/newsfirstlive-kannada/media/post_attachments/wp-content/uploads/2025/01/JOB_CBSC.jpg)
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್) ಹುದ್ದೆಗಳನ್ನು ಆಹ್ವಾನ ಮಾಡಿದೆ. ಭೌತಶಾಸ್ತ್ರ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಷಯಗಳಡಿ ಉನ್ನತ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಈ ಕೆಲಸಗಳಿಗೆ ಸಂದರ್ಶನ ತೆಗೆದುಕೊಳ್ಳಬಹುದು.
ಡಿಆರ್‌ಡಿಒ ನೇಮಕಾತಿ 2025ರ ಅಧಿಕೃತ ಅಧಿಸೂಚನೆಯಂತೆ ಅಭ್ಯರ್ಥಿಗಳ ಹೆಸರನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ವಾಕ್-ಇನ್ ಸಂದರ್ಶನದ ವೇಳೆ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಮತ್ತು ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಹಾಜರಾಗಬೇಕು. ಈ ಕೆಲಸಗಳಿಗೆ ಅಭ್ಯರ್ಥಿಗಳನ್ನು ಮೊದಲು ಎರಡು ವರ್ಷದವರೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಂತರ ಕೆಲಸದಲ್ಲಿ ಪರ್ಫಾಮೆನ್ಸ್ ಗಮನಿಸಿ ಮತ್ತೆ 5 ವರ್ಷ ಉದ್ಯೋಗ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಹುದ್ದೆ ಬಯಸುವ ಅಭ್ಯರ್ಥಿಗಳು ತಮ್ಮ 10ನೇ ತರಗತಿಯಿಂದ ಕೇಳಲಾದ ಪದವಿವರೆಗೆ ಎಲ್ಲಾ ದಾಖಲೆಗಳು, 2 ಪಾಸ್ ಫೋಟೋ ಹಾಗೂ ಜಾತಿ, ಆದಾಯ ಪ್ರಮಾಣ ಪತ್ರ ಸಮೇತ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆ ಆದವರನ್ನು ಟಿಬಿಆರ್‌ಎಲ್ ರೇಂಜ್, ರಾಮ್‌ಘರ್‌ನಲ್ಲಿ ಕೆಲಸಕ್ಕೆ ನೇಮಿಸಲಾಗುತ್ತದೆ.
ಮಾಸಿಕ ವೇತನ- 37,000 ರೂಪಾಯಿ
ಇದನ್ನೂ ಓದಿ:ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್; KEA ಇಂದ ಶೀಘ್ರವೇ 2,609 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
ಉದ್ಯೋಗಗಳ ಹೆಸರು, ಎಷ್ಟು ಹುದ್ದೆಗಳು?
ಜೂನಿಯರ್ ರಿಸರ್ಚ್ ಫೆಲೋ (JRF) ಭೌತಶಾಸ್ತ್ರ- 3 ಹುದ್ದೆಗಳು
ಜೂನಿಯರ್ ರಿಸರ್ಚ್ ಫೆಲೋ (JRF) ಮೆಕ್ಯಾನಿಕಲ್ ಇಂಜಿನಿಯರಿಂಗ್- 3 ಹುದ್ದೆಗಳು
ಜೂನಿಯರ್ ರಿಸರ್ಚ್ ಫೆಲೋ (JRF) ಎಲೆಕ್ಟ್ರಾನಿಕ್ & ಕಮ್ಯುನಿಕೇಶನ್ ಇಂಜಿನಿಯರಿಂಗ್- 2 ಹುದ್ದೆಗಳು
ಒಟ್ಟು ಉದ್ಯೋಗಗಳು- 08
ವಯೋಮಿತಿ
28 ವರ್ಷದ ಒಳಗಿನವರಿಗೆ ಅವಕಾಶ
ವಿದ್ಯಾರ್ಹತೆ
ಭೌತಶಾಸ್ತ್ರ- ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, NET ಪಾಸ್ ಆಗಿರಬೇಕು
ಮೆಕ್ಯಾನಿಕಲ್ ಇಂಜಿನಿಯರಿಂಗ್- ಬಿಇ/ಬಿಟೆಕ್ ಪದವಿ, NET/GATE ಅರ್ಹತೆ
ಎಲೆಕ್ಟ್ರಾನಿಕ್ & ಕಮ್ಯುನಿಕೇಶನ್ ಇಂಜಿನಿಯರಿಂಗ್- ಬಿಇ/ಬಿಟೆಕ್ ಪದವಿ, NET/GATE ಅರ್ಹತೆ
ಸಂದರ್ಶನ ನಡೆಯುವ ದಿನಾಂಕಗಳು
- ಭೌತಶಾಸ್ತ್ರ- ಮಂಗಳವಾರ 07 ಜನವರಿ 2025
- ಮೆಕ್ಯಾನಿಕಲ್ ಇಂಜಿನಿಯರಿಂಗ್- ಗುರುವಾರ 16 ಜನವರಿ 2025
- ಎಲೆಕ್ಟ್ರಾನಿಕ್ & ಕಮ್ಯುನಿಕೇಶನ್ ಇಂಜಿನಿಯರಿಂಗ್- ಶುಕ್ರವಾರ 17 ಜನವರಿ 2025
ಸಂದರ್ಶನ ನಡೆಯುವ ಸ್ಥಳ
ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬ್ (TBRL), ಸೆಕ್ಟರ್ 30, ಚಂಡೀಗಢ, ಹರಿಯಾಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ