ಭಾರತದಲ್ಲೇ ಅತ್ಯಂತ ದುಬಾರಿ ಜಾಹೀರಾತು ಚಿತ್ರೀಕರಣ; ಇದರ ಹೈಬಜೆಟ್‌ ಎಷ್ಟು ಕೋಟಿ ಗೊತ್ತಾ?

author-image
admin
Updated On
ಭಾರತದಲ್ಲೇ ಅತ್ಯಂತ ದುಬಾರಿ ಜಾಹೀರಾತು ಚಿತ್ರೀಕರಣ; ಇದರ ಹೈಬಜೆಟ್‌ ಎಷ್ಟು ಕೋಟಿ ಗೊತ್ತಾ?
Advertisment
  • ಅಮೀರ್ ಖಾನ್, ರಣಬೀರ್ ಕಪೂರ್, ಅರ್ಬಾಜ್ ಖಾನ್, ಜಾಕಿ ಶ್ರಾಫ್
  • ರೋಹಿತ್ ಶರ್ಮಾ, ರಿಷಬ್‌ ಪಂತ್, ಹಾರ್ದಿಕ್ ಪಾಂಡ್ಯ, ಬೂಮ್ರಾ, ಆರ್. ಅಶ್ವಿನ್
  • ಈ ಎಲ್ಲರೂ ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋದಕ್ಕೆ ದೊಡ್ಡ ಚರ್ಚೆ!

ಐಪಿಎಲ್‌ 18ನೇ ಸೀಸನ್ ಶುರುವಾಗುತ್ತಿರುವ ಬೆನ್ನಲ್ಲೇ ಡ್ರೀಮ್ 11 ಭಾರತದ ಅತಿ ದುಬಾರಿ ಜಾಹೀರಾತು ಚಿತ್ರೀಕರಣ ಮಾಡಿದೆ. ಈ ಜಾಹೀರಾತು ನಿರ್ಮಾಣ ಮಾಡಿರುವ ವೆಚ್ಚದಲ್ಲಿ ಒಂದು ಹೈಬಜೆಟ್ ಚಿತ್ರವನ್ನೇ ನಿರ್ಮಾಣ ಮಾಡಬಹುದಾಗಿದೆ.

ಡ್ರೀಮ್ 11 ಬಿಡುಗಡೆ ಮಾಡಿರುವ ಈ ಜಾಹೀರಾತಿನಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ರಣಬೀರ್ ಕಪೂರ್, ಅರ್ಬಾಜ್ ಖಾನ್, ಜಾಕಿ ಶ್ರಾಫ್, ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ, ಕ್ರಿಕೆಟಿಗರಾದ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್‌ ಬೂಮ್ರಾ, ಆರ್. ಅಶ್ವಿನ್ ಅಭಿನಯಿಸಿದ್ದಾರೆ.

ಈ ಎಲ್ಲರೂ ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋದು ವಿಶೇಷವಾಗಿದೆ. ಸಾಮಾನ್ಯವಾಗಿ ಒಂದು ಜಾಹೀರಾತಿಗೆ ಬಾಲಿವುಡ್ ನಟ ಅಮೀರ್ ಖಾನ್ 10-12 ಕೋಟಿ, ರಣಬೀರ್ ಕಪೂರ್ 6 ಕೋಟಿ, ಅರ್ಬಾಜ್ ಖಾನ್ 35-50 ಲಕ್ಷ, ಜಾಕಿ ಶ್ರಾಫ್ 50 ಲಕ್ಷ ಸಂಭಾವನೆ ಪಡೆಯುತ್ತಾರೆ.

publive-image

ಟೀಂ ಇಂಡಿಯಾ ರೋಹಿತ್ ಶರ್ಮಾ 3.5-5 ಕೋಟಿ, ರಿಷಬ್ ಪಂತ್ 1-2 ಕೋಟಿ, ಹಾರ್ದಿಕ್ ಪಾಂಡೆ 2-3 ಕೋಟಿ, ಬೂಮ್ರಾ 2-3 ಕೋಟಿ, ಮತ್ತು ಆರ್.ಅಶ್ವಿನ್ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಇದನ್ನೂ ಓದಿ: ಈ ಸಲ ಆರ್​ಸಿಬಿ ಹಣೆಬರಹ ಬದಲಾಯಿಸಲಿದ್ದಾರೆ ನಾಲ್ವರು ಸ್ಟಾರ್​ಗಳು..!

ಈ ಜಾಹೀರಾತಿನಲ್ಲಿರುವ ಬಾಲಿವುಡ್ ಸ್ಟಾರ್ಸ್ ಹಾಗೂ ಕ್ರಿಕೆಟಿಗರ ಒಟ್ಟು ಸಂಭಾವನೆ ಸೇರಿಸಿದ್ರೆ 35-40 ಕೋಟಿ ರೂಪಾಯಿ ದಾಟಲಿದೆ. ಇದರ ಜೊತೆಗೆ ಜಾಹೀರಾತು ಪ್ರೊಡಕ್ಷನ್ಸ್ ಎಲ್ಲಾ ಸೇರಿದ್ರೆ 45-50 ಕೋಟಿ ದಾಟುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೋಟಿ, ಕೋಟಿ ಸುರಿದಿರುವ ಈ ಜಾಹೀರಾತಿನ ಬಗ್ಗೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment