/newsfirstlive-kannada/media/post_attachments/wp-content/uploads/2025/01/MASOOD-AZAR.jpg)
ಪಾಕಿಸ್ತಾನದ ಭಯೋತ್ಪಾದಕ, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಜೈಷ್ ಏ ಮೊಹ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ಸಾವನ್ನಪ್ಪಿದನಾ ಇಲ್ಲವೇ ಇನ್ನೂ ಜೀವಂತವಾಗಿದ್ದಾನಾ ಎಂಬ ಮಾತುಗಳು ಈಗ ಚರ್ಚೆಯ ಮುನ್ನೆಲೆಗೆ ಬಂದಿವೆ. ಕೆಲವು ದಿನಗಳ ಹಿಂದಷ್ಟೇ ಮಸೂದ್ ಅಜರ್ ಹೃದಯಾಘಾತಕ್ಕೆ ಒಳಗಾಗಿ ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಾದ ಬಳಿಕ ಜೈಷ್ ಎ ಮೊಹಮ್ಮದ್ ಮಸೂದ್ ಅಜರ್ ಆರೋಗ್ಯದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಗಳನ್ನು ಆಚೆ ಬರಲಿಲ್ಲ/ ಹೀಗಾಗಿ ಅಜರ್ ಉಳಿವಿನ ಬಗ್ಗೆ ಅನೇಕ ಸಂಶಯಗಳು ಈಗ ಸೃಷ್ಟಿಯಾಗಿವೆ.
ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿದ್ದಾಗ ತೀವ್ರ ಹೃದಯಾಘಾತದಿಂದ ಬಳಲಿದ್ದ. ಆತನನ್ನು ಕೂಡಲೇ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯ್ತು. ಅದಾದ ಬಳಿಕ ಮಸೂದ್ ಅಜರ್ ಬಗ್ಗೆ ಯಾವುದೇ ಮಾಹಿತಿಗಳು ಆಚೆ ಬರಲಿಲ್ಲ. ಪಾಕಿಸ್ತಾನದ ಗುಪ್ತಚರ ಇಲಾಖೆ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನೊಂದು ನೀಡಿದೆ. ಯಾವುದೇ ಕಾರಣಕ್ಕೂ ಮಸೂದ್ ಅಜರ್ ಬಗ್ಗೆ ಹಾಗೂ ಆತನ ಆರೋಗ್ಯದ ವಿಷಯದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದೆ. ಅದು ಮಾತ್ರವಲ್ಲ ಸೋಶಿಯಲ್ ಮೀಡಿಯಾಗಳಲ್ಲಿಯೂ ಮಸೂದ್ ಅಜರ್ ಬಗ್ಗೆ ಯಾವುದೇ ರೀತಿಯ ವಿಷಯವನ್ನು ಪ್ರಸ್ತಾಪಿಸದಂತೆ ಖಡಕ್ ಸೂಚನೆಯನ್ನು ನೀಡಿದೆ.
ಇದನ್ನೂ ಓದಿ:ಲಾಸ್ ಎಂಜೆಲ್ಸ್ ಬೆಂಕಿಗೆ ಸೆಲೆಬ್ರೆಟಿಗಳ ಭವ್ಯ ಬಂಗಲೆಗಳು ಭಸ್ಮ; ಐಷಾರಾಮಿ ಮನೆಗಳು ಸುಟ್ಟು ಕರಕಲು
ಕೆಲವು ದಿನಗಳ ಹಿಂದೆ ಜೈಷ್ ಇ ಮೊಹಮ್ಮದ್ ಒಂದು ಆಡಿಯೋವನ್ನು ರಿಲೀಸ್ ಮಾಡಿತ್ತು. ಆ ಮೂಲಕ ಅಜರ್ ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಲಾಗಿತ್ತು. ಆಡಿಯೋದಲ್ಲಿ ಮಸೂದ್ ಅಜರ್ ಮಹಿಳೆಯರಿಗೆ ಜಿಹಾದ್ ವಿಚಾರವಾಗಿ ಒಂದಿಷ್ಟು ಬೋಧನೆಗಳನ್ನು ಮಾಡಿದ್ದರ ಬಗ್ಗೆ ಇತ್ತು. ಆದ್ರೆ ಆಡಿಯೋದಲ್ಲಿ ಹಲವು ಅನುಮಾನಗಳನ್ನು ಕೂಡ ವ್ಯಕ್ತಗೊಳಿಸಲಾಗಿತ್ತು. ಹಳೆಯ ಧ್ವನಿ ಸುರುಳಿಯನ್ನೇ ಈಗ ಪ್ಲೇ ಮಾಡಿ ಮೋಸ ಮಾಡಲಾಗುತ್ತಿದೆ ಎಂದು ಕೂಡ ಹೇಳಲಾಗಿತ್ತು.
ಇದನ್ನೂ ಓದಿ:ಟಿಬೆಟ್ ಗಡಿಯಲ್ಲಿ ಸಂಕಷ್ಟಗಳ ಕೋಡಿ.. ಭೂಮಿ ಕೋಪಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 126ಕ್ಕೆ ಏರಿಕೆ..
ಈ ಒಂದು ಆಡಿಯೋ ಮೂಲಕವೇ ಮಸೂದ್ ಅಜರ್ ಇನ್ನೂ ಜೀವಂತವಾಗಿದ್ದಾನೆ ಎಂಬ ಮಾತನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಡೆದ ಒಂದುಪ್ರಯತ್ನ ಎಂದು ವಾದಿಸಲಾಗುತ್ತಿದೆ. ಅನೇಕ ಮಸೂದ್ ಅಜರ್ ಅನುಯಾಯಿಗಳು ಆತ ಜೀವಂತವಾಗಿ ಇದ್ದಾನಾ ಇಲ್ಲವಾ ಅನ್ನೋದರ ಸ್ಪಷ್ಟ ಚಿತ್ರಣ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಸದ್ಯ ಪಾಕಿಸ್ತಾನ ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಮಸೂದ್ ಅಜರ್ ಇಂದಿಗೂ ಕೂಡ ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಯಲ್ಲಿದ್ದು ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದ್ದಾನೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ