newsfirstkannada.com

ದುಡಿದ ದುಡ್ಡಲ್ಲಿ ಬಡವರಿಗೆ ಪಾದರಕ್ಷೆಗಳನ್ನು ಕೊಡಿಸಿ ಮಾದರಿಯಾದ ಡಾ. ಸೌಜನ್ಯ ವಸಿಷ್ಠ

Share :

Published May 11, 2024 at 8:53pm

  ಬಡವರಿಗೆ ಸಹಾಯ ಮಾಡಿದ್ರೆ ನಮಗೆ ಒಳ್ಳೆಯದು ಆಗುತ್ತೆ ಅನ್ನೋ ಮಾತಿದೆ!

  ದುಡಿದ ದುಡ್ಡಲ್ಲಿ ಆಸ್ತಿ ಪಾಸ್ತಿ ಮಾಡೋಣ ಎಂಬ ಯೋಚನೆ ಇರೋರೇ ಹೆಚ್ಚು

  ಡಾ. ಸೌಜನ್ಯ ವಸಿಷ್ಠ ಮಾತ್ರ ದುಡಿದ ದುಡ್ಡಲ್ಲಿ ಬಡವರಿಗೆ ಸಹಾಯ ಮಾಡಿದ್ದಾರೆ

ಬಡವರಿಗೆ ಸಹಾಯ ಮಾಡಿದ್ರೆ ನಮಗೆ ಒಳ್ಳೆಯದು ಆಗುತ್ತೆ ಅನ್ನೋ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ದುಡಿದ ದುಡ್ಡಲ್ಲಿ ಆಸ್ತಿ ಪಾಸ್ತಿ ಮಾಡೋಣ ಎಂಬ ಯೋಚನೆ ಇರೋ ವೈದ್ಯರೇ ಹೆಚ್ಚು. ಆದರೆ, ಖ್ಯಾತ ವೈದ್ಯರಾದ ಡಾ. ಸೌಜನ್ಯ ವಸಿಷ್ಠ ಅವರು ಮಾತ್ರ ತಾನು ದುಡಿದ ದುಡ್ಡಲ್ಲೇ ಬಡವರಿಗೆ ದಿನಸಿ, ಔಷಧಿ, ಬಟ್ಟೆ ನೀಡುತ್ತಾ ಬಡವರ ಪಾಲಿಗೆ ನೆರವಾಗುತ್ತಲೇ ಇರುತ್ತಾರೆ. ಈಗ ಸ್ವಸ್ಥ ಸಮಾಜ ನಿರ್ಮಾಣದ ಗುರಿಯೊಂದಿಗೆ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆಯುವ ಬಡಮಕ್ಕಳಿಗೆ ಪಾದರಕ್ಷೆಗಳನ್ನು ಉಚಿತವಾಗಿ ನೀಡಿ ಮಾನವೀಯರೆ ಮೆರೆದಿದ್ದಾರೆ.

ನಗರದಲ್ಲಿ ಶ್ರಮಿಕ ನಗರಗಳಲ್ಲಿ ವಾಸಿಸೋ ಬಡಮಕ್ಕಳಿಗೆ ಪಾದರಕ್ಷೆಗಳನ್ನು ನೀಡಿದ್ದಾರೆ. ಜತೆಗೆ ಸಾರ್ವಜನಿಕರು ಕೂಡ ತಮ್ಮ ಬಳಿ ಇರೋ ಹಳೆ ಚಪ್ಪಲಿ, ಶೂಗಳನ್ನು ಬಡವರಿಗೆ ನೀಡಿ ಎಂದು ಕರೆ ಕೊಟ್ಟಿದ್ದಾರೆ ಸೌಜನ್ಯ ವಸಿಷ್ಠ ಅವರು. ಹಳೆಯ ಪಾದರಕ್ಷೆಗಳು ನೀಡಿ ರಾಜ್ಯಾದ್ಯಂತ ಇರುವ ಅಶಕ್ತರಿಗೆ ಮತ್ತು ಪಾದರಕ್ಷೆ ರಹಿತರಿಗೆ ನೆರವಾಗೋಣ ಎಂದಿದ್ದಾರೆ.

ಮನೆಯಲ್ಲಿದ್ದ ಹಳೆಯ ಪಾದರಕ್ಷೆಗಳನ್ನು ದಾನ ಮಾಡುವುದರಿಂದ ನಮ್ಮ ಮನಸ್ಸು ಶುಚಿಯಾಗುತ್ತದೆ. ದಾನ ಮಾಡಿದ ತೃಪ್ತಿ ಸಿಗುತ್ತದೆ. ಪಾದರಕ್ಷೆಯನ್ನು ತ್ಯಾಜ್ಯವನ್ನಾಗಿಸದೆ ಪರಿಸರ ಪ್ರೇಮಿಗಳಾಗಬಹುದಾಗಿದೆ. ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಿ ಎಂದಿದ್ದಾರೆ ಡಾ. ಸೌಜನ್ಯ ವಸಿಷ್ಠ ಅವರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಡಿದ ದುಡ್ಡಲ್ಲಿ ಬಡವರಿಗೆ ಪಾದರಕ್ಷೆಗಳನ್ನು ಕೊಡಿಸಿ ಮಾದರಿಯಾದ ಡಾ. ಸೌಜನ್ಯ ವಸಿಷ್ಠ

https://newsfirstlive.com/wp-content/uploads/2024/05/Sowjanya-Vasista.jpg

Load More