/newsfirstlive-kannada/media/post_attachments/wp-content/uploads/2025/04/vinay-bjp1.jpg)
ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ವಾಟ್ಸ್ಆ್ಯಪ್, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯ ಇರಲ್ಲ. ಅದನ್ನ ಪರಿಶೀಲಿಸಿ ಸತ್ಯ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!
ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯ ಇರಲ್ಲ. ಅದನ್ನ ಪರಿಶೀಲಿಸಿ ಸತ್ಯ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆ ಸಂಬಂಧಪಟ್ಟ ಡಿಸಿಪಿ ಈ ಪ್ರಕರಣದ ತನಿಖೆ ಮಾಡ್ತಾರೆ. ಯಾರದ್ದಾದರೂ ಪ್ರಭಾವಿ ಇದ್ದರೆ ಪರಿಶೀಲನೆ ಮಾಡ್ತೀವಿ. ವರದಿ ಆಧರಿಸಿ ಏನ್ ಕ್ರಮ ತಗೋಬೇಕು ತಗೊಳ್ತೀವಿ ಎಂದು ಭರವಸೆ ನೀಡಿದ್ದಾರೆ.
ಏನಿದು ಪ್ರಕರಣ..?
ಕೊಡಗು ಜಿಲ್ಲೆಯ ಸೋಮವಾರಪೇಟೆ ಗೋಣಿಮರೂರು ನಿವಾಸಿ ವಿನಯ್ ಸೋಮಯ್ಯ ಬೆಂಗಳೂರಿನ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಬಿಜೆಪಿ ಕಾರ್ಯಕರ್ತರಾಗಿದ್ದು, ಇಂದು ಬೆಳಗ್ಗೆ 4.30ಕ್ಕೆ ಸಾವಿಗೆ ಶರಣಾಗಿದ್ದಾರೆ. ಸಾಯುವುದಕ್ಕೂ ಮುನ್ನ ತಮ್ಮ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿಸಿದ್ದಾರೆ ಎನ್ನಲಾಗಿದೆ. ಸಾಯುವುದಕ್ಕೂ ಮೊದಲು ವಿನರ್ ಬರೆದಿದ್ದಾರೆ ಎನ್ನಲಾಗುತ್ತಿರುವ ಡೆತ್ನೋಟ್ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಮೇಲೆ ಆರೋಪ ಮಾಡಿದ್ದಾರೆ.
ವಿನಯ್ ಸೋಮಯ್ಯ ಮೇಲಿದ್ದ ಆರೋಪ ಏನು..?
ಮೃತ ವಿನಯ್ ಕೊಡಗು ಸಮಸ್ಯೆ, ಸಲಹೆ ಸೂಚನೆಯ ವಾಟ್ಸ್ಆ್ಯಪ್ ಗ್ರೂಪ್ ಮಾಡಿದ್ದರು. ಈ ಗ್ರೂಪ್ ಮೂಲಕ ಕಾಂಗ್ರೆಸ್ ಶಾಸಕ ಪೊನ್ನಣ್ಣ ತೇಜೋವಧೆಯ ಆರೋಪ ಹೊತ್ತಿದ್ದರು. ಈ ಬಗ್ಗೆ ಕೊಡಗಿನಲ್ಲಿ ರಾಜಕೀಯ ಪ್ರೇರಿತ ಪ್ರಕರಣದಲ್ಲಿ FIR ದಾಖಲಾಗಿತ್ತು. ಗ್ರೂಪ್‌ನಲ್ಲಿ ಯಾರೋ ಹಾಕಿದ್ದ ಮೆಸೇಜ್‌ಗೆ ವಿನಯ್ ಮೇಲೆ FIR ಆಗಿತ್ತು.
ದೂರು ನೀಡಿದ್ದು ಯಾರು..?
ಮಡಿಕೇರಿ ನಗರ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ದೂರು ನೀಡಿದ್ದರು. ಅದರಂತೆ ಕೆಲವು ದಿನಗಳ ಹಿಂದೆ ವಿನಯ್ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮನನೊಂದು ಆತ್ಮಹತ್ಯೆ ಮಾಡಿಕೊಂಡುವ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗುತ್ತಿದೆ. ವಿನಯ್ ಬರೆದಿರೋದು ಎನ್ನಲಾಗುತ್ತಿರುವ ಡೆತ್ನೋಟ್ನಲ್ಲಿ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಹೆಸರು ಉಲ್ಲೇಖವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ