/newsfirstlive-kannada/media/post_attachments/wp-content/uploads/2025/06/GOVINDARAJ-3.jpg)
ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆ.ಗೋವಿಂದರಾಜ್​​ಗೆ ಸರ್ಕಾರ ಗೇಟ್​ಪಾಸ್ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ ಸಂಭವಿಸಿ 11 ಜನ ಜೀವ ಕಳೆದುಕೊಂಡ ಬೆನ್ನಲ್ಲೇ, ಸರ್ಕಾರ ಗೊವಿಂದರಾಜ್​​ಗೆ ಕೊಕ್ ನೀಡಿದೆ.
ಇದನ್ನೂ ಓದಿ: ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಮೇಲೆ ತಿರಂಗ ಧ್ವಜ ಹಾರಿಸಿದ ಪ್ರಧಾನಿ; ಮೋದಿ ಸಂಭ್ರಮದ ಕ್ಷಣಗಳು ಇಲ್ಲಿದೆ!
ಆರೋಪ ಏನು..?
ಕೆಎಸ್‌ಸಿಎ ಪರವಾಗಿ ಸಿಎಂ ಮೇಲೆ ಒತ್ತಡ ಹಾಕಿ ಸನ್ಮಾನ ಕಾರ್ಯಕ್ರಮ ನಡೆಯಲು ಕಾರಣರಾಗಿದ್ದರೆಂಬ ಆರೋಪ ಕೆ.ಗೋವಿಂದರಾಜ್​ ಮೇಲಿದೆ. ಜೂನ್ 3 ರಂದು ಐಪಿಎಲ್ ಫೈನಲ್ ಮ್ಯಾಚ್​ ನಡೆದಿತ್ತು. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ, ಪಂಜಾಬ್ ಕಿಂಗ್ಸ್​ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಬೆನ್ನಲ್ಲೇ ರಾಜ್ಯ ಸರ್ಕಾರದ ವತಿಯಿಂದ ಮಾರನೇಯ ದಿನ ಅಂದರೆ ಜೂನ್ 4ರ ಮಧ್ಯಾಹ್ನ ವಿಧಾನಸೌಧ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಲ್ಲಿ ಆರ್​ಸಿಬಿ ತಂಡ ಹಾಗೂ ಮ್ಯಾನೇಜ್ಮೆಂಟ್​ಗೆ ಸರ್ಕಾರದ ವತಿಯಿಂದ ಸನ್ಮಾನ ಮಾಡಲಾಯಿತು.
ಇದನ್ನೂ ಓದಿ: ರಂಗಧಾಮ ಕೆರೆಯಲ್ಲಿ ದಾರುಣ ಘಟನೆ.. ಇಬ್ಬರು ಮುದ್ದಾದ ಮಕ್ಕಳನ್ನು ಕೆರೆಗೆ ತಳ್ಳಿ ತಾಯಿ ಆತ್ಮಹತ್ಯೆ
ಇತ್ತ ಆರ್​ಸಿಬಿ ಮ್ಯಾನೇಜ್ಮೆಂಟ್ ಹಾಗೂ ಕೆಎಸ್​ಸಿಎ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಕ್ಟರಿ ಮೆರವಣಿಗೆ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಆರ್​ಸಿಬಿ ಅಭಿಮಾನಿಗಳನ್ನ ಆಹ್ವಾನಿಸಿತ್ತು. ಯಾವುದೇ ಪೂರ್ವ ತಯಾರಿ ಇಲ್ಲದೇ ಕಾರ್ಯಕ್ರಮ ಆಯೋಜನೆಗೊಂಡ ಪರಿಣಾಮ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಇದರಿಂದ 11 ಮಂದಿಯ ಜೀವ ಹೋಗಿದೆ. ಬೆನ್ನಲ್ಲೇ ಸರ್ಕಾರ ಹಾಗೂ ಆರ್​ಸಿಬಿ, ಕೆಎಸ್​ಸಿಎ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: 2 ವರ್ಲ್ಡ್ ಕಪ್ ವಿನ್ನರ್.. IPL ಸ್ಟಾರ್ ಪ್ಲೇಯರ್ ಪಿಯೂಷ್ ಚಾವ್ಲಾ ನಿವೃತ್ತಿ ಘೋಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ