/newsfirstlive-kannada/media/post_attachments/wp-content/uploads/2024/08/DRDO_JOBS.jpg)
ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಡಿಯಲ್ಲಿ ಡಿಫೆನ್ಸ್ ಬಯೋ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ (ಡಿಇಬಿಇಎಲ್) ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
ಇದನ್ನೂ ಓದಿ:ಕಾನ್ಸ್ಟೆಬಲ್ ಹುದ್ದೆಗಳಿಗೆ ಕಾಲ್ಫಾರ್ಮ್.. PUC ಪಾಸ್ ಆದವರಿಗೆ ಗುಡ್ನ್ಯೂಸ್
ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಅಮೂಲ್ಯವಾದ ಅವಕಾಶ ಡಿಆರ್ಡಿಒ ಅಡಿ ನೀಡಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಡಿಇಬಿಇಎಲ್ನ ಕಾರ್ಯಕ್ರಮಕ್ಕೆ ಸೇರುವ ಮೂಲಕ, ವಿದ್ಯಾರ್ಥಿಗಳು ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ಇನ್ನಷ್ಟು ಸುಧಾರಿಸಿಕೊಳ್ಳಬಹುದಾಗಿದೆ.
ಡಿಇಬಿಇಎಲ್ನ ವಿವಿಧ ವಿಭಾಗಗಳಲ್ಲಿ 30 ಖಾಲಿ ಹುದ್ದೆಗಳು
- ಮೆಕ್ಯಾನಿಕಲ್ ಇಂಜಿನಿಯರಿಂಗ್- 8
- ಬಯೋ ಮೆಡಿಕಲ್ ಇಂಜಿನಿಯರಿಂಗ್- 4
- ಕಂಪ್ಯೂಟರ್ ಸೈನ್ಸ್ ಹಾಗೂ ಐಟಿ- 4
- ಎಲೆಕ್ಟ್ರಾನಿಕ್ಸ್, ಎ. ಕಮೂನಿಕೇಷನ್- 8
- ಕೆಮಿಕಲ್ ಇಂಜಿನಿಯರಿಂಗ್- 2
- ಬಯೋಟೆಕ್ನಾಲಜಿ- 01
- ಲೈಬ್ರರಿ ಸೈನ್ಸ್- 01
- ಪಿಸಿಕ್ಸ್ ಹಾಗೂ ಅಕೌಂಟ್ಸ್- ತಲಾ ಒಂದೊಂದು ಹುದ್ದೆ
ಇದನ್ನೂ ಓದಿ: SSLC, ಪಿಯುಸಿ, ITI, ಪದವಿ ಮುಗಿಸಿದವ್ರಿಗೆ ಗುಡ್ನ್ಯೂಸ್.. ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ಎಷ್ಟು?
ವಯಸ್ಸಿನ ಮಿತಿ: 28 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಬಳ: 9,000 ರೂ.ಗಳು.
ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗಳಿಗೆ ಅರ್ಹತೆಗಳೇನು..?
ಬಿಇ/ ಬಿ.ಟೆಕ್/ಬಿಎಸ್ಸಿ/ಬಿ.ಕಮ್/ಬಿ.ಲಿಬ್ನಲ್ಲಿ ಪದವಿಯನ್ನು ಪಡೆದವರು ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳ ಸಮೇತ ಒಂದೇ ಪಿಡಿಎಫ್ಗೆ ಸ್ಕ್ಯಾನ್ ಮಾಡಿ ಇಲಾಖೆಗೆ ಇ-ಮೇಲ್ ಮಾಡಬೇಕು. ಬಳಿಕ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಕ್ಕೆ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ ಎಂದು ತಿಳಿಸಲಾಗಿದೆ.
ಸಂದರ್ಶನ ಸ್ಥಳ: ಡಿಇಬಿಇಎಲ್ ಸಿ.ವಿ ರಾಮನ್ ನಗರ, ಬೆಂಗಳೂರು, ಕರ್ನಾಟಕ 560093.
ಪ್ರಮುಖವಾದ ದಿನಾಂಕಗಳು
ಅರ್ಜಿಗಳನ್ನು ಮೇಲ್ ಮಾಡಲು ಕೊನೆ ದಿನಾಂಕ- ಸೆಪ್ಟೆಂಬರ್ 09
ಸಂದರ್ಶನಕ್ಕೆ ಹಾಜರಾಗುವ ದಿನಾಂಕಗಳು- ಅಕ್ಟೋಬರ್ 3 ಮತ್ತು 4
ಇ-ಮೇಲ್ ಮಾಡುವ ವಿಳಾಸ- [email protected].
ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್-https://drdo.gov.in/drdo/sites/default/files/career-vacancy-documents/advtDEBEL23082024.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ