/newsfirstlive-kannada/media/post_attachments/wp-content/uploads/2025/04/JOB_NEWS.jpg)
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ಎಆರ್ಡಿಇ) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಕೆ ಮಾಡಬಹುದು. ಅರ್ಜಿ ಸಲ್ಲಿಕೆಗೆ ಬೇಕಾದ ಇತರೆ ಎಲ್ಲ ಮಾಹಿತಿ ಈ ಕೆಳಗೆ ಕೊಡಲಾಗಿದೆ.
ಇದು ಅಪ್ರೆಂಟೀಸ್ ಹುದ್ದೆಗಳು ಆಗಿದ್ದರಿಂದ ಆಯ್ಕೆ ಆದ ಅಭ್ಯರ್ಥಿಗಳಿಗೆ ಸಂಬಳ, ಪರೀಕ್ಷೆ ಹಾಗೂ ಹುದ್ದೆಗೆ ಸಂಬಂಧಿಸಿದ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳಿಗೆ ಬೇಕಾದ ವಯಸ್ಸು, ಅರ್ಹತೆ, ಶೈಕ್ಷಣಿಕ ಅರ್ಹತೆ ಸೇರಿದಂತೆ ಇನ್ನಿತರ ಮಾಹಿತಿ ಇದೆ. ಉದ್ಯೋಗಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ ಮಾಡಲಾಗುತ್ತದೆ ಎಂಬುದರ ವಿವರಣೆ ಕೂಡ ಇದೆ.
ಇದನ್ನೂ ಓದಿ: NTPC ಗ್ರೀನ್ ಎನರ್ಜಿ ನೇಮಕಾತಿ 2025; ಹುದ್ದೆಗಳಿಗೆ ಅರ್ಜಿ ಆಹ್ವಾನ.. ಉದ್ಯೋಗಕ್ಕೆ ಆಯ್ಕೆ ಹೇಗೆ ನಡೆಯುತ್ತೆ?
ಉದ್ಯೋಗದ ಹೆಸರು, ಯಾವ್ಯಾವ ಹುದ್ದೆಗಳು?
ಅಪ್ರೆಂಟಿಸ್ ಉದ್ಯೋಗಗಳು
- ಎಲೆಕ್ಟ್ರಿಷಿಯನ್- 8
- ಫಿಟ್ಟರ್-17
- ಯಂತ್ರಶಿಲ್ಪಿ- 8
- ಮೆಷಿನಿಸ್ಟ್ ಗ್ರೈಂಡರ್- 1
- ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ (MMTM)- 1
- ಕಂಪ್ಯೂಟರ್ ಆಪರೇಟರ್ (COPA)- 16
- ಇವುಗಳ ಜೊತೆ ಇನ್ನು 8 ವಿಭಾಗದಲ್ಲಿ ಉದ್ಯೋಗಗಳು ಸೇರಿ 70 ಕೆಲಸಗಳಿವೆ
ವಿದ್ಯಾರ್ಹತೆ- ಐಟಿಐ ಪೂರ್ಣವಾಗಿರಬೇಕು
ವಯೋಮಿತಿ- 18 ರಿಂದ 30 ವರ್ಷ
ಒಟ್ಟು ಹುದ್ದೆಗಳು- 70
ತರಬೇತಿಯಲ್ಲಿ ಅಭ್ಯರ್ಥಿಗಳಿಗೆ 13,000 ರೂ. ಸ್ಟೇಫಂಡ್ ನೀಡಲಾಗುವುದು
ಆಯ್ಕೆ ಪ್ರಕ್ರಿಯೆ
ಹೆಸರುಗಳ ಶಾರ್ಟ್ಲಿಸ್ಟ್
ಟ್ರೇಡ್ ಪರೀಕ್ಷೆ
ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಏಪ್ರಿಲ್ 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ