newsfirstkannada.com

ಕುಟುಂಬ ರಾಜಕಾರಣ ದೇಶದಲ್ಲಿ ಅಪ್ರಸ್ತುತ -ಡಾ. ಮಂಜುನಾಥ್ ಕೌಂಟರ್..!

Share :

Published March 23, 2024 at 2:39pm

    ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುನಾಥ್

    ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಕೌಂಟರ್ ನೀಡಿದ ಬಿಜೆಪಿ ಅಭ್ಯರ್ಥಿ

    ಡಾ. ಸಿ.ಎನ್. ಮಂಜುನಾಥ್ ಕ್ರಿಕೆಟ್ ಆಡಿದ ವಿಡಿಯೋ ಇಲ್ಲಿದೆ..!

ಬೆಂಗಳೂರ ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ರಾಮನಗರದಲ್ಲಿ ಮಾತನಾಡಿ.. ಕುಟುಂಬ ರಾಜಕಾರಣ ಅನ್ನೋದು ರಾಜ್ಯ, ದೇಶದಲ್ಲಿ ಅಪ್ರಸ್ತುತ ಎಂದಿದ್ದಾರೆ.

ಕುಟುಂಬ ರಾಜಕಾರಣ ಮುಗಿದು, ಇದೀಗ ಅಳಿಯನನ್ನ ಕಣಕ್ಕೆ ಇಳಿಸಿದ್ದಾರೆ ಎಂಬ ಡಿ.ಕೆ.ಸುರೇಶ್ ಅವರ ಹೇಳಿಕೆಗೆ ಕೌಂಟರ್ ನೀಡಿರುವ ಅವರು.. ಈಗ ಕಾಂಗ್ರೆಸ್​ನ ಅಭ್ಯರ್ಥಿಗಳ ಲಿಸ್ಟ್ ನೋಡಿದರೆ ಗೊತ್ತಾಗುತ್ತದೆ. ಕುಟುಂಬ ರಾಜಕಾರಣ ಅನ್ನೋದು ರಾಜ್ಯ, ದೇಶದಲ್ಲಿ ಅಪ್ರಸ್ತುತ. ಮಗ, ಮಗಳು, ಸೊಸೆ, ಅಣ್ಣ ಎಲ್ಲರೂ ಇದ್ದಾರೆ ಅದೆಲ್ಲವೂ ಅಪ್ರಸ್ತುತ ಅನ್ನೋ ಮೂಲಕ ಕಾಂಗ್ರೆಸ್​ ಅಭ್ಯರ್ಥಿಗಳ ಲಿಸ್ಟ್​ ಪ್ರಸ್ತಾಪಿಸಿ ಟಾಂಗ್ ನೀಡಿದ್ದಾರೆ.

ಕಳೆದ ಹತ್ತು ದಿನಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. 8 ವಿಧಾನಸಭೆ ಕ್ಷೇತ್ರಗಳಲ್ಲಿ ಅಭೂತಪೂರ್ವ ರೆಸ್ಪಾನ್ಸ್ ಸಿಕ್ತಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸರಣಿ ಸಭೆಗಳನ್ನ ಮಾಡ್ತಿದ್ದಾರೆ. ನಿನ್ನೆ ಬೆಂಗಳೂರು ದಕ್ಷಿಣ, ಆರ್​.ಆರ್.ನಗರ, ಕುಣಿಗಲ್ ಹೋಗಿದ್ದೆ. ಬಹುಮುಖ್ಯವಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಎರಡೂ ಹೃದಯ ಒಟ್ಟಾಗಿವೆ. ಇದನ್ನೆಲ್ಲ ನೋಡ್ತಿದ್ರೆ ನಮ್ಮ ಗೆಲುವು 100% ಖಾತ್ರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಟುಂಬ ರಾಜಕಾರಣ ದೇಶದಲ್ಲಿ ಅಪ್ರಸ್ತುತ -ಡಾ. ಮಂಜುನಾಥ್ ಕೌಂಟರ್..!

https://newsfirstlive.com/wp-content/uploads/2024/03/cn-manjunath-1-1.jpg

Load More