DNA, ಫಿಂಗರ್​​ ಫ್ರಿಂಟ್ ಒಂದೇ ಅಲ್ಲ.. ಡೆಂಟಲ್ ಫೋರೆನ್ಸಿಕ್ ಮೂಲಕವೂ ಮೃತದೇಹ ಗುರುತು ಪತ್ತೆ..!

author-image
Veena Gangani
Updated On
DNA, ಫಿಂಗರ್​​ ಫ್ರಿಂಟ್ ಒಂದೇ ಅಲ್ಲ.. ಡೆಂಟಲ್ ಫೋರೆನ್ಸಿಕ್ ಮೂಲಕವೂ ಮೃತದೇಹ ಗುರುತು ಪತ್ತೆ..!
Advertisment
  • ಡಿಎನ್​ಎ, ಫಿಂಗರ್ ಪ್ರಿಂಟ್ ಜೊತೆ ಡೆಂಟಲ್ ಫಾರೆನ್ಸಿಕ್
  • ಮೂರು ರೀತಿಯಲ್ಲಿ ಶವಗಳ ಗುರುತು ಪತ್ತೆ ಹಚ್ಚಲು ಯತ್ನ
  • ಫಾರೆನ್ಸಿಕ್ ಡೆಂಟಿಸ್ಟ್ ಡಾ. ಜಯಶಂಕರ್ ಪಿಳ್ಳೈ ನೇತೃತ್ವದಲ್ಲಿ ಟೆಸ್ಟ್

ಗುಜರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು.

ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?

publive-image

ಟೇಕ್ಆಫ್​ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಬಿ.ಜೆ. ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ಗೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಧ್ವಂಸವಾಗಿದೆ. ಇದ್ರಿಂದಾಗಿ ಹಾಸ್ಟೆಲ್​ನ ಡೈನಿಂಗ್​ ಹಾಲ್​ನಲ್ಲಿ ಕುಳಿತು ಊಟ ಮಾಡ್ತಿದ್ದ ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ.

publive-image

ವಿಮಾನ ಪತನದಲ್ಲಿ ಜೀವ ಕಳೆದುಕೊಂಡ ಪ್ರಯಾಣಿಕರ ದೇಹ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಇದರಿಂದ ಮೃತದೇಹ ಪತ್ತೆ ಮಾಡೋದು ದೊಡ್ಡ ಸವಾಲಾಗಿದೆ. ಡಿಎನ್​ಎ ಮೂಲಕ ಮೃತದೇಹ ಪತ್ತೆಕಾರ್ಯ ನಡೆಯುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದಕ್ಕಾಗಿ ಸುಮಾರು ಮೂರು ದಿನಗಳು ಬೇಕಾಗಬಹುದು ಅಂತಾ ವರದಿ ಆಗಿದೆ.

ಹಾಗಂತ ವೈದ್ಯಾಧಿಕಾರಿಗಳು ಕೇವಲ DNA, ಫಿಂಗರ್ ಫ್ರಿಂಟ್ ಮೂಲಕ ಮಾತ್ರ ಮೃತದೇಹ ಗುರುತು ಪತ್ತೆ ಹಚ್ಚುತ್ತಿಲ್ಲ. ಡೆಂಟಲ್ ಫೋರೆನ್ಸಿಕ್ ಮೂಲಕವೂ ಶವಗಳ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಫೋರೆನ್ಸಿಕ್ ಡೆಂಟಿಸ್ಟ್ ಡಾ.ಜಯಶಂಕರ್ ಪಿಳ್ಳೈ ನೇತೃತ್ವದಲ್ಲಿ ಡೆಂಟಲ್ ಪೋರೆನ್ಸಿಕ್ ಟೆಸ್ಟ್ ಮಾಡಲಾಗುತ್ತಿದೆ..

publive-image

ಈಗಾಗಲೇ ಮೃತರ ಪೈಕಿ ಇದುವರೆಗೂ 135 ಮಂದಿಯ ಡೆಂಟಲ್ ಫೋರೆನ್ಸಿಕ್ ಡಾಟಾ ಸಂಗ್ರಹ ಮಾಡಲಾಗಿದೆ. ಮನುಷ್ಯರ ಹಲ್ಲುಗಳು 800 ಡಿಗ್ರಿ ಉಷ್ಣಾಂಶವನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆ. ಹೀಗಾಗಿ ವೈದ್ಯರು ಹಲ್ಲುಗಳ ಫೋರೆನ್ಸಿಕ್ ಪರೀಕ್ಷೆ ನಡೆಸುತ್ತಿದ್ದಾರೆ. ಸ್ನಾತಕೋತ್ತರ ಡೆಂಟಲ್ ವಿದ್ಯಾರ್ಥಿಗಳು, ಡೆಂಟಲ್ ವೈದ್ಯರಿಂದ ಡೆಂಟಲ್ ಫೋರೆನ್ಸಿಕ್ ಪರೀಕ್ಷೆ ನಡೆಯುತ್ತಿದೆ. ಈ ಬಗ್ಗೆ ಡೆಂಟಲ್ ಫೋರೆನ್ಸಿಕ್ ತಜ್ಞ ವೈದ್ಯ ಡಾ.ಜಯಶಂಕರ್ ಪಿಳ್ಳೈ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment