ಭಾರತದಲ್ಲಿ ನಿರ್ಮಾಣವಾಗಲಿದೆ ಕನಸಿನ ನಗರಿ.. ದುಬೈ, ಸಿಂಗಪೂರ್​ ಮಾದರಿಯಲ್ಲಿ ಸಿದ್ಧಗೊಳ್ಳಲಿದೆಯಾ ಸಿಟಿ?

author-image
Gopal Kulkarni
Updated On
ಭಾರತದಲ್ಲಿ ನಿರ್ಮಾಣವಾಗಲಿದೆ ಕನಸಿನ ನಗರಿ.. ದುಬೈ, ಸಿಂಗಪೂರ್​ ಮಾದರಿಯಲ್ಲಿ ಸಿದ್ಧಗೊಳ್ಳಲಿದೆಯಾ ಸಿಟಿ?
Advertisment
  • ಭಾರತದಲ್ಲಿ ನಿರ್ಮಾಣವಾಗುತ್ತಿದೆ ಒಂದು ಫಿನ್​ಟೆಕ್ ಸಿಟಿ
  • ಸಿಂಗಾಪೂರನ್ನು ಪ್ರೇರಣೆಯಾಗಿಟ್ಟುಕೊಂಡು ನಗರ ನಿರ್ಮಾಣ
  • ನಗರ ನಿರ್ಮಾಣಕ್ಕೆ ಕೈ ಜೋಡಿಸಲಿವೆ 500 ಟಾಪ್​ ಕಂಪನಿಗಳು

ಉತ್ತರ ಭಾರತವನ್ನು ಆರ್ಥಿಕವಾಗಿ ಹಾಗೂ ತಂತ್ರಜ್ಞಾನಿಕವಾಗಿ ಹಾಗೂ ಮೂಲಸೌಕರ್ಯಗಳ ಬೀಡಾಗಿ ನಿರ್ಮಿಸುವ ಗುರಿಯೊಂದಿಗೆ ಭಾರತ ಸರ್ಕಾರ ಹೊಸ ಕನಸನ್ನೊಂದನ್ನು ಕಾಣುತ್ತಿದೆ. ಈ ಒಂದು ಪ್ರದೇಶದಲ್ಲಿ ಫಿನ್​ಟೆಕ್ ಸಿಟಿಯೊಂದರ ನಿರ್ಮಾಣಕ್ಕೆ ಈಗ ರೂಪುರೇಷೆಗಳು ಸಿದ್ಧಗೊಂಡಿವೆ. ಸೆಕ್ಟರ್​ 11 ಯಮುನಾ ಎಕ್ಸ್​ಪ್ರೆಸ್​​ ಇಂಡಸ್ಟ್ರಿಯಲ್ ಡೆವಲಪ್ಮೆಂಟ್​​ ಅಥಾರಿಟಿ, 759 ಎಕರೆ ವಿಸ್ತಿರ್ಣದಲ್ಲಿ ಇಂತಹದೊಂದು ನಗರವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಸಿದ್ಧಗೊಳಸಿದೆ. ಮೊದಲ ಹಂತದಲ್ಲಿ 250 ಎಕರೆಯಲ್ಲಿ ಈ ಒಂದು ನಗರ ನಿರ್ಮಾಣವಾಗಲಿದ್ದು. ಅದಕ್ಕಾಗಿ ಡಿಪಿಆರ್​ ಕೂಡ ಸಿದ್ಧಗೊಂಡಿದ್ದು ಯೋಜನೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮತ್ತು ಇದು ಕುಶ್​ಮನ್ ಮತ್ತು ವೇಕ್​ಫಿಲ್ಡ್​ ಇಂಡಿಯಾದಿಂದ ತಯಾರಿಸಲಾಗಿರುವ ಡಿಪಿಆರ್ ಆಗಿದೆ.

ಇದನ್ನೂ ಓದಿ:ಕುದುರೆ ಏರಿ ಬಂದ ಮದುಮಗನಿಗೆ ಹೃದಯಾಘಾತ; ಕಡೇ ಕ್ಷಣದ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

ಭಾರತದ ಫಿನ್​​ಟೆಕ್​ ಸಿಟಿ ಎಂಬ ಈ ಕನಸಿನ ನಗರಿಯ ಯೋಜನೆಯ ಅಂಗವಾಗಿ ಮುಂದಿನ ತಿಂಗಳು ದೆಹಲಿ ಹಾಗೂ ನೊಯ್ಡಾದಲ್ಲಿ ಹೂಡಿಕೆದಾರರ ಸಮಿತಿ ನಡೆಯಲಿದೆ. ಈಒಂದು ಸಮಿತಿಯಲ್ಲಿ ಸುಮಾರು ಟಾಪ್ 500 ಕಂಪನಿಗಳು ಹಾಗೂ ಟಾಪ್​ ಇನ್​​ಸ್ಟಿಟ್ಯೂಟ್​ಗಳು ಭಾಗಿಯಾಗಲಿವೆ.

publive-image

ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ, ಫಿನ್​ಟೆಕ್ ಸಿಟಿಯ ಯೋಜನೆಯಲ್ಲಿ ಹೂಡಿಕೆ ಮಾಡುವ ಕಂಪನಿ ಹಾಗೂ ಸಂಸ್ಥೆಗಳು ಭವಿಷ್ಯದಲ್ಲಿ ಭಾರೀ ಪ್ರಯೋಜನಗಳನ್ನು ಪಡೆಯಲಿವೆಯಂತೆ. ಅವರಿಗೆ ಹೂಡಿಕೆಗಾಗಿ ಪ್ರತ್ಯೇಕವಾದ ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ. ಎಫ್​ಡಿಐ ಪಾಲಿಸಿ ಅಡಿಯೊಳಗೆ ಅವರಿಗೆ ಹೂಡಿಕೆ ಮಾಡಲು ಅವಕಾಶ ನೀಡಲಾಗುವುದು. ಶೇಕಡಾ 100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿದ ಸಂಸ್ಥೆಗಳಿಗೆ ಶೇಕಡಾ 75 ರಷ್ಟು ಲ್ಯಾಂಡ್ ಸಬ್ಸಿಡಿ ಸಿಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಗಳ ಜೊತೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಹುಡುಗಿ ತಂದೆ ಮಾಡಿದ್ದೇನು? ಬೆಚ್ಚಿ ಬೀಳಿಸುತ್ತೆ ವಿಡಿಯೋ!

ಸಿಂಗಾಪೂರ್​ನ್ನು ಪ್ರೇರಣೆಯಾಗಿಟ್ಟುಕೊಂಡು ಈ ಒಂದು ನಗರ ನಿರ್ಮಾಣವಾಗಲಿದೆ. ಪ್ರಿಮಿಯರ್ ಹಬ್ ರೀತಿಯಲ್ಲಿ ಈ ನಗರ ವಿನ್ಯಾಸಗೊಳಿಸಲಾಗುವುದು. ಇದೊಂದು ಪೇಮೆಂಟ್ ಗೇಟ್​ವೇ ಆಗಿ, ಡಿಜಿಟಲ್ ಕರೆನ್ಸಿ, ಆನ್​ಲೈನ್ ಬ್ಯಾಂಕಿಂಗ್ ಮತ್ತು ಫಿನ್​ಟೆಕ್​ ಸಂಶೋಧನೆಯ ನಗರಿಯಾಗಿ ಬೆಳಯಲಿದೆ ಎಂದು ಹೇಳಲಾಗುತ್ತಿದೆ. ವಿವಿಧ ಕಂಪನಿಗಳು ಕಾರ್ಯ ನಿರ್ವಹಿಸಲು ಬೇಕಾದ ಸೂಕ್ತ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗೂ ಈ ನಗರವೊಂದು ದೇಶದ ಪ್ರಮುಖ ಆರ್ಥಿಕ ಮೂಲವನ್ನಾಗಿ ರೂಪಿಸುವ ಕನಸಿನಡಿ ನಿರ್ಮಾಣವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment