/newsfirstlive-kannada/media/post_attachments/wp-content/uploads/2025/07/Murugha-Swamiji.jpg)
ಚಿತ್ರದುರ್ಗ: ಪೋಕ್ಸೋ ಕೇಸ್ನಲ್ಲಿ ಬಂಧನಕ್ಕೊಳಗಾಗಿ ಹೈಕೋರ್ಟ್ನಿಂದ ಜಾಮೀನು ಪಡೆದು ಬಿಡುಗಡೆಯಾಗಿ ಸದ್ಯ ದಾವಣಗೆರೆಯಲ್ಲಿರುವ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಶರಣರ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ದಿನಗಳು ಹತ್ತಿರವಾಗುತ್ತಿವೆ..
ಇದನ್ನೂ ಓದಿ:ಇಂದಿನಿಂದ ರೈಲು ಪ್ರಯಾಣವೂ ದುಬಾರಿ.. ಐದು ವರ್ಷಗಳ ನಂತರ ಟಿಕೆಟ್ ರೇಟ್ ಹೆಚ್ಚಳ..
ಈಗಾಗಲೇ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ 12 ಸಾಕ್ಷ್ಯಗಳ ವಿಚಾರಣೆ ಮುಕ್ತಾಯವಾಗಿದೆ. ಎ-1 ಆರೋಪಿ ಸ್ಥಾನದಲ್ಲಿರುವ ಶ್ರೀಗಳ ಸಾಕ್ಷ್ಯ ವಿಚಾರಣೆ ಕೂಡ ಮುಕ್ತಾಯವಾಗಿದೆ. ಈಗ ಖುದ್ದು ಹೇಳಿಕೆಗೆ ದಿನಾಂಕ ನಿಗದಿ ಮಾಡಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಲು ಜುಲೈ 3ರಂದು ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ.
ಶ್ರೀಗಳ ವಿರುದ್ಧದ ಫೋಕ್ಸೋ ಪ್ರಕರಣ ಸಂಬಂಧ ಸೋಮವಾರ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಶಿವಮೂರ್ತಿ ಮುರುಘಾ ಶರಣರ ಹೇಳಿಕೆಗೆ ಜುಲೈ 3ರಂದು ದಿನಾಂಕ ನಿಗದಿ ಮಾಡಿದೆ. ಮುರುಘಾಶ್ರೀ ಖುದ್ದಾಗಿ ಹಾಜರಾಗಿ ಹೇಳಿಕೆ ದಾಖಲಿಗೆ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮುರುಘಾಶ್ರೀಗೆ ಶ್ರವಣದೋಷ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಬದಲು ಖುದ್ದು ಹಾಜರಿರಲು ಕೋರ್ಟ್ ಸೂಚಿಸಿದೆ.
ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮುರುಘಾಶ್ರೀಗೆ ಕರ್ನಾಟಕ ಹೈಕೋರ್ಟ್, ಈಗಾಗಲೇ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ ಮುರುಘಾಶ್ರೀಗೆ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದಂತೆ ಷರತ್ತು ವಿಧಿಸಿದ್ದು, ಇದೀಗ ವಿಡಿಯೋ ಕಾನ್ಫರೆನ್ಸ್ ಬದಲು ಖುದ್ದಾಗಿ ಬಂದು ಹೇಳಿಕೆ ದಾಖಲಿಸಲು ಕೋರ್ಟ್ ದಿನ ನಿಗದಿ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ