newsfirstkannada.com

ಮಂಡ್ಯದಿಂದ ಸುಮಲತಾ ವಿರುದ್ಧ ನಿಲ್ತಿರಾ..? ಈ ಬಗ್ಗೆ ಡಾ. CN ಮಂಜುನಾಥ್ ಹೇಳಿದ್ದೇನು..?

Share :

Published February 21, 2024 at 3:55pm

Update February 21, 2024 at 3:51pm

  ಮಂಡ್ಯ ಲೋಕಸಭಾ ಕ್ಷೇತ್ರದಿಂದ ಡಾ. ಸಿಎನ್ ಮಂಜುನಾಥ್ ಕಣಕ್ಕೆ

  ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಏನಂದ್ರು?

  ನಾನು ರಾಷ್ಟ್ರ ಸೇವೆ ಮಾಡಲಿ ಅನ್ನೋದು ಜನರ ಬಯಕೆ ಎಂದರು!

ಮಂಡ್ಯ: ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಲೋಕಸಭಾ ಚುನಾವಣೆಗೆ ನಿಲ್ಲಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಅದರಲ್ಲೂ ಮಂಡ್ಯ ಕ್ಷೇತ್ರದಿಂದಲೇ ಡಾ. ಸಿಎನ್ ಮಂಜುನಾಥ್ ಸ್ಪರ್ಧೆ ಮಾಡಲಿ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಒತ್ತಾಯಿಸಿದ್ದಾರೆ. ಸದ್ಯ ಈ ಕುರಿತು ಡಾ. ಸಿಎನ್ ಮಂಜುನಾಥ್ ಮಾತಾಡಿದ್ದಾರೆ.

ಜನ ನನ್ನನ್ನು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದಾರೆ. ಇದರ ಬಗ್ಗೆ ನಾನು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕಾ? ಲೋಕಸಭಾ ಚುನಾವಣೆಗೆ ನಿಲ್ಲಬೇಕಾ? ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ನಾನು ರಾಷ್ಟ್ರಕ್ಕೂ ಸೇವೆ ಮಾಡಲಿ ಅನ್ನೋದು ಜನರ ಬಯಕೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೀರಿ, ರಾಜಕೀಯದಲ್ಲೂ ಬದಲಾವಣೆ ತನ್ನಿ ಎಂದು ಜನ ಕೇಳುತ್ತಿದ್ದಾರೆ. ಸ್ಪರ್ಧೆ ಬಗ್ಗೆ ಮುಂದೆ ನಿರ್ಧಾರ ಮಾಡ್ತೀನಿ. ಇದರ ಕುರಿತು ಆಲೋಚನೆ ಮಾಡುತ್ತಿದ್ದೇನೆ ಎಂದರು.

ಭಾರೀ ಸದ್ದು ಮಾಡಿದ್ದ ಮಂಡ್ಯ ಕ್ಷೇತ್ರ..!

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರೀ ಸದ್ದು ಮಾಡಿದ್ದ ಕ್ಷೇತ್ರ ಮಂಡ್ಯ. ಇದಕ್ಕೆ ಕಾರಣ ಸುಮಲತಾ ಅಂಬರೀಶ್​​​ ವಿರುದ್ಧ ಅಂದಿನ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಮಗ ನಿಖಿಲ್​​ ಕಣದಲ್ಲಿದ್ದಿದ್ದು. ಅದರಲ್ಲೂ ಸುಮಲತಾ ಪರ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿದ್ದು. ಈ ಬಾರಿ ಕೂಡ ಮಂಡ್ಯ ಕ್ಷೇತ್ರದ ಚುನಾವಣೆ ಸದ್ದು ಮಾಡುತ್ತಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡ್ರೂ ನಾನು ಮಂಡ್ಯ ಬಿಡೋ ಮಾತೇ ಇಲ್ಲ ಎಂದಿದ್ದಾರೆ ಸುಮಲತಾ. ಈಗ ಸುಮಲತಾ ಎದುರು ನಿಖಿಲ್​ ಮಾತ್ರವಲ್ಲ ಗೌಡ್ರ ಕುಟುಂಬದ ಮತ್ತೊಂದು ಹೆಸರು ಓಡಾಡುತ್ತಿದೆ. ಅದುವೇ ಡಾ. ಸಿಎನ್​ ಮಂಜುನಾಥ್​​. ಹಾಗಾಗಿಯೇ ಈ ಬಾರಿಯ ಮಂಡ್ಯ ಚುಣಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಿಂದ ಸುಮಲತಾ ವಿರುದ್ಧ ನಿಲ್ತಿರಾ..? ಈ ಬಗ್ಗೆ ಡಾ. CN ಮಂಜುನಾಥ್ ಹೇಳಿದ್ದೇನು..?

https://newsfirstlive.com/wp-content/uploads/2024/02/Mandya-CN-Manjunath.jpg

Load More