/newsfirstlive-kannada/media/post_attachments/wp-content/uploads/2025/04/dr-rajkumar.jpg)
ಕನ್ನಡ ಚಿತ್ರರಂಗ ಎಂದೂ ಮರೆಯದ ತಾರೆ ಎಂದರೆ ಅದು ವರನಟ ಡಾ.ರಾಜ್ ಕುಮಾರ್. ಈ ಮಾಣಿಕ್ಯನನ್ನು ಅಭಿಮಾನಿಗಳು ದೇವರು ಅಂತಲೇ ಪರಿಗಣಿಸಿದ್ದಾರೆ. ಅದೆಷ್ಟೋ ಅಭಿಮಾನಿಗಳ ಮನೆ ಹಾಗೂ ಮನದಲ್ಲಿ ಡಾ.ರಾಜ್ ಕುಮಾರ್ ದೇವರ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಈಕೆ ಕನ್ನಡ ಕಿರುತೆರೆಯ ಕ್ಯೂಟೆಸ್ಟ್ ನಟಿ.. ಯಾರಿರಬಹುದು ಗೇಸ್ ಮಾಡಿ ನೋಡೋಣ
ಇನ್ನೂ ಇದೇ ತಿಂಗಳು ಅಂದರೆ ಏಪ್ರಿಲ್ 12ಕ್ಕೆ ವರನಟನ ಕಳೆದುಕೊಂಡು 19 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಅವರ ಸಿನಿಮಾಗಳು, ಅವರ ಹಾಡುಗಳು, ಅವರ ನೆನಪುಗಳು ಅಜರಾಮರವಾಗಿವೆ. ಆದ್ರೆ ಇದರ ಮಧ್ಯೆ ಡಾ.ರಾಜ್ಕುಮಾರ್ ಅವರ ಜೀವನದ ಅಪರೂಪದ ಫೋಟೋಗಳು ವೈರಲ್ ಆಗಿವೆ.
View this post on Instagram
ಹೌದು, ಡಾ. ರಾಜ್ಕುಮಾರ್ ಅವರ ಎರಡು ಅಪರೂಪದ ಫೋಟೋಗಳನ್ನು ನಟ ರಾಮ್ ಕುಮಾರ್ ಪುತ್ರ ಧೀರೆನ್ ರಾಮ್‌ಕುಮಾರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಆ ಫೋಟೋ ಜೊತೆಗೆ ಚಿಕ್ಕಮಾಮ ಅವರ "ಅಜಯ್" ಚಿತ್ರದ ವೇಷಭೂಷಣ ಪ್ರಯೋಗದ ಸಮಯದಲ್ಲಿ ಅಜ್ಜಿಯ ನೋಕಿಯಾ ಫೋನ್‌ನಲ್ಲಿ ಸೆರೆಹಿಡಿದ ನನ್ನ ಅಜ್ಜನ ಅಪರೂಪದ ಛಾಯಾಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ದಿ ರಿಯಲ್ ಕನ್ನಡಿಗ, ಸೂಪರ್ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ