newsfirstkannada.com

ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!

Share :

Published September 6, 2024 at 6:22am

    ಡಾ.ಬ್ರೋ ಕಂಪನಿಯಲ್ಲಿ ಯಾವ್ಯಾವ ಹುದ್ದೆಗಳು ಖಾಲಿ ಇವೆ..?

    ಅರ್ಹ, ಆಸಕ್ತಿ ಅಭ್ಯರ್ಥಿಗಳು ಅಪ್ಲೇ ಮಾಡಬಹುದು

    ಬೆಂಗಳೂರಿನಲ್ಲಿ ಇರುವ ಕಚೇರಿಯಲ್ಲಿ ಜಾಬ್​ ಇವೆ

ಡಾ.ಬ್ರೋ ಯೂಟ್ಯೂಬ್​ನಲ್ಲಿ ಕನ್ನಡಿಗರಿಗೆ ವಿಶ್ವ ತೋರಿಸಿದ ಯುವಕ. ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕದ್ಯಾಂತ ಎಲ್ಲರಿಗೂ ಚಿರಪರಿಚಿತ. ಇತ್ತೀಚೆಗಷ್ಟೇ ಬೆಂಗಳೂರಿನ ವಿಜಯನಗರದಲ್ಲಿ ಗೋಪ್ರವಾಸ ಎನ್ನುವ ಆಫೀಸ್​ ಅನ್ನು ಡಾ.ಬ್ರೊ ತೆರೆದಿದ್ದಾರೆ. ಸದ್ಯ ಇವರು ಕನ್ನಡಿಗರಿಗೆ ಬಿಗ್ ಆಫರ್​​ವೊಂದನ್ನ ಕೊಟ್ಟಿದ್ದು ನೀವು ಆಯ್ಕೆ ಆದರೆ ಡಾ.ಬ್ರೊ ಜೊತೆ ಕೆಲಸ ಮಾಡಬಹುದು.

ಗೋಪ್ರವಾಸದಿಂದ ಜನಸಾಮಾನ್ಯರು ದೇಶ, ವಿದೇಶಗಳನ್ನು ಸುತ್ತುವ ಅವಕಾಶವನ್ನು ತನ್ನ ಕಂಪನಿಯ ಮೂಲಕ ಡಾ.ಬ್ರೋ ಈಗಾಗಲೇ ನೀಡಿದ್ದಾರೆ. ಇದಕ್ಕಾಗಿ ಸಿಲಿಕಾನ್​ ಸಿಟಿಯಲ್ಲಿ ಓಪನ್ ಮಾಡಿರುವ ಅವರ ಗೋಪ್ರವಾಸ ಕಚೇರಿಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಆಸಕ್ತ, ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರಂತೆ. ಈ ಬಗ್ಗೆ ತಮ್ಮ ಇನ್​ಸ್ಟಾದಲ್ಲಿ ಡಾ.ಬ್ರೋ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಗೋಪ್ರವಾಸ ಕಂಪನಿಯಲ್ಲಿ ಖಾಲಿ ಇರುವ ಉದ್ಯೋಗಗಳು ಎಂದರೆ, ಇಂಟರ್​​ನ್ಯಾಷನಲ್​ ಆಪರೇಶನ್ ಎಕ್ಸಿಕ್ಯೂಟಿವ್ (ಅನುಭವಸ್ಥರು), ಹಾಲಿ ಡೇ ಪ್ಯಾಕೇಜ್​ನಲ್ಲಿ ಜಾಬ್ ಮಾಡಿ ಅನುಭವ ಇರುವ ಅಭ್ಯರ್ಥಿಗಳು ಕೆಲಸಕ್ಕೆ ಬೇಕಾಗಿದೆ. ದೇಶಿಯ ಆಪರೇಶನ್ ಎಕ್ಸಿಕ್ಯೂಟಿವ್, ಹಾಲಿಡೇ ಪ್ಯಾಕೇಜ್​ನಲ್ಲಿ ಜಾಬ್ ಮಾಡಿದವರು ಬೇಕಾಗಿದ್ದಾರೆ. ಇಷ್ಟೇ ಅಲ್ಲ, ಏಷ್ಯಾ ಖಂಡದಲ್ಲಿರುವ ದೇಶಗಳಿಗೆ ವೀಸಾ ನೀಡುವ ಎಕ್ಸ್​​ಪರ್ಟ್​ಗಳು ಹಾಗೂ ಟಿಕೆಟ್ ಬುಕ್ಕಿಂಗ್, ಕೊಡುವ ಉದ್ಯೋಗ ಖಾಲಿ ಇದ್ದು ಆಸಕ್ತರು ಸಂಪರ್ಕ ಮಾಡಬಹುದು.

  • ಒಟ್ಟು ಹುದ್ದೆಗಳು- 04
  • ಭಾಷೆಗಳು- ಕನ್ನಡ. ಇಂಗ್ಲಿಷ್, ಹಿಂದಿ ಮಾತನಾಡಲು ಬರಬೇಕು
  • ಡಾ.ಬ್ರೋ ಸ್ಯಾಲರಿ ಬಗ್ಗೆ ಮಾಹಿತಿ ನೀಡಿಲ್ಲ.
  • ಆಸಕ್ತಿ ಹೊಂದಿದ್ದರೇ ಈ ಲಿಂಕ್ ಕ್ಲಿಕ್ ಮಾಡಿ- http://[email protected]
  • ವಿದ್ಯಾರ್ಹತೆ- ಪಿಯುಸಿ, ಪದವಿ, ಟೂರಿಸಂ ಕೋರ್ಸ್​ ಮಾಡಿದವರಿಗೆ ಫಸ್ಟ್ ಚಾನ್ಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!

https://newsfirstlive.com/wp-content/uploads/2024/09/DR_BRO-1.jpg

Load More