/newsfirstlive-kannada/media/post_attachments/wp-content/uploads/2024/12/sandya1.jpg)
ಪುತ್ರ ಅಥವಾ ಪುತ್ರಿ ಡಾಕ್ಟರ್ ಆಗ್ತಾಳೆ ಅಂದ್ರೆ ಯಾವುದೇ ಪಾಲಕರಿಗಾದ್ರೂ ಅದಕ್ಕಿಂತಾ ಆನಂದ ಮತ್ತೊಂದಿಲ್ಲ. ಹಾಗೇನೇ ಡಾಕ್ಟರ್ ಸಂಧ್ಯಾ ಕೂಡಾ ಕಷ್ಟ ಪಟ್ಟು ಓದಿ ಡಾಕ್ಟರ್ ಆಗಿದ್ಳು. ಸರಕಾರಿ ಆಸ್ಪತ್ರೆಯಲ್ಲಿ ಆಕೆಗೆ ಕೆಲಸವೂ ಸಿಕ್ಕಿತ್ತು. ಕೆಲಸಕ್ಕೆ ಸೇರಿ ಇನ್ನೂ ಕೆಲ ತಿಂಗಳು ಕಳೆದಿದೆ ಅಷ್ಟೇ. ಆಕೆಯ ಪಾಲಕರೂ ಮಗಳ ಬಗ್ಗೆ ತುಂಬಾನೇ ಹೆಮ್ಮೆ ಪಡ್ತಾ ಇದ್ರು. ಆದ್ರೆ ಆ ಆನಂದಕ್ಕೆ ವಿಧಿ ಪೂರ್ಣವಿರಾಮ ಹಾಕಿಬಿಟ್ಟಿದೆ. ಡಾಕ್ಟರ್ ಮಗಳು ದಿಢೀರ್ ಸಾವಿನ ಮನೆ ಸೇರಿದ ಹೃದಯವಿದ್ರಾವಕ ಘಟನೆಯಿದು.
ಇದನ್ನೂ ಓದಿ:ಬೆಂಗಳೂರಲ್ಲಿ ಟೆಕ್ಕಿ ದುರಂತ.. ಅತುಲ್ ಸುಭಾಷ್ ಪತ್ನಿ ಆರೋಪಗಳೆಲ್ಲಾ ಸುಳ್ಳಾ? ಸ್ಫೋಟಕ ಸತ್ಯಗಳು ಬಯಲು
ಅದು ಡಿಸೆಂಬರ್ 6, ಶುಕ್ರವಾರ ಎಂದಿನಂತೆ ಡಾಕ್ಟರ್ ಸಂಧ್ಯಾ ಕೋಲಾರದ ತಮ್ಮ ಮನೆಯಿಂದ ಕೆಲಸಕ್ಕೆಂದು ಹೊರಟಿದ್ದಳು. ಬಸ್ ಮಿಸ್ ಆಯ್ತೆಂದು ಅಪ್ಪನ ಬಳಿ ಡ್ರಾಪ್ ಕೇಳಿದ್ದಳು. ಟೈಮ್ ಬೇರೆ ಇಲ್ಲ ಅಂತ ಅರ್ಜೆಂಟ್ ಅರ್ಜೆಂಟ್ ಆಗಿ ಮಗಳು ಸಂಧ್ಯಾ ಹೆಲ್ಮೆಟ್ ಹಾಕದೇ ತಂದೆ ಜೊತೆ ಹಿಂಬದಿ ಸೀಟ್ನಲ್ಲಿ ಕೂತು ಹೊರಟಿದ್ಲು. ಆದ್ರೆ ಕೋಲಾರದ ಕೆಜಿಎಫ್ ಬಳಿ ಬೈಕ್ ರನ್ನಿಂಗ್ನಲ್ಲಿರುವಾಗ್ಲೇ ಆಕಸ್ಮಿಕವಾಗಿ ಸಂಧ್ಯಾ ಕೆಳಕ್ಕೆ ಬಿದ್ದಿದ್ದಾಳೆ. ದುರಂತ ಅಂದ್ರೆ ಹೆಲ್ಮೆಟ್ ಹಾಕದೇ ಇದ್ದಿದ್ದರಿಂದ ಸಂಧ್ಯಾ ತಲೆಗೆ ಬಲವಾಗಿ ಪೆಟ್ಟಾಗಿತ್ತು. ತಕ್ಷಣ ಸ್ಥಳೀಯರ ಸಹಾಯದಿಂದ ಸಂಧ್ಯಾಳನ್ನ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಬ್ರೈನ್ ಪ್ರಾಬ್ಲಂ ಆಗಿದೆ ಎಂದು ಅಲ್ಲಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆದ್ರೆ ವಿಧಿಯೆಷ್ಟು ಕ್ರೂರಿ ನೋಡಿ ಚಿಕಿತ್ಸೆ ಫಲಿಸದೇ HAL ಬಳಿ ಇರೋ ಮಣಿಪಾಲ್ ಆಸ್ಪತ್ರೆಯಲ್ಲಿ ಸಂಧ್ಯಾ ಕೊನೆಯುಸಿರೆಳೆದಿದ್ದಾಳೆ.
ಮಗಳ ಸಾವಿನ ಸುದ್ದಿ ಕೇಳಿದ ಪೋಷಕರಿಗೆ ಬರಸಿಡಿಲು ಬಡಿದಿತ್ತು. ಎದೆ ಎತ್ತರಕ್ಕೆ ಬೆಳದಿದ್ದ ಮುದ್ದಿನ ಮಗಳು ಹೀಗೆ ಹೆಣವಾಗಿ ಮಲಗಿರೋದು ಹೆತ್ತಡೊಲನ್ನ ಚಿವುಟಿತ್ತು. ಈ ಎಲ್ಲಾ ನೋವಿನ ಮಧ್ಯೆಯೂ ಮಗಳ ದೇಹವನ್ನು ಮಣ್ಣಿಗೆ ಹಾಕಲು ತಂದೆ ತಾಯಿಗೆ ಇಷ್ಟ ಇರ್ಲಿಲ್ಲ. ಹೀಗಾಗಿ ಇಡೀ ದೇಹವನ್ನು ದಾನ ಮಾಡಲು ಪೋಷಕರು ಮುಂದಾಗಿದ್ರು. ಹೀಗಾಗಿಯೇ ಬಿಜಿಎಸ್, ಜಾಲಪ್ಪ ಆಸ್ಪತ್ರೆ ಅಧಿಕಾರಿಗಳ ಜೊತೆ ಈ ಕುರಿತು ಮಾತನಾಡಿದ್ದರು. ಆದ್ರೆ ಅಂಗಾಂಗ ಇಲ್ಲದಿದ್ರೆ ದೇಹ ಬೇಡ ಎಂದಿದ್ದಕ್ಕೆ ಮಗಳ 12 ಅಂಗಾಂಗ ದಾನ ಮಾಡಿ ಸಾವಿನಲ್ಲೂ ಕುಟುಂಬ ಸಾರ್ಥಕತೆ ಮೆರೆದಿದೆ. ಒಂದು ವೇಳೆ ಹೆಲ್ಮೆಟ್ ಹಾಕಿದ್ದರೇ ಮಗಳು ಸಂಧ್ಯಾ ಬದುಕುಳಿತ್ತಿದ್ದಳು. ಹೀಗಾಗಿ ಹೊರಗಡೆ ಬೈಕ್ನಲ್ಲಿ ಹೋಗುವಾಗ ದಯವಿಟ್ಟು ಎಲ್ಲರೂ ಹೆಲ್ಮೆಟ್ ಹಾಕಿ ಅಂತ ಮೃತಳ ತಾಯಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ