newsfirstkannada.com

Video: 2ನೇ ಮಹಡಿಯ ರೂಫ್​​ನಲ್ಲಿ 8 ತಿಂಗಳ ಕಂದಮ್ಮ.. ಇನ್ನೇನು ಬೀಳುತ್ತೆ ಅನ್ನುವಷ್ಟರಲ್ಲಿ ರೋಚಕ ರಕ್ಷಣೆ

Share :

Published April 29, 2024 at 9:44am

Update April 30, 2024 at 7:39pm

    ಮಗು ರೂಫ್​ ಮೇಲೆ ಬಿದ್ದಿದ್ದು ಹೇಗೆ, ಈ ವೇಳೆ ಯಾರಿದ್ದರು?

    ಇನ್ನೇನು ಕೆಳಕ್ಕೆ ಬಿದ್ದು ಹೋಗಬೇಕು, ಅಷ್ಟರಲ್ಲೇ ಮಗು ರಕ್ಷಣೆ

    ಸುರಕ್ಷಿತವಾಗಿ ಮಗುವನ್ನು ಸ್ಥಳೀಯರು ಕಾಪಾಡಿದ್ದು ಹೇಗೆ..?

ಚೆನ್ನೈ: ಅವಡಿಯಲ್ಲಿರುವ ಅಪಾರ್ಟ್‌ಮೆಂಟ್​ ಒಂದರ 2ನೇ ಮಹಡಿಯ ರೂಫ್​ನ ಅಂಚಿನಿಂದ ಇನ್ನೇನು 8 ತಿಂಗಳ ಮಗು ಬೀಳಬೇಕು ಎನ್ನುವಷ್ಟರಲ್ಲಿ ಕಾಪಾಡಲಾಗಿದೆ. ರೂಫ್​ನ ಅಂಚಿನಲ್ಲಿದ್ದ ಮಗು ಒಂದು ಕ್ಷಣ ಎಲ್ಲರಲ್ಲೂ ನಡುಕ ಹುಟ್ಟಿಸಿತ್ತು.

ತಾಯಿ ರಮ್ಯಾ ಅವರು ತನ್ನ ಮಗು ಹರಿನ್​​ಗೆ ಶುಶ್ರೂಷೆ ಮಾಡುವಾಗ ಆಕಸ್ಮಿಕವಾಗಿ ಕೈಯಿಂದ ಜಾರಿ ರೂಫ್​ ಮೇಲೆ ಬಿದ್ದಿದೆ. ತಕ್ಷಣ ಜಾಗೃತಳಾದ ತಾಯಿ ಕಿರುಚಿಕೊಂಡು ಅಪಾರ್ಟ್‌ಮೆಂಟ್​​ನಲ್ಲಿದ್ದ ಎಲ್ಲರನ್ನು ಸೇರಿಸಿದ್ದಾರೆ. ಕೂಡಲೇ ಜನರು ಗುಂಪು ಸೇರಿದ್ದಾರೆ. ಈ ವೇಳೆ ಮೊದಲ ಮಹಡಿಯ ಕಿಟಕಿ ಮೂಲಕ ಒಬ್ಬರು ಮಗುವನ್ನ ರಕ್ಷಣೆ ಮಾಡಲು ಮುಂದಾಗುತ್ತಾರೆ. ಆದರೆ ಇನ್ನೊಬ್ಬ ವ್ಯಕ್ತಿ ಬಂದು ಮಗುವನ್ನ ಕೈಯಿಂದ ಹಿಡಿದು ನಿಧಾನವಾಗಿ ಮೇಲಿನಿಂದ ಕೆಳಕ್ಕೆ ಇಳಿಸಿಕೊಂಡಿದ್ದಾರೆ. ಹೀಗಾಗಿ 8 ತಿಂಗಳ ಮಗು ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್​ ಅಬ್ಬರ, ಎಲ್ಲಿ?

ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ

ಈ ಮಗುವನ್ನು ರಕ್ಷಣೆ ಮಾಡುವಾಗ ಎಲ್ಲಿ ಕೆಳಕ್ಕೆ ಜಾರಿ ಬೀಳುತ್ತೋ ಎಂದು ನೆಲ ಮಹಡಿಯಲ್ಲಿ ಸ್ಥಳೀಯರು ದೊಡ್ಡ ದೊಡ್ಡ ಹೊದಿಕೆಗಳನ್ನು ಹಿಡಿದು ನಿಂತಿದ್ದರು. ಅಲ್ಲದೇ ಬೆಡ್​ ಅನ್ನು ನೆಲಕ್ಕೆ ಹಾಕಿದ್ದರು. ಆದರೆ ಸದ್ಯ ಆ ಮಗುವನ್ನ ಕಿಟಕಿ ಮೂಲಕ ರಕ್ಷಣೆ ಮಾಡಲಾಯಿತು. ಈ ಮಗುವಿನ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: 2ನೇ ಮಹಡಿಯ ರೂಫ್​​ನಲ್ಲಿ 8 ತಿಂಗಳ ಕಂದಮ್ಮ.. ಇನ್ನೇನು ಬೀಳುತ್ತೆ ಅನ್ನುವಷ್ಟರಲ್ಲಿ ರೋಚಕ ರಕ್ಷಣೆ

https://newsfirstlive.com/wp-content/uploads/2024/04/BABY-1.jpg

Load More