ಮಿಸೆಸ್ ಅರ್ಥ್ ಕಿರೀಟ ಮುಡಿಗೇರಿಸಿಕೊಂಡ ಡಾ.ಶೃತಿ ಬಲ್ಲಾಳ್.. ಉಡುಪಿಯ ವೈದ್ಯೆಗೆ ಪ್ರತಿಷ್ಠಿತ ಗರಿ

author-image
Bheemappa
Updated On
ಮಿಸೆಸ್ ಅರ್ಥ್ ಕಿರೀಟ ಮುಡಿಗೇರಿಸಿಕೊಂಡ ಡಾ.ಶೃತಿ ಬಲ್ಲಾಳ್.. ಉಡುಪಿಯ ವೈದ್ಯೆಗೆ ಪ್ರತಿಷ್ಠಿತ ಗರಿ
Advertisment
  • ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ ಟೂರಿಸಂ ನಡೆದಿದ್ದು ಎಲ್ಲಿ?
  • ಸಕ್ಕರೆ ಕಾಯಿಲೆ ಗುಣಪಡಿಸುವ ಡಾಕ್ಟರ್ ಆದ್ರೂ ಸೌಂದರ್ಯವತಿ
  • 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟಕ್ಕೆ ಮುತ್ತಿಕ್ಕಿದ ಡಾ.ಶೃತಿ

ಸಕ್ಕರೆ ಕಾಯಿಲೆ ಗುಣಪಡಿಸುವ ಉಡುಪಿಯ ವೈದ್ಯೆ ಒಬ್ಬರು ತನ್ನ ಅಪ್ರತಿಮ ದೇಹಸಿರಿ ಮೂಲಕ ಸೌಂದರ್ಯ ಸವಿಯನ್ನು ನೀಡಿ ವಿಶ್ವದ ಗಮನ ಸೆಳೆದಿದ್ದಾರೆ. ಬೆಕ್ಕಿನ ನಡಿಗೆ ಹೆಜ್ಜೆ ಹಾಕುವ ಮೂಲಕ ಖ್ಯಾತ ಮಧುಮೇಹ ತಜ್ಞೆ ಡಾ.ಶೃತಿ ಬಲ್ಲಾಳ್ ಅವರು ಫಿಲಿಪೈನ್ಸ್​​ನ ರಾಜಧಾನಿ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ ಟೂರಿಸಂ- 2024 ಕಿರೀಟ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.

publive-image

ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ.ಶೃತಿ ಬಲ್ಲಾಳ್ ಫಿಲಿಪೈನ್ಸ್​​ನ ಮನಿಲಾದಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರತಿಷ್ಠಿತ ‘ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ ಟೂರಿಸಂ 2024’ ಕಿರೀಟ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಆಸ್ಟ್ರೇಲ್ ಪೇಜೆಂಟ್ ಆಯೋಜಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಗೆದ್ದ ಡಾ.ಶೃತಿ ಬಲ್ಲಾಳ್ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್‌ ಇಂಡಿಯಾ ಅರ್ಥ್ ಇಂಟರ್​​ನ್ಯಾಷನಲ್ ಪ್ರಶಸ್ತಿ ಗೆದ್ದು ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಆಸ್ಟ್ರೇಲ್ ಮಿಸೆಸ್ ಇಂಡಿಯಾ ಕರ್ನಾಟಕ ನಿರ್ದೇಶಕರಾದ ಪ್ರತಿಭಾ ಸೌನ್ಶಿಮಠ ನೇತೃತ್ವದಲ್ಲಿ ಸ್ಪರ್ಧೆ ನಡೆದಿತ್ತು.

ಇದನ್ನೂ ಓದಿ: ನಕಲಿ ಮದ್ಯಕ್ಕೆ ಹಾಟ್​ಸ್ಪಾಟ್ ಆಯಿತಾ ಸಕ್ಕರೆನಾಡು ಮಂಡ್ಯ.. ಮನೆಯಲ್ಲೇ ತಯಾರಾಗ್ತಿತ್ತು ಸರಾಯಿ

publive-image

ಮಂಗಳೂರು ನಂತರ ಪ್ಯಾಜೆಂಟ್ ಸ್ಟೇಟ್ ಲೇವೆಲ್ ಬೆಂಗಳೂರಿನಲ್ಲಿತ್ತು. ಇಲ್ಲಿ 3 ದಿನ ಎಲ್ಲ ಕ್ಲಾಸ್​ಗಳನ್ನು ಮಾಡಿದ್ದರು. ಮಿಸಸ್ ಇಂಡಿಯಾ ಕರ್ನಾಟಕ ವಿವೇಶಿಯಸ್, ಮಿಸಸ್ ಇಂಡಿಯಾ ಕರ್ನಾಟಕ ವಿವೇಶಿಯಸ್ ಇನೋವೇಟಿವ್ ಫಾರ್ಮರ್ ಕ್ರೌನ್ ಅನ್ನುವ ಅವಾರ್ಡ್ ಪಡೆದುಕೊಂಡೆ.
ಮನಿಲಾದಲ್ಲಿ ನಡೆದ 10 ದಿನದ ಪ್ಯಾಜೆಂಟ್​ನಲ್ಲಿ ಭಾಗವಹಿಸಿದ್ದೆ. ಇದಕ್ಕೆ ನನ್ನ ಕುಟುಂಬಸ್ಥರು ಹೆಚ್ಚಿನ ಸಪೋರ್ಟ್ ಕೊಟ್ಟಿದ್ದರು.

ಡಾ. ಶ್ರುತಿ ಬಲ್ಲಾಳ್ , ರೂಪದರ್ಶಿ

10 ದಿನಗಳ ಕಾಲ ನಡೆದ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧಾಕೂಟದಲ್ಲಿ ಅವರ ಬುದ್ಧಿಮತ್ತೆ, ದಯೆ, ಪರಿಸರದ ಬಗ್ಗೆ ತೋರಿದ ಬದ್ಧತೆ ಜಗದ ಗಮನ ಸೆಳೆದಿದೆ. ದೃಢ ಸಂಕಲ್ಪ ಹಾಗೂ ಸಾಧಿಸುವ ಛಲದಿಂದ ಅಂತರರಾಷ್ಟ್ರೀಯ ಮಟ್ಟದ ಕಿರೀಟ ಗೆದ್ದ ಡಾ.ಶೃತಿ ಬಲ್ಲಾಳ್, ಮಂಗಳೂರು ವಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಬುದ್ಧಿ ಮತ್ತೆ, ದಯೆ -ಪರಿಸರ ಬಗ್ಗೆ ಕಾಳಜಿ, ಸಾಧಿಸುವ ಛಲ ಎಂಬ ವಿಭಾಗದಲ್ಲಿ 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.

publive-image

ಕರಾವಳಿ ಬೆಡಗಿಯರ ಸಾಧನೆಯ ಪಟ್ಟಿಗೆ ಮತ್ತೊಂದು ‌ಗರಿ ಸೇರಿದಂತಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಈ ಬೆಡಗಿ ಸದ್ಯ ಸೌಂದರ್ಯ ಸ್ಪರ್ಧೆಯಲ್ಲಿ ವಿಶ್ವ ಗಮನ ಸೆಳೆದಿರೋದು ವಿಶೇಷವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment