38 ವರ್ಷಗಳ ಬಳಿಕ ನನಸಾಗುತ್ತಿದೆ ಅಣ್ಣಾವ್ರ ಕನಸು.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ನಿರೀಕ್ಷೆ..

author-image
Veena Gangani
Updated On
38 ವರ್ಷಗಳ ಬಳಿಕ ನನಸಾಗುತ್ತಿದೆ ಅಣ್ಣಾವ್ರ ಕನಸು.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ನಿರೀಕ್ಷೆ..
Advertisment
  • ಸಿಎಂ ನೇತೃತ್ವದಲ್ಲಿ ಇಂದು ನಡೆಯಲಿರೋ ಸಂಪುಟ ಸಭೆ
  • ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ
  • ಬಾಗೇಪಲ್ಲಿ ಹೆಸರು ಬದಲಾಯಿಸುವಂತೆ ಶಾಸಕರಿಂದಲೂ ಮನವಿ

ಕನ್ನಡ ಚಿತ್ರರಂಗ ಎಂದೂ ಮರೆಯದ ತಾರೆ ಎಂದರೆ ಅದು ವರನಟ ಡಾ.ರಾಜ್ ಕುಮಾರ್. ಈ ಮಾಣಿಕ್ಯನನ್ನು ಅಭಿಮಾನಿಗಳು ದೇವರು ಅಂತಲೇ ಪರಿಗಣಿಸಿದ್ದಾರೆ. ಅದೆಷ್ಟೋ ಅಭಿಮಾನಿಗಳ ಮನೆ ಹಾಗೂ ಮನದಲ್ಲಿ ಡಾ.ರಾಜ್ ಕುಮಾರ್ ದೇವರ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಥಗ್ ಲೈಫ್ ಬಿಡುಗಡೆ ಮಾಡಿದರೆ ಸಂಪೂರ್ಣ ರಕ್ಷಣೆ ನೀಡುತ್ತೇವೆ -ಕರ್ನಾಟಕ ಸರ್ಕಾರ ಅಫಿಡವಿಟ್

publive-image

ಇದೀಗ ಡಾ ರಾಜ್​ಕುಮಾರ್ ಅವರ ಬರೋಬ್ಬರಿ 38 ವರ್ಷಗಳ ಬಳಿಕ ಆಸೆ ಈಡೇರಲಿದೆ.  ಹೌದು, ಈ ಹಿಂದೆ ವರನಟ ಡಾ ರಾಜ್​ಕುಮಾರ್ ಅವರು, ಬಾಗೇಪಲ್ಲಿ ಭಾಗ್ಯನಗರವಾಗಲಿ. ಎಲ್ಲಾ ಭಾಗ್ಯವೂ ಇಲ್ಲಿ ತುಂಬಿಕೊಳ್ಳಲಿ ಎಂದಿದ್ದರು. 1987ರ ಸೆಪ್ಟಂಬರ್​ 9ರಂದು ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಶಾಲೆ ಆವರಣದಲ್ಲಿ ಕನ್ನಡ ಕಲಾ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದರು. ಡಾ. ರಾಜ್​ಕುಮಾರ್ ಅವರ ಆಶಯ ಬರೋಬ್ಬರಿ 38 ವರ್ಷಗಳ ಬಳಿಕ ಈಡೇರಲಿದೆ.

publive-image

ಬಾಗೇಪಲ್ಲಿ ಹೆಸರನ್ನ ಬದಲಾಯಿಸುವಂತೆ ಶಾಸಕರೂ ಕೂಡ ಮನವಿ ಮಾಡಿದ್ದರು. ಇಂದು ನಂದಿಗಿರಿಧಾಮದ ಬದಲಿಗೆ ಬೆಂಗಳೂರಿನಲ್ಲಿ ನಡೆಯಲಿರೋ ಸಚಿವ ಸಂಪುಟ ಸಭೆಯಲ್ಲಿ ಹಲ‌ವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣವನ್ನ ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ. ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು ಭಕ್ತರಹಳ್ಳಿ ಅರಸೀಕೆರೆಯ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಯನ್ನು ರೂ.36.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಬಾಗೇಪಲ್ಲಿ ತಾಲೂಕಿನ ಅರ್ಧದಷ್ಟು ಗ್ರಾಮಗಳು ಹೆಸರು ಪಲ್ಲಿಯಿಂದಲೇ ಕೊನೆಗೊಳ್ಳುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment