ದೇಶದ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ ನಾಯಕ; ಸಿಂಗ್ ಪ್ರಧಾನಿಯಾಗಿ ತೆಗೆದುಕೊಂಡ ದಿಟ್ಟ 10 ನಿರ್ಧಾರಗಳು

author-image
Ganesh
Updated On
ಆರ್​ಬಿಐ ಗವರ್ನರ್​ ಟು ಪ್ರಧಾನಿ ಆಗುವವರೆಗೆ.. ಡಾ.ಮನಮೋಹನ್​ ಸಿಂಗ್ ಜೀವನ ಚರಿತ್ರೆ
Advertisment
  • ದೇಶದ ಅರ್ಥವ್ಯವಸ್ಥೆ ಸುಧಾರಣೆಯ ಶಿಲ್ಪಿ ಅಸ್ತಂಗತ
  • ಸದೃಢ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದೇ ಡಾ.ಸಿಂಗ್​
  • ಆರ್ಥಿಕತೆ ಸುಧಾರಣೆಯ ಹರಿಕಾರ ಮನಮೋಹನ್​ ಸಿಂಗ್

ಭಾರತೀಯ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ ಧೀಮಂತ ನಾಯಕ, ಕಾಂಗ್ರೆಸ್‌ ಮುಖಂಡ, ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ವಿಧಿವಶರಾಗಿದ್ದಾರೆ. ಮನಮೋಹನ್ ಸಿಂಗ್ ಅವರನ್ನ ಮರೆತರೂ ಭವ್ಯ ಭಾರತಕ್ಕಾಗಿ ಅವರ ಹಾಕಿಕೊಟ್ಟ ಯೋಜನೆಗಳನ್ನ ಎಂದಿಗೂ ಮರೆಯಲಾಗದು. ಆರ್‌ಬಿಐ ಗವರ್ನರ್‌, ಅರ್ಥಶಾಸ್ತ್ರಜ್ಞ, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ಸಿಂಗ್‌ ಅವರ ಕೊಡುಗೆ ದೇಶಕ್ಕೆ ಅನನ್ಯ.

ಆರ್ಥಿಕತೆ ಸುಧಾರಣೆಯ ಹರಿಕಾರ ಸಿಂಗ್

1991ರಲ್ಲಿ ಪಿ.ವಿ ನರಸಿಂಹರಾವ್‌ ಪ್ರಧಾನಿಯಾಗಿದ್ದರು. ಈ ವೇಳೆ ಮನಮೋಹನ ಸಿಂಗ್ ಹಣಕಾಸು ಸಚಿವರಾಗಿ ಆಯ್ಕೆಯಾಗಿದ್ದಾಗ ಭಾರತದ ಆರ್ಥಿಕತೆ ಭಾರಿ ಕೆಳಮಟ್ಟದಲ್ಲಿತ್ತು. ಇಂತಹ ಸಮಯದಲ್ಲಿ ಭಾರತದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು, ನೀತಿಗಳನ್ನು ತರುವ ಮೂಲಕ ಭಾರತವನ್ನು ಆರ್ಥಿಕ ದುರಂತದಿಂದ ಪಾರಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆರ್ಥಿಕ ಸಂಕಷ್ಟದಲ್ಲಿದ್ದ ಭಾರತವನ್ನು 1991ರ ಬಜೆಟ್ ಮೂಲಕ ಅಂದಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಪಾರು ಮಾಡಿದರು.

ಇದನ್ನೂ ಓದಿ:BREAKING: ರಾಜ್ಯದಲ್ಲಿ 7 ದಿನ ಶೋಕಾಚಾರಣೆ; ನಾಳೆ ಸರ್ಕಾರಿ ರಜೆ ಘೋಷಣೆ

publive-image

  • ದೇಶದಲ್ಲಿ ಹೊಸ ಆರ್ಥಿಕ ನೀತಿ ಜಾರಿ ಮಾಡಿದರು
  • ಲೈಸೆನ್ಸ್ ರಾಜ್, ಸುಂಕ ಮತ್ತು ಬಡ್ಡಿದರ ಕಡಿಮೆ ಮಾಡಿದರು
  • ಹಲವಾರು ಸಾರ್ವಜನಿಕರಿಗೆ ಏಕಸ್ವಾಮ್ಯ ಕೊನೆಗೊಂಡಿತು
  • ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸಲು ಹೊಸ ನೀತಿ ಅಳವಡಿಕೆ
  • ಭಾರತ ಆರ್ಥಿಕತೆಯ ರಾಜ್ಯದ ನಿಯಂತ್ರಣ ಗಣನೀಯ ಕಡಿತ
  • ಹೆಚ್ಚಿದ ಹಣಕಾಸು ಉದಾರೀಕರಣ, ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆ

ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದವರು ಮನಮೋಹನ್‌ ಸಿಂಗ್, ನೆಹರೂ ನಂತರ ಪ್ರಧಾನಿಯಾಗಿ ಪೂರ್ಣಾವಧಿ ಪೂರೈಸಿದ ಮತ್ತು ಸತತವಾಗಿ 2 ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಇವರದ್ದು.. ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ ಎಂದು ಪ್ರಸಿದ್ಧಿ ಆಗಿದ್ದ ಇವರು 2004ರಿಂದ 2014ರವರೆಗೂ ಪ್ರಧಾನ ಮಂತ್ರಿಯಾಗಿದ್ದ ದೇಶವನ್ನು ಮುನ್ನಡೆಸಿದ್ರು.. ಈ ವೇಳೆ ಮನಮೋಹನ್​ ಸಿಂಗ್​ ಕೈಗೊಂಡ ಯೋಜನೆಗಳು ಭಾರತದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ವು..

publive-image

ಪ್ರಧಾನಿಯಾಗಿ ಸಿಂಗ್ ಸಾಧನೆ

  • 2005ರಲ್ಲಿ ಮಾರಾಟ ತೆರಿಗೆ ಬದಲಾಗಿ ಮೌಲ್ಯಾಧರಿತ ತೆರಿಗೆ ಪರಿಚಯ
  • 2007ರಲ್ಲಿ ಭಾರತ ಅತಿ ಹೆಚ್ಚು ಜಿಡಿಪಿ 8-9% ಗುರಿಯನ್ನ ಸಾಧಿಸಿತ್ತು
  • 2005ರಲ್ಲಿ ಮಹತ್ವದ ನರೇಗಾ ಯೋಜನೆ ಜಾರಿ
  • 2005ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಜಾರಿ
  • ಯುಪಿಎ1ರ ಅವಧಿಯಲ್ಲಿ ದೇಶಾದ್ಯಂತ 8 ಐಐಟಿ ಸ್ಥಾಪನೆ
  • ಸರ್ವ ಶಿಕ್ಷಣ ಅಭಿಯಾನ ಆರಂಭ. ಅನಕ್ಷರತೆ ಹೋಗಲಾಡಿಸಲು ಕ್ರಮ
  • ಗ್ರಾಮೀಣ ಶಾಲೆಗಳಲ್ಲಿ ಮಿಡ್​​-ಡೇ ಮೀಲ್ಸ್​ ಕಾರ್ಯಕ್ರಮ ಶುರು
  • 2008ರಲ್ಲಿ ಯುಎಸ್ ಜೊತೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಪಾತ್ರ
  • 2010ರ ಸಿಂಗ್​ ಸರ್ಕಾರದಿಂದ ಏಪ್ರಿಲ್ 1ರಂದು ಆರ್​ಟಿಇ ಕಾಯ್ದೆ ಜಾರಿ

ಇದಷ್ಟೇ ಅಲ್ಲ. ಭಾರತದ ನಿವಾಸಿಗಳಿಗೆ ವಿಶಿಷ್ಟ ಗುರುತನ್ನು ಒದಗಿಸಲು, ವಿವಿಧ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ಆಧಾರ್ ಯೋಜನೆಯನ್ನು ಇವರ ಅವಧಿಯಲ್ಲಿಯೇ ಆರಂಭಿಸಲಾಗಿತ್ತು. ನೇರ ಲಾಭ ವರ್ಗಾವಣೆ ವ್ಯವಸ್ಥೆಯನ್ನು ಇವರ ಅವಧಿಯಲ್ಲೇ ಜಾರಿಗೆ ತಂದಿದ್ದು. ಹೀಗೆ ಹಲವು ಜನಪ್ರಿಯ ಯೋಜನೆಗಳಿಗೆ ಇವರು ಕಾರಣರಾಗಿದ್ದರು. ಪೊಲೀಯೋ ಮುಕ್ತ ಭಾರತದ ರೂವಾರಿ ಮನಮೋಹನ್ ಸಿಂಗ್, ಚಂದ್ರಯಾನ-ಮಂಗಳಯಾನಕ್ಕೂ ಆಧಾರವಾಗಿದ್ರು.

ಇದನ್ನೂ ಓದಿ:ಸಿಂಗ್ ಈಸ್ ಕಿಂಗ್‌.. ಮನಮೋಹನ್ ಸಿಂಗ್ ಸೋತು ಗೆದ್ದ ಛಲಗಾರ; ಅರ್ಥಶಾಸ್ತ್ರಜ್ಞನ ಸಾಧನೆಗಳೇನು?

publive-image

ಒಟ್ಟಾರೆ.. ಆರ್‌ಬಿಐ ಗವರ್ನರ್‌, ಅರ್ಥಶಾಸ್ತ್ರಜ್ಞ, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ಸಿಂಗ್‌ ಅವರ ಕೊಡುಗೆ ದೇಶಕ್ಕೆ ಅನನ್ಯ. ಯುಪಿಎ ಸರಕಾರದ ಅವಧಿಯಲ್ಲಿ ಎರಡು ಬಾರಿ ಪ್ರಧಾನಿಯಾಗಿದ್ದರು. ಕಳೆದ ಏಪ್ರಿಲ್‌ನಲ್ಲಿಅವರು ರಾಜ್ಯಸಭಾ ಸದಸ್ಯರಾಗಿ ನಿವೃತ್ತಿ ಹೊಂದಿದ್ದರು. ಭವ್ಯ ಭಾರತದ, ಸದೃಢ ಭಾರತಕ್ಕೆ ಬಲಶಾಲಿಯಾದ ಬುನಾದಿ ಹಾಕಿದ ಹೆಗ್ಗಳಿಕೆ ಮನಮೋಹನ್ ಸಿಂಗ್ ಅವರದ್ದು.. ಮನಮೋಹನ್ ಸಿಂಗ್ ಅವರನ್ನ ಮರೆತರೂ ಭವ್ಯ ಭಾರತಕ್ಕಾಗಿ ಅವರ ಹಾಕಿಕೊಟ್ಟ ಯೋಜನೆಗಳನ್ನ ಎಂದಿಗೂ ಮರೆಯಲಾಗದು.

ಇದನ್ನೂ ಓದಿ:ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ರದ್ದು; ದೆಹಲಿಗೆ ಹೊರಟ ಖರ್ಗೆ, ರಾಹುಲ್ ಗಾಂಧಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment