ ನಾಯಕ ಪ್ರಶ್ನೆ

Share :

11-06-2023

    ಇಂದಿನಿಂದ ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ಜಾರಿ

    ಆಟೋದವರಿಗೆ ಹೊಡೆತ ಕೊಡುತ್ತಾ ಶಕ್ತಿ ಯೋಜನೆ

    ಉಚಿತ ಪ್ರಯಾಣದಿಂದ ಆಟೋ ಚಾಲಕರ ಜೀವನ ಹೇಗೆ?

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಲಾಗುತ್ತಿದೆ. ಇದರ ಮಧ್ಯೆ ವಿಜಯಪುರದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಬಾಬು ರಾಜೇಂದ್ರ ನಾಯಕ ಅಪಸ್ವರ ಎತ್ತಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣ ಕೊಡೋದನ್ನು ಸ್ವಾಗತಿಸುತ್ತೇವೆ. ಆದ್ರೆ ರಾಜ್ಯದಲ್ಲಿ 2.16 ಲಕ್ಷ ಆಟೋಗಳು ಸಂಚರಿಸುತ್ತಿವೆ. ಆಟೋದಲ್ಲಿ ಬರುವ ಆದಾಯವನ್ನೇ ನಂಬಿ ಅನೇಕ ಜನರು ಸಂಸಾರ ನೌಕೆ ದೂಡುತ್ತಿದ್ದಾರೆ. ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲು ಹೊರಟರೆ ಮನೆಯ ಯಜಮಾನ ಸಹ ಅದೇ ದಾರಿ ಅನುಸರಿಸುತ್ತಾರೆ. ಆದರೆ ಆಟೋವನ್ನೇ ನಂಬಿದವರ ಜೀವನ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಆಟೋ ನಂಬಿ ಸಾಲ ಮಾಡಿದ ಬಡ ಆಟೋ ಚಾಲಕನ ಬದುಕಿನ ಭದ್ರತೆಗೆ ಬೆಲೆ ಇಲ್ಲವೇ?. ಅವರು ಸಾಲ ಎಲ್ಲಿಂದ ತೀರಿಸಬೇಕು ಸರ್ಕಾರ ಸಾಲದ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತೆ ಎಂದು ಗುಡುಗಿದ್ದಾರೆ.

ಅಂದಹಾಗೆಯೇ ಇಂದಿನಿಂದ ಶಕ್ತಿ ಯೋಜನೆ ಜಾರಿಗೆ ಬರಲಿದೆ. ಸಿಎಂ ಸಿದ್ದರಾಮಯ್ಯನವರು 11 ಗಂಟೆಗೆ ಬಸ್​ ಏರಿ ಕಂಡೆಕ್ಟರ್​ ಆಗುವ ಮೂಲಕ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಬಳಿ ಶಕ್ತಿ ಯೋಜನೆಗೆ ಚಾಲನೆ ದೊರಕಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಕ್ತಿ ಯೋಜನೆಯಿಂದಾಗಿ ಆಟೋದವರ ಜೀವನ ಹೇಗೆ?; ಸರ್ಕಾರಕ್ಕೆ ಡಾ.ಬಾಬು ರಾಜೇಂದ್ರ ನಾಯಕ ಪ್ರಶ್ನೆ

https://newsfirstlive.com/wp-content/uploads/2023/06/babu-Rajendra-Nayaka.jpg

Load More