ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟ ಡ್ರಾಮಾ ಜೂನಿಯರ್ ಪ್ರತಿಭೆ; ವಂಶಿ ನಟನೆಗೆ ಜಡ್ಜಸ್ ರಿಯಾಕ್ಷನ್​ ಹೇಗಿತ್ತು?

author-image
Veena Gangani
Updated On
ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟ ಡ್ರಾಮಾ ಜೂನಿಯರ್ ಪ್ರತಿಭೆ; ವಂಶಿ ನಟನೆಗೆ ಜಡ್ಜಸ್ ರಿಯಾಕ್ಷನ್​ ಹೇಗಿತ್ತು?
Advertisment
  • ಡ್ರಾಮಾ ಜೂನಿಯರ್ಸ್ ಮೂಲಕ ಫೇಮಸ್​ ಆಗಿದ್ದ ಬಾಲನಟಿ
  • ಮಹಾನಟಿಯಾಗಿ ಮಿಂಚಲು ಸಜ್ಜಾದ ಮಂಗಳೂರಿನ ವಂಶಿ
  • 12 ವರ್ಷದಲ್ಲಿದ್ದಾಗ ವಂಶಿ ಡ್ರಾಮಾ ಜೂನಿಯರ್ಸ್​ನಲ್ಲಿ ನಟನೆ

ಹೊಸ ಹೊಸ ಪ್ರತಿಭೆಗಳಿಗೆ ಮಹಾನ್​ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಾನಟಿ ಕಾರ್ಯಕ್ರಮವನ್ನು ಶುರು ಮಾಡಿತ್ತು ಜೀ ವಾಹಿನಿ. ಮೊದಲ ಆವೃತ್ತಿ ಅದ್ಭುತವಾದ ಯಶಸ್ಸು ಕಂಡ ಬೆನ್ನಲ್ಲೇ ಎರಡನೇ ಆವೃತ್ತಿ ಇಂದು ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.

ಇದನ್ನೂ ಓದಿ:ಮೆಗಾ ಆಡಿಷನ್​ನಲ್ಲೇ ತರುಣ್​ ಸುಧೀರ್ ಮನಗೆದ್ದ ಮಹಾನಟಿ.. ಈಕೆ ಅಭಿನಯಕ್ಕೆ ಜಡ್ಜಸ್ ಭಾವುಕ!

publive-image

ವಿಭಿನ್ನ ಕಾನ್ಸೆಪ್ಟ್​ ಜೊತೆಗೆ ಮಹಾನಟಿ ರಿಯಾಲಿಟಿ ಶೋ ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಅಭಿನಯದ ಮೇಲೆ ಆಸಕ್ತಿಯಿರೋ ಯುವತಿಯರು ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್​ ಕೊಟ್ಟು ಸೆಲೆಕ್ಟ್​ ಆಗಿದ್ದಾರೆ. ಅದರಲ್ಲಿ ವಿಶೇಷವಾಗಿ ಡ್ರಾಮಾ ಜೂನಿಯರ್ಸ್ ಸೀಸನ್ 2 ವಿನ್ನರ್​ ಆಗಿದ್ದ ವಂಶಿ ಅವರು ಈ ಬಾರಿಯ ಮಹಾನಟಿ ಸೀಸನ್ 2ಕ್ಕೆ ಎಂಟ್ರಿ ಕೊಟ್ಟಿದ್ದಾರೆ.

publive-image

ಹೌದು, ಡ್ರಾಮಾ ಜೂನಿಯರ್ಸ್ ಸೀಸನ್ 2 ಮೂಲಕ 'ಜ್ಯೂನಿಯರ್ ಲಕ್ಷ್ಮಿ' ಅಂತ ಬಿರುದು ಗಿಟ್ಟಿಸಿಕೊಂಡಿರುವ ಮಂಗಳೂರಿನ ವಂಶಿ ಮಹಾನಟಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂನಿಂದ ಇಡೀ ಕರ್ನಾಟಕದ ಜನತೆಯ ಮನ ಗೆದ್ದಿದ್ದರು. ತಮ್ಮ ಅದ್ಭುತ ನಟನೆಯಿಂದ ಶಹಬ್ಬಾಸ್ ಗಿರಿ ಪಡೆದುಕೊಂಡು ವಿನ್ನರ್ ಆಗಿ ಟ್ರೋಫಿಗೆ ಮುತ್ತಿಕ್ಕಿದ್ದರು. ಆದ್ರೆ ಇದೀಗ ಸ್ಟಾರ್​ ನಟಿಯಾಗಿ ಮಿಂಚೋದಕ್ಕೆ ನೇರವಾಗಿ ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. 12 ವರ್ಷ ವಯಸ್ಸಿದ್ದಾಗ ವಂಶಿ ಡ್ರಾಮಾ ಜ್ಯೂನಿಯರ್ಸ್​ಗೆ ಎಂಟ್ರಿ ಕೊಟ್ಟಿದ್ದರು. ಆದ್ರೆ 20 ವರ್ಷಕ್ಕೆ ಮಹಾನಟಿ ವೇದಿಕೆಗೆ ಬಂದಿದ್ದಾರೆ.

ಇನ್ನೂ, ನಗು ನಗುತ್ತಲೇ ವೇದಿಕೆಗೆ ಬಂದ ವಂಶಿ, ಓಂ ಚಿತ್ರದ ಮನೋಜ್ಞ ಅಭಿನಯ ಮಾಡಿ ಸೆಲೆಕ್ಟ್​ ಆಗಿದ್ದಾರೆ. ಇನ್ನೂ, ವಂಶಿ ಅವರ ಅಭಿನಯಕ್ಕೆ ಜಡ್ಜಸ್​ ಶಾಕ್​ ಆಗಿದ್ದಾರೆ. ನೀವು ಸಂತ್ವವಾಗಿ ನಟನೆ ಮಾಡಿದ್ದೀರಿ ಅಂತ ತರುಣ್​ ಸುಧೀರ್​ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ನಟ ರಮೇಶ್​ ಅರವಿಂದ್​ ಅವರು ನಟಿ ಪ್ರೇಮಾ ಅವರು ನಮ್ಮೂರ ಮಂದಾರ ಹೂವೆ ಸಿನಿಮಾದಲ್ಲಿ ಸೇಮ್​ ಇವರ ಹಾಗೇ ಇದ್ದರು ಇವರು ಲಿಟಲ್ ಪ್ರೇಮಾ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment