/newsfirstlive-kannada/media/post_attachments/wp-content/uploads/2024/07/Bhaskar-shenoy-3.jpg)
ಮಳೆಗಾಲದ ಸಮಯದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ವೈರಲ್​ ಫೀವರ್​ಗಳು ಮತ್ತು ಡೆಂಗ್ಯೂ ಪ್ರಕರಣಗಳ ಬಗ್ಗೆ ಹಿರಿಯ ಪತ್ರಕರ್ತೆಯಾದ ಅರ್ಚನಾ ರವಿಕುಮಾರ್​ರವರು ಮಣಿಪಾಲ್​​ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್​ ಭಾಸ್ಕರ್​ ಶೆಣೈಯವರನ್ನು ಸಂದರ್ಶನ ಮಾಡಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಪೋಷಕರಿಗೆ ಡೆಂಗ್ಯೂ ತಡೆಗಟ್ಟಲು ಮುನ್ನಚ್ಚರಿಕೆ ಕ್ರಮವನ್ನು ಮತ್ತು ವೈರಲ್​ ಫೀವರ್, ಡೆಂಗ್ಯೂ ಪ್ರಕರಣದ ಗೊಂದಲದ ಕುರಿತಾಗಿ ವಿಶೇಷ ಮಾಹಿತಿಯನ್ನು ಡಾ. ಭಾಸ್ಕರ್​ ಶೆಣೈಯವರು ನೀಡಿದ್ದಾರೆ.
ಡೆಂಗ್ಯೂ ಲಕ್ಷಣವಿದ್ರು, ರಿಸಲ್ಟ್​ ನೆಗೆಟಿವ್​ ಬಂದ್ರೆ?
ಸಾಮಾನ್ಯವಾಗಿ ಶೇ.10ರಷ್ಟು ಮಕ್ಕಳಲ್ಲಿ ಈ ತರಹ ಇರುತ್ತೆ. ಡೆಂಗ್ಯೂ ರೋಗ ಲಕ್ಷಣ ಇದ್ದಾಗ ಎಲ್ಲವೂ ಆ ಕಾಯಿಲೆಯಂತಲ್ಲ. ಕೆಲವು ವೈರಸ್​ಗಳು ಡೆಂಗ್ಯೂ ತರಹ ಇರುತ್ತವೆ. ಆದ್ರೆ ಡೆಂಗ್ಯೂವಲ್ಲ. ಚಿಕನ್​ಗುನ್ಯಾ ಕೇಸ್​ ಇವೆ. ಕಳೆದ ಒಂದು ತಿಂಗಳಲ್ಲಿ 8-10 ಕೇಸ್​ ನೋಡಿದ್ದೇನೆ. ಅದರಲ್ಲಿ ಜ್ವರ ಬರುವುದು, ಮೈ-ಕೈ ನೋವು, ಗಂಟು-ಸಂಧಿ ನೋವು ಜಾಸ್ತಿ ಇರುತ್ತದೆ.
ಡೆಂಗ್ಯೂ ಲೈಕ್​ ಇಲ್ನೆಸ್​ಗೆ ಪ್ಲೇಟೇಟ್​ ಕಡಿಮೆಯಾಗುತ್ತಾ?
ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತೆ. ಆದರೆ ಡೆಂಗ್ಯೂನಲ್ಲಿ 5 ದಿನ ಅತಿಯಾದ ಜ್ವರ ಇರುತ್ತೆ. ಆದರೆ ಡೆಂಗ್ಯೂ ಜ್ವರ ಹೋದ ಮೇಲೆ ತೊಂದರೆಯಾಗುತ್ತದೆ. ಟೈಪಾಯ್ಡ್​​, ಮಲೇರಿಯಾ ಬಂದಾಗ ತೊಂದರೆಯಾಗುತ್ತದೆ. ಆದ್ರೆ ಡೆಂಗ್ಯೂ ಕೇಸ್​ನಲ್ಲಿ ಇದು ಉಲ್ಟಾ. ಜ್ವರ ಹೋದ ಮೂರು ದಿನ ಆಪತ್ತಿನ ಸಂದರ್ಭ ಎದುರಾಗುತ್ತದೆ. ಎಲ್ಲರಿಗೂ ಹಾಗೆ ಆಗಲ್ಲ. 100ರಲ್ಲಿ​ 10 ಮಂದಿ ಆಪತ್ತಿನತ್ತ ಹೋಗ್ತಾರೆ. ಈ ವೇಳೆ ಅವರ ಮೇಲೆ ಹದ್ದಿನ ಕಣ್ಣು ಇಡಬೇಕಾಗುತ್ತದೆ. ಜ್ವರ ಹೋದ ಮೇಲೆ ಮಗು ಮಲಗಿಕೊಂಡು ಇರುತ್ತದೆ. ವಾಂತಿ ಮಾಡುತ್ತದೆ, ಹೊಟ್ಟೆ ನೋವು ಇರುತ್ತೆ, ಸುಸ್ತು ಇರುತ್ತದೆ, ಮೂತ್ರ ಮಾಡುವುದು ಕಡಿಮೆ ಮಾಡುತ್ತದೆ. ಈ ರೀತಿ ಆದ್ರೆ ವಿಷಮ ಸ್ಥಿತಿಯ ಮುನ್ಸೂಚನೆಗಳು.
ಇದನ್ನೂ ಓದಿ: Special Interview: ನಿಮ್ಮ ಮಗುವಿಗೆ ಡೆಂಗ್ಯೂ ಬಂದಿದೆಯಾ? ಎಷ್ಟು ದಿನದೊಳಗೆ ವೈದ್ಯರನ್ನು ಕಾಣಬೇಕು?
1990ರ ಮೇಲೆ ಇಷ್ಟು ಡೆಂಗ್ಯೂ ಪ್ರಕರಣಗಳು ನೋಡಿದ್ದು ಜಾಸ್ತಿ. ಆವಾಗ ತೊಂದರೆ ಜಾಸ್ತಿ ಇತ್ತು. ಇದರ ಬಗ್ಗೆ ಜ್ಞಾನ ವೈದ್ಯರಿಗೂ ಇರಲಿಲ್ಲ, ರೋಗಿಗಳಿಗೂ ಇರಲಿಲ್ಲ. ಜ್ವರ ಬಿಟ್ಟ ಮೇಲೆ ಮಗು ಸುಸ್ತಿಗೆ ಮಲಗಿದೆ ಎಂದು ಬಿಡುತ್ತಿದ್ದೆವು. ಆ ಸಮಯದಲ್ಲಿ ಚಿಕಿತ್ಸೆ ನೀಡಿದ್ರೆ 100ಕ್ಕೆ 100 ಗುಣಮುಖರಾಗುತ್ತಾರೆ.
ಪ್ಲೇಟೇಟ್​ ಡೌನ್​ ಆದಾಗ ಸೇಫ್​​ ಝೋನ್​? ಡೇಂಜರ್​ ಝೋನ್​ ಯಾವುದು?
ಸಾಮಾನ್ಯವಾಗಿ ಜನರು ಡೆಂಗ್ಯೂ ಕೇಸ್​ನಲ್ಲಿ ಪ್ಲೇಟೇಟ್​ ಕಡಿಮೆಯಾದರೆ ಡೇಂಜರ್​ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಡೆಂಗ್ಯೂ ಕೇಸ್​ನಲ್ಲಿ ಪ್ಲೇಟೇಟ್​ ಕಡಿಮೆಯಾಗಿ ತೊಂದರೆಯಾಗಲ್ಲ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ತೊಂದರೆಯಾಗುತ್ತೆ. ಇದನ್ನು ಹೀಮೊಕಾನ್ಸಟ್ರೇಷನ್​ ಎನ್ನುತ್ತೇವೆ.
ರಕ್ತ ಎಷ್ಟು ಹೆಪ್ಪಾಗಿರಬೇಕು ಎನ್ನುವುದು ವಯಸ್ಸಿನ ಮೇಲೆ ಆಧಾರವಾಗಿರುತ್ತದೆ. 5 ವರ್ಷದ ಮಗುವಿಗೆ 30, 15 ವರ್ಷದ ಹುಡುಗನಿಗೆ 40-45, ನನಗೆ 48-50 ಇರಬಹುದು. ಡೆಂಗ್ಯೂ ರಕ್ತನಾಳಗಳನ್ನು ಡ್ಯಾಮೇಜ್​ ಮಾಡುತ್ತದೆ. ಡ್ಯಾಮೇಜ್​ ಮಾಡಿದ ತಕ್ಷಣದ ಅದರಲ್ಲಿರುವ ನೀರಿನ ಅಂಶ ಹೊರಬರುತ್ತದೆ. ಅದರಲ್ಲಿ ರಕ್ತ ಗಟ್ಟಿಯಾಗುತ್ತದೆ.
ಇದನ್ನೂ ಓದಿ: Dr Bhaskar Shenoy: ದಿನಕ್ಕೆ ಎಷ್ಟು ಡೆಂಗ್ಯೂ ಕೇಸ್​ ಬರುತ್ತೆ? ಇದರ ಲಕ್ಷಣಗಳ ಬಗ್ಗೆ ವೈದ್ಯರು ಹೇಳೊದೇನು?
ಸಾಮಾನ್ಯವಾಗಿ ಒಂದು ಮನುಷ್ಯನಿಗೆ ಪ್ಲೇಟೇಟ್​ ಒಂದೂವರೆ ಲಕ್ಷದಿಂದ ನಾಲ್ಕುವರೇ ಲಕ್ಷದವರೆಗೆ ಇರುತ್ತದೆ. ಡೆಂಗ್ಯೂ ಕೇಸ್​ನಲ್ಲಿ ಜ್ವರ ಬಿಡ್ತಾ ಬರುವಾಗ ಕಡಿಮೆಯಾಗುತ್ತದೆ. ನನ್ನ ಬಳಿ ಬಂದ ರೋಗಿಗಳಲ್ಲಿ 10 ಸಾವಿರ, 13 ಸಾವಿರ ಪ್ಲೇಟೇಟ್​ ಇರುವವರು ಇದ್ದಾರೆ. ಅವರಿಗೆ ಪ್ಲೇಟೇಟ್​ ಕೊಡುವುದಿಲ್ಲ, ಕೊಡುವುದು ಸರಿಯಲ್ಲ. WHO ಹೇಳುವಂತೆ ಅದನ್ನು ಕೊಟ್ರೆ ಹೆಚ್ಚು ಹಾನಿಯಾಗುತ್ತದೆ ಹೊರತು ಕೊಡದಿರುವುದರಿಂದ ಹಾನಿಯಾಗಲ್ಲ. 10 ಸಾವಿರಕ್ಕಿಂತ ಕಡಿಮೆಯಾಗಿದ್ರೆ ಪ್ಲೇಟೇಟ್​ ಕೊಡುತ್ತೇವೆ. ಮೂಗಲ್ಲಿ ಬಾಯಲ್ಲಿ ರಕ್ತ ಸೋರುವಿಕೆ ಇರುತ್ತದೆ. PCV ಅಥವಾ ಹಿಮಿಟೋಕ್ರೆಟ್​​ ಜಾಸ್ತಿಯಾದಾಗ ಅಪಾಯಕಾರಿ. ಹೆಚ್ಚಿನ ತೊಂದರೆ ಅದರಿಂದ ಆಗೋದು.
ಪ್ಲೇಟ್ಲೇಟ್​​ ಜಾಸ್ತಿ ಮಾಡಲು ಮಾತ್ರೆ, ಹಣ್ಣುಗಳನ್ನು ತಿನ್ನೋದು ಎಷ್ಟು ಸರಿ?
ಇದು ಯಾವುದು ಸರಿಯಲ್ಲ. ಡೆಂಗ್ಯೂ ಜ್ವರ ಬಂದು ಕಡಿಮೆಯಾದಾಗ ಪ್ಲೇಟೇಟ್​​ಗಳು ತಾನಾಗಿಯೇ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿಯಿಂದ ಪ್ಲೇಟೇಟ್​​ ಜಾಸ್ತಿಯಾಗುತ್ತದೆ ಹೊರತು, ಯಾವ ಹಣ್ಣಿನಿಂದ, ರಸದಿಂದ, ಮಾತ್ರೆಯಿಂದ ಆಗಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us