newsfirstkannada.com

ಟೀಂ ಇಂಡಿಯಾ ಜರ್ಸಿ ಪ್ರಾಯೋಜಕತ್ವವನ್ನು Dream -11 ಎಷ್ಟು ಕೋಟಿಗೆ ಖರೀದಿಸಿದೆ ಗೊತ್ತಾ?

Share :

Published July 5, 2023 at 4:45pm

Update July 5, 2023 at 4:58pm

    ಜನಪ್ರಿಯ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್-11

    3 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ

    ಡ್ರೀಮ್​ 11 ಭಾರತದ ಮೊದಲ ಫ್ಯಾಂಟಸಿ ಸ್ಪೋರ್ಟ್​ ಕಂಪನಿ

ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಪಡೆದುಕೊಳ್ಳುವಲ್ಲಿ ಜನಪ್ರಿಯ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್-11 ಯಶಸ್ವಿಯಾಗಿದೆ.

ಜೆರ್ಸಿ ಪ್ರಾಯೋಜಕತ್ವದ ಹಕ್ಕುಗಳನ್ನ 358 ಕೋಟಿ ರೂಪಾಯಿಗೆ ಖರೀದಿಸಿದ್ದು, 3 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂಬರುವ ವೆಸ್ಟ್​ ಇಂಡೀಸ್​ ಪ್ರವಾಸದಿಂದ ಟೀಮ್ ಇಂಡಿಯಾ ಆಟಗಾರರ ಜೆರ್ಸಿ ಮೇಲೆ ಡ್ರೀಮ್ 11 ಕಾಣಬಹುದಾಗಿದೆ.

ಟೀಂ ಇಂಡಿಯಾದ ಜೆರ್ಸಿಯಲ್ಲಿ ಹಲವು ಪ್ರಾಯೋಜಕತ್ವವನ್ನು ಕಾಣಬಹುದು. ಆದರೀಗ ಡ್ರೀಮ್​ 11 ಕೂಡ ಸೇರ್ಪಡೆಯಾಗಿದೆ. ಅಂದಹಾಗೆಯೇ ಇದೊಂದು ಭಾರತೀಯ ಫ್ಯಾಂಟಸಿ ಕ್ರೀಡಾ ವೇದಿಕೆಯಾಗಿದ್ದು, ಇದರಲ್ಲಿ ಕ್ರಿಕೆಟ್​ ಒಳಗೊಂಡಂತೆ ಹಾಕಿ, ಕಬಡ್ಡಿ, ಹ್ಯಾಂಡ್​ಬಾಲ್​, ಬಾಸ್ಕೆಟ್​ ಬಾಲ್​, ವಾಲಿಬಾಲ್​, ಬೇಸ್​ಬಾಲ್​ ಹೀಗೆ ನಾನಾ ಆಟಗಳನ್ನು ಆಡಲು ಅವಕಾಶ ನೀಡಿದೆ.

2019ರಲ್ಲಿ ಡ್ರೀಮ್​ 11 ಮೊದಲ ಫ್ಯಾಂಟಸಿ ಸ್ಪೋರ್ಟ್​ ಕಂಪನಿಯಾಗಿ ಹೊರಹೊಮ್ಮಿತು. ಇದನ್ನು ಹರ್ಷ್​ ಜೈನ್​ ಮತ್ತು ಭವಿತ್​ ಶೇಠ್​​​ ಸ್ಥಾಪಿಸಿದ್ದಾರೆ. ಸದ್ಯ ಭಾರತದಲ್ಲಿ ದೊಡ್ಡ ಕಂಪನಿಯಾಗಿ ತಲೆಯೆತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾ ಜರ್ಸಿ ಪ್ರಾಯೋಜಕತ್ವವನ್ನು Dream -11 ಎಷ್ಟು ಕೋಟಿಗೆ ಖರೀದಿಸಿದೆ ಗೊತ್ತಾ?

https://newsfirstlive.com/wp-content/uploads/2023/07/Team-India-1.jpg

Load More