/newsfirstlive-kannada/media/post_attachments/wp-content/uploads/2023/10/V-Lakshman.jpg)
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (NAAC) ಹಿರಿಯ ಸೌಲಭ್ಯ ಮತ್ತು ಸಂಪರ್ಕ ಅಧಿಕಾರಿ ಶ್ರೀ ವಿ. ಲಕ್ಷ್ಮಣ್ ಅವರಿಗೆ ಪ್ರತಿಷ್ಠಿತ ರಾಜ್​​ಪಾಲ್​​​ ಮೇಮೋರಿಯಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದ ಮತ್ತು ಭಾರತದ ಉನ್ನತ ಶಿಕ್ಷಣಕ್ಕೆ ತಮ್ಮದೇ ರೀತಿಯಲ್ಲಿ ಅಪಾರ ಕೊಡುಗೆ ನೀಡಿದ್ದನ್ನು ಗುರುತಿಸಿ ಪಬ್ಲಿಕ್​ ರಿಲೇಷನ್ಸ್​​​ ಕೌನ್ಸಿಲ್​ ಆಫ್​ ಇಂಡಿಯಾ ಶ್ರೀ ವಿ. ಲಕ್ಷ್ಮಣ್ ಅವರಿಗೆ ಪ್ರಶಸ್ತಿ ನೀಡಿದೆ.
/newsfirstlive-kannada/media/post_attachments/wp-content/uploads/2023/10/V-Lakshman.jpg)
ಗೌರವಾನ್ವಿತ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುಯಲ್ ಓರಮ್, ಪ್ರವಾಸೋದ್ಯಮ ಸಚಿವಾಲಯದ ಮಾಜಿ ಕಾರ್ಯದರ್ಶಿ ವಿನೋದ್ ಝುತ್ಶಿ, ಪಬ್ಲಿಕ್​ ರಿಲೇಷನ್ಸ್​​​ ಕೌನ್ಸಿಲ್​ ಆಫ್​ ಇಂಡಿಯಾದ ಗ್ಲೋಬಲ್​​ ಪ್ರೆಸಿಡೆಂಟ್​​ ಎಂ.ಬಿ ಜಯರಾಮ್ ಅವರು ತಮ್ಮ ಕೈಯ್ಯಾರೆ ಶ್ರೀ ವಿ. ಲಕ್ಷ್ಮಣ್ ಅವರಿಗೆ ಪ್ರಶಸ್ತಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಇವರನ್ನು ಕಮ್ಯೂನಿಕೇಟರ್​​ ಆಫ್​ ದಿ ಡಿಕೇಡ್​​ ಎಂದು ಗುರುತಿಸಲಾಗಿದೆ.
ಈ ಹಿಂದೆಯೇ ಶ್ರೀ ವಿ. ಲಕ್ಷ್ಮಣ್ ಅವರಿಗೆ ಪ್ರತಿಷ್ಠಿತ ಚಾಣಾಕ್ಯ ಮತ್ತು ಪಬ್ಲಿಕ್​ ರಿಲೇಷನ್ಸ್​​​ ಕೌನ್ಸಿಲ್​ ಆಫ್​ ಇಂಡಿಯಾ ಆಲ್​ ಆಫ್​ ಫೇಮ್​ ಅವಾರ್ಡ್​ ಕೂಡ ದೊರಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us