Advertisment

ಬಾಲ್ಯದಲ್ಲಿ ಪೈಲಟ್ ಆಗುವ ಕನಸು.. ನನಸು ಮಾಡಿಕೊಳ್ಳಲು ನೀವು ಏನು ಮಾಡಬೇಕು..?

author-image
Ganesh
ಬಾಲ್ಯದಲ್ಲಿ ಪೈಲಟ್ ಆಗುವ ಕನಸು.. ನನಸು ಮಾಡಿಕೊಳ್ಳಲು ನೀವು ಏನು ಮಾಡಬೇಕು..?
Advertisment
  • ಕೇವಲ ಸೈನ್ ಓದಿದರೆ ಮಾತ್ರ ಪೈಲಟ್ ಆಗಬಹುದಾ?
  • ಪೈಲಟ್‌ ಆಗಲು ನೀವು ಯಾವ ಕೋರ್ಸ್​ ಮಾಡಬೇಕು..?
  • ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪ್ಲಾನ್ ಏನು?

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಸಲ ಆದ್ರೂ ವಿಮಾನದಲ್ಲಿ ಟ್ರಾವೆಲ್​ ಮಾಡಬೇಕು ಅನ್ನೋ ಬಯಕೆ ಇದ್ದೇ ಇರುತ್ತದೆ. ಹಾಗೇಯೆ ಕೆಲವು ಮಕ್ಕಳಿಗೆ ತಾವು ಮುಂದೇ ಪೈಲಟ್‌ ಆಗಬೇಕು ಎನ್ನುವ ಕನಸು ಕೂಡ ಇರುತ್ತದೆ.. ಈ ಕನಸು ನನಸಾಗಬೇಕು ಅಂದ್ರೆ ಸರಿಯಾದ ಮಾರ್ಗದರ್ಶನ ಇರಬೇಕು. ಸರಿಯಾದ ಮಾರ್ಗದರ್ಶನ ಇದ್ದರೆ ಮಾತ್ರ ಪೈಲಟ್‌ ಆಗಬಹುದು. ಹಾಗಾದ್ರೆ ಪೈಲಟ್‌ ಆಗುವುದು ಹೇಗೆ? ಪೈಲಟ್‌ ಆಗಲು ಯಾವ ಕೋರ್ಸ್​ ಮಾಡಬೇಕು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ..

Advertisment

ಒಬ್ಬ ವಿದ್ಯಾರ್ಥಿ ಪೈಲಟ್‌ ಆಗಬೇಕು ಅಂದ್ರೆ ಎರಡು ಆಯ್ಕೆಗಳಿವೆ. ಒಂದು ಭಾರತೀಯ ವಾಯುಪಡೆಗೆ ಸೇರಬೇಕು ಅಥವಾ ವಾಣಿಜ್ಯ ಪೈಲಟ್‌ ಪರವಾನಿಗೆ ಪಡೆಯಬೇಕು. ಯಾರೇ ಆಗಲಿ ಆಗ ಮಾತ್ರ ಪೈಲಟ್​​ ಆಗಲು ಸಾಧ್ಯ. ಇಷ್ಟೇ ಪೈಲಟ್‌ ಆಗಬೇಕು ಅಂದ್ರೆ ಅದಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಓದಬೇಕು..

ಇದನ್ನೂ ಓದಿ: ಇಂಜಿನಿಯರಿಂಗ್, ಮೆಡಿಕಲ್ ಸೀಟ್‌ಗೆ ಹೆಚ್ಚುವರಿ ಶುಲ್ಕ ವಸೂಲಿ; ವಿದ್ಯಾರ್ಥಿಗಳ ಪರ KEA ಪತ್ರ; ಏನಿದೆ?

publive-image

II PUC ನಂತರ ಪೈಲಟ್‌ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ. ಪೈಲಟ್‌ ಕೋರ್ಸ್‌ಗೆ ಸೇರಬೇಕು ಅಂದ್ರೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 50 ಅಂಕ ಪಡೆದು ಪಾಸ್​ ಆಗಿರಬೇಕಿತ್ತು. ಈಗ ಆರ್ಟ್ಸ್​​, ಕಾಮರ್ಸ್​ ಓದಿದವರಿಗೂ ಪೈಲಟ್ ತರಬೇತಿ ಪಡೆಯಲು ಅವಕಾಶ ಮಾಡಿಕೊಡಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮುಂದಾಗಿದೆ.

Advertisment

ಇತ್ತೀಚೆಗೆ ಕೆಲವು ಸಂಸ್ಥೆಗಳು ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದವು. ಈಗ ಆರ್ಟ್ಸ್​ ಓದಿದವರಿಗೂ ಪೈಲಟ್ ತರಬೇತಿ ಪಡೆಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇಷ್ಟೇ ಪೈಲಟ್‌ ಆಗಲು ಅಭ್ಯರ್ಥಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣ ಫಿಟ್​​ ಆಗಬೇಕಿದೆ. ಇದಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣಪತ್ರ ಕೂಡ ನೀಡಬೇಕಾಗುತ್ತದೆ. ಇನ್ನೂ ಪೈಲಟ್‌ ಆಗಲು ಅಭ್ಯರ್ಥಿಗೆ 17 ವರ್ಷ ತುಂಬಿರಬೇಕು.

ಸದ್ಯ ಕಮರ್ಷಿಯಲ್ ಪೈಲಟ್ ಲೈಸನ್ಸ್ ತರಬೇತಿಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ಅಧ್ಯಯನ ಮಾಡುವುದು ಅಗತ್ಯ. ಆದಾಗ್ಯೂ ವೈದ್ಯಕೀಯ ಫಿಟ್ನೆಸ್ ಮಾನದಂಡ ಎಲ್ಲರಿಗೂ ಒಂದೇ ಆಗಿರುತ್ತದೆ.

ಇದನ್ನೂ ಓದಿ: 6 ಸಾವಿರಕ್ಕೂ ಅಧಿಕ ಉದ್ಯೋಗಗಳ ನೇಮಕಾತಿ.. 18 ವರ್ಷ ಮೇಲ್ಪಟ್ಟವರಿಗೆ ಇದು ಗೋಲ್ಡನ್ ಚಾನ್ಸ್​

Advertisment

publive-image

1990ರ ದಶಕದಿಂದಲೂ ಕಮರ್ಷಿಯಲ್ ಪೈಲಟ್ ಲೈಸನ್ಸ್ (ಸಿಪಿಎಲ್) ತರಬೇತಿ ಕ್ಷೇತ್ರವು ಕೇವಲ ವಿಜ್ಞಾನ ಮತ್ತು ಗಣಿತ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿತ್ತು. ಇದಕ್ಕೂ ಮುನ್ನ ಸಿಪಿಎಲ್ ತರಬೇತಿಗೆ 10ನೇ ತರಗತಿ ಉತ್ತೀರ್ಣವಾಗುವುದು ಮಾನದಂಡವಾಗಿತ್ತು. ಈಗ ಆರ್ಟ್ಸ್​​, ಕಾಮರ್ಸ್​ ಓದಿದವರಿಗೂ ಪೈಲಟ್​ ತರಬೇತಿಗೆ ಅವಕಾಶ ನೀಡಲಾಗುತ್ತದೆ. ಈ ನಿರ್ಧಾರ ಅಂತಿಮವಾದ ಬಳಿಕ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಶಿಫಾರಸ್ಸು ಕಳುಹಿಸಲಾಗುವುದು. ಅಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಸಿಪಿಎಲ್ ತರಬೇತಿಯು ಎಲ್ಲ ವಿಷಯಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಲಿದೆ ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.

ಭಾರತ ಹೊರತುಪಡಿಸಿ ವಿಶ್ವದ ಯಾವುದೇ ದೇಶಗಳಲ್ಲಿ ಸಿಪಿಎಲ್ ತರಬೇತಿಗೆ 12ನೇ ತರಗತಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಕಲಿತಿರಬೇಕು ಎಂಬ ಮಾನದಂಡ ಇಲ್ಲ. ಇದು ಹಿಂದಿನ ಕಾಲದಿಂದ ಬಂದ ಅಗತ್ಯತೆ. ಪೈಲಟ್‍ಗಳಿಗೆ 12ನೇ ತರಗತಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಕಲಿಯಬೇಕಾದ ಅಗತ್ಯ ಇಲ್ಲ. ಅದಕ್ಕೂ ಕಿರಿಯ ತರಗತಿಗಳಲ್ಲಿ ಅಗತ್ಯ ಜ್ಞಾನವನ್ನು ಅವರು ಸಂಪಾದಿಸಿರುತ್ತಾರೆ ಎನ್ನುತ್ತಾರೆ ಹಿರಿಯ ಪೈಲಟ್ ಕ್ಯಾಪ್ಟನ್ ಶಕ್ತಿ ತುಂಬಾ.

ಇನ್ನೂ ಹಲವು ವಿಮಾನಯಾನ ಶಾಲೆಗಳು ಪ್ರಸ್ತುತ ನಿಯಮಾವಳಿಯನ್ನು ಪ್ರಶ್ನಿಸಿವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪೈಲಟ್​ ಆಗಲು ಸೈನ್ಸ್​ ಓದಲೇಬೇಕು ಅಂತೇನಿಲ್ಲ, ಆರ್ಟ್ಸ್​​ ಮತ್ತು ಕಾಮರ್ಸ್​ ಓದಿದವರಿಗೂ ಅವಕಾಶ ಇದೆ.

Advertisment

ಇದನ್ನೂ ಓದಿ: ಶಿಕ್ಷಣ ಇಲಾಖೆ ಹೊಸ ನಿಯಮ.. ರಾಜ್ಯದ ಸಾವಿರಾರು ಪ್ರೀ-ಸ್ಕೂಲ್​ಗಳಿಗೆ ಸಂಕಷ್ಟ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment