newsfirstkannada.com

ಪದವೀಧರರಿಗೆ DRDO ಅಡಿ ಉದ್ಯೋಗಗಳು.. ಎಕ್ಸಾಂ ಇಲ್ಲ, ಬೆಂಗಳೂರಲ್ಲೇ ಸಂದರ್ಶನ; ಅಪ್ಲೇ ಮಾಡೋದು ಹೇಗೆ?

Share :

Published August 26, 2024 at 1:29pm

Update August 26, 2024 at 3:21pm

    ಡಿಇಬಿಇಎಲ್ ಹುದ್ದೆಗೆ ಆಯ್ಕೆ ಆದ ಮೇಲೆ ಸಂಬಳ ಎಷ್ಟು ಇರುತ್ತದೆ?

    ರಕ್ಷಣಾ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಒಳ್ಳೆ ಅವಕಾಶ

    ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ, ಯಾರು ಅಪ್ಲೇ ಮಾಡಬಹುದು?

ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಡಿಯಲ್ಲಿ ಡಿಫೆನ್ಸ್ ಬಯೋ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ (ಡಿಇಬಿಇಎಲ್​) ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಇದನ್ನೂ ಓದಿ: ಕಾನ್​​ಸ್ಟೆಬಲ್ ಹುದ್ದೆಗಳಿಗೆ ಕಾಲ್​ಫಾರ್ಮ್​.. PUC ಪಾಸ್ ಆದವರಿಗೆ ಗುಡ್​ನ್ಯೂಸ್​

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಅಮೂಲ್ಯವಾದ ಅವಕಾಶ ಡಿಆರ್​ಡಿಒ ಅಡಿ ನೀಡಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಡಿಇಬಿಇಎಲ್​ನ ಕಾರ್ಯಕ್ರಮಕ್ಕೆ ಸೇರುವ ಮೂಲಕ, ವಿದ್ಯಾರ್ಥಿಗಳು ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ಇನ್ನಷ್ಟು ಸುಧಾರಿಸಿಕೊಳ್ಳಬಹುದಾಗಿದೆ.

ಡಿಇಬಿಇಎಲ್​ನ ವಿವಿಧ ವಿಭಾಗಗಳಲ್ಲಿ 30 ಖಾಲಿ ಹುದ್ದೆಗಳು 

  • ಮೆಕ್ಯಾನಿಕಲ್ ಇಂಜಿನಿಯರಿಂಗ್- 8
  • ಬಯೋ ಮೆಡಿಕಲ್ ಇಂಜಿನಿಯರಿಂಗ್- 4
  • ಕಂಪ್ಯೂಟರ್ ಸೈನ್ಸ್ ಹಾಗೂ ಐಟಿ- 4
  • ಎಲೆಕ್ಟ್ರಾನಿಕ್ಸ್, ಎ. ಕಮೂನಿಕೇಷನ್- 8
  • ಕೆಮಿಕಲ್ ಇಂಜಿನಿಯರಿಂಗ್- 2
  • ಬಯೋಟೆಕ್ನಾಲಜಿ- 01
  • ಲೈಬ್ರರಿ ಸೈನ್ಸ್- 01
  • ಪಿಸಿಕ್ಸ್ ಹಾಗೂ ಅಕೌಂಟ್ಸ್​- ತಲಾ ಒಂದೊಂದು ಹುದ್ದೆ

ಇದನ್ನೂ ಓದಿ: SSLC, ಪಿಯುಸಿ, ITI, ಪದವಿ ಮುಗಿಸಿದವ್ರಿಗೆ ಗುಡ್​ನ್ಯೂಸ್.. ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ಎಷ್ಟು? 

ವಯಸ್ಸಿನ ಮಿತಿ: 28 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಬಳ: 9,000 ರೂ.ಗಳು.

ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗಳಿಗೆ ಅರ್ಹತೆಗಳೇನು..?
ಬಿಇ/ ಬಿ.ಟೆಕ್/ಬಿಎಸ್​​ಸಿ/ಬಿ.ಕಮ್/ಬಿ.ಲಿಬ್​ನಲ್ಲಿ ಪದವಿಯನ್ನು ಪಡೆದವರು ಫಾರ್ಮ್​ ಅನ್ನು ಡೌನ್​ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳ ಸಮೇತ ಒಂದೇ ಪಿಡಿಎಫ್​ಗೆ ಸ್ಕ್ಯಾನ್ ಮಾಡಿ ಇಲಾಖೆಗೆ ಇ-ಮೇಲ್ ಮಾಡಬೇಕು. ಬಳಿಕ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಕ್ಕೆ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ ಎಂದು ತಿಳಿಸಲಾಗಿದೆ.

ಸಂದರ್ಶನ ಸ್ಥಳ: ಡಿಇಬಿಇಎಲ್​​ ಸಿ.ವಿ ರಾಮನ್ ನಗರ, ಬೆಂಗಳೂರು, ಕರ್ನಾಟಕ 560093.

ಪ್ರಮುಖವಾದ ದಿನಾಂಕಗಳು
ಅರ್ಜಿಗಳನ್ನು ಮೇಲ್ ಮಾಡಲು ಕೊನೆ ದಿನಾಂಕ- ಸೆಪ್ಟೆಂಬರ್ 09
ಸಂದರ್ಶನಕ್ಕೆ ಹಾಜರಾಗುವ ದಿನಾಂಕಗಳು- ಅಕ್ಟೋಬರ್​ 3 ಮತ್ತು 4

ಇ-ಮೇಲ್ ಮಾಡುವ ವಿಳಾಸ- [email protected].
ಫಾರ್ಮ್​ ಡೌನ್​ಲೋಡ್ ಮಾಡಿಕೊಳ್ಳುವ ಲಿಂಕ್- https://drdo.gov.in/drdo/sites/default/files/career-vacancy-documents/advtDEBEL23082024.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪದವೀಧರರಿಗೆ DRDO ಅಡಿ ಉದ್ಯೋಗಗಳು.. ಎಕ್ಸಾಂ ಇಲ್ಲ, ಬೆಂಗಳೂರಲ್ಲೇ ಸಂದರ್ಶನ; ಅಪ್ಲೇ ಮಾಡೋದು ಹೇಗೆ?

https://newsfirstlive.com/wp-content/uploads/2024/08/DRDO_JOBS.jpg

Load More