/newsfirstlive-kannada/media/post_attachments/wp-content/uploads/2024/07/YOUTH_MOTHER.jpg)
ಹುಟ್ಟು ನಿಶ್ಚಿತ.. ಸಾವು ಖಚಿತ.. ಈ ಎರಡರ ನಡುವೆ ಬದುಕು ಮಾತ್ರ ಕ್ಷಣಿಕ.. ಯಾರ ಹುಟ್ಟು ಹೇಗೆ ಅಂತ ಹೇಳೋಕೆ ಆಗಲ್ಲ. ಹಾಗೆಯೇ ಯಾರ ಸಾವು ಹೇಗೆ ಅಂತನೂ ಹೇಳೋಕೆ ಸಾಧ್ಯವಿಲ್ಲ. ಯಾಕಂದರೆ, ಮನುಷ್ಯನಿಗೆ ಹುಟ್ಟಿನ ಬಗ್ಗೆ ಜ್ಞಾನ ಇರಬಹುದು. ಆದ್ರೆ ಸಾವಿನ ಬಗ್ಗೆ ಅಂದಾಜು ಮಾಡೋಕೂ ಆಗಲ್ಲ.
ಇದನ್ನೂ ಓದಿ: ಫಾಲ್ಸ್ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?
ಕೋಮಾ ಈ ಪದ ಕೇಳಿದ್ರೆ ಸಾಕು ಹೌದಾ. ಓ ಮೈ ಗಾಡ್ ಅಂತ ಹೇಳ್ತೀರಾ. ಡಾಕ್ಟರ್ಸ್ಗಳಂತೂ ಎಲ್ಲ ದೇವರ ಇಚ್ಛೆ ಅಂತ ಹೇಳ್ತಾರೆ. ಕೋಮಾಗೆ ಹೋದ ವ್ಯಕ್ತಿಗಳು ಹೊರಬಂದಿದ್ದು ಕೇಳಿರಬಹುದು. ಬಂದಿಲ್ಲದೇ ಇರೋದನ್ನೂ ಕೇಳಿರಬಹುದು. ರೋಗ, ರುಜಿನ ಬಂದ್ರೂ ಸಿರಪ್, ಇಂಜೆಕ್ಷನ್, ಟ್ಯಾಬ್ಲೆಟ್ನಿಂದ ವಾಸಿಯಾಗಬಹುದು. ಆದ್ರೇ ಯಾವುದಕ್ಕೂ ರೆಸ್ಪಾನ್ಸ್ ಕೊಡದೇ, ತಿನ್ನದೇ, ಕುಡಿಯದೇ. ಬೆಡ್ ಮೇಲೆ ಮಲಗಿರೋ ವ್ಯಕ್ತಿಯ ಜೀವ ಇದ್ಯೋ, ಇಲ್ವೋ ಅಂಥ ಹೇಳೋಕೂ ಡಾಕ್ಟರ್ರೇ ಬರಬೇಕು. ಕೋಮಾ ಸ್ಥಿತಿ ನಮ್ ಶತ್ರುಗೂ ಬರಬಾರದು ಅಂತ ಹೇಳೋರು ಇದ್ದಾರೆ.
ಇದನ್ನೂ ಓದಿ: ಕೇರಳ CM ಮನಸು ಮಾಡಿದ್ರೆ ಈ ದುರಂತ ತಪ್ಪಿಸಬಹುದಿತ್ತು; ಅಮಿತ್ ಶಾ ಶಾಕಿಂಗ್ ಮಾಹಿತಿ ಬಹಿರಂಗ
244 ದಿನಗಳ ನಂತರ ಯುವಕನಿಗೆ ಜ್ಞಾನ ಬಂದಿತ್ತು
ಕೆಲ ವರ್ಷಗಳ ಹಿಂದೆ ಬೈಕ್ ಆ್ಯಕ್ಸಿಡೆಂಟ್ನಲ್ಲಿ ಒಬ್ಬ ವ್ಯಕ್ತಿಗೆ ತಲೆ ಏಟಾಗಿ, ಐಸಿಯೂಗೆ ಸೇರಿಸಲಾಗಿತ್ತು. ಬ್ರೈನ್ಗೆ ಬಿದ್ದ ಏಟಿನಿಂದ ಆ ವ್ಯಕ್ತಿ ಕೋಮಾ ಸ್ಥಿತಿಗೆ ಜಾರಿದ್ದ. ಯಾವ ಪವಾಡವೋ ಏನೋ ಗೊತ್ತಿಲ್ಲ. ಬರೋಬ್ಬರಿ 244 ದಿನಗಳ ನಂತರ ವ್ಯಕ್ತಿಗೆ ಜ್ಞಾನ ಬಂದಿತ್ತು. ಇದೊಂದು ಪವಾಡ ಅಂತ ವೈದ್ಯರು ಹೇಳಿದ್ದರು. ಆದರೆ, ಆ ವ್ಯಕ್ತಿಯ ಹಣೆಬರಹದಲ್ಲಿ ವಿಧಿ ಬರೆದಿದ್ದೇ ಬೇರೆ.
2017ರಲ್ಲಿ 22 ವರ್ಷದ ಡ್ರೂ ಕೊಹ್ನ್ ಎನ್ನುವ ವ್ಯಕ್ತಿಗೆ ಬೈಕ್ ಆ್ಯಕ್ಸಿಡೆಂಟ್ ಆಗಿತ್ತು. ಸೀರಿಯಸ್ ಕಂಡೀಷನ್ನಲ್ಲಿದ್ದ ಡ್ರೂ ಕೊಹ್ನ್ ಬ್ರೈನ್ಗೆ ಗಾಯವಾಗಿ, ರಕ್ತ ಸುರೀತಾ ಇತ್ತು. ಮೆದುಳಿಗೆ ಬಿದ್ದ ಏಟಿನಿಂದ ಆಗಿನಿಂದಲೂ ನಾನ್ಸ್ಟಾಪ್ ಟ್ರೀಟ್ಮೆಂಟ್ ಕೊಟ್ರೂ, ಕಳೆದ ವರ್ಷ ಅಂದ್ರೇ 2023ರಲ್ಲಿ ಆ ವ್ಯಕ್ತಿ ಕೋಮಾಗೆ ಹೋಗಿಬಿಟ್ಟ. ಇನ್ನೇನು ಆ ವ್ಯಕ್ತಿ ಬದುಕೋದು ಬಹಳ ಕಡಿಮೆ ಅಂತ ಡ್ರೂ ಕೊಹ್ನ್ ಅವರ ತಾಯಿಗೆ ಡಾಕ್ಟರ್ಸ್ ಹೇಳಿದ್ದಾರೆ. ಜೊತೆಗೆ ಅವನ ಅಂಗಾಂಗ ದಾನ ಮಾಡಿದ್ರೆ, 4 ಜನರಿಗೆ ಯೂಸ್ ಆದ್ರೂ ಆಗುತ್ತೆ ಅಂತ ಸಲಹೆಯನ್ನು ಮಾಡಿದ್ದಾರೆ.
ಕಣ್ಣು ಬಿಟ್ಟು ಅಮ್ಮ ಎಂದಿದ್ದ ಯುವಕ
ಬೆಡ್ ಮೇಲೆ ಹಗಲಿರುಳು ಮಗನ ಸೇವೆ ಮಾಡಿದ್ದ ಆ ತಾಯಿಯ ಪುಣ್ಯವೋ ಅಥವಾ ಆ ವ್ಯಕ್ತಿ ಮಾಡಿದ ಪುಣ್ಯವೋ ಕೋಮಾಗೆ ಹೋದ ಮಗ ಬರೋಬ್ಬರಿ 244 ದಿನಗಳ ನಂತರ ಕಣ್ಣು ಬಿಟ್ಟು ಅಮ್ಮ ಅಂದಿದ್ದಾನೆ. ಮಗನಿಗೆ ಪ್ರಜ್ಞೆ ಬಂದಿದ್ದೆ ತಡ, ಖುಷಿಯಲ್ಲಿ ಡ್ರೂ ಕೊಹ್ನ್ ತಾಯಿ ಕಣ್ಣೀರಾಕಿ ಆನಂದ ಬಾಷ್ಪ ಸುರಿಸಿದ್ದಾರೆ. ಮಗನ ಆರೈಕೆ ಮಾಡ್ತಿದ್ದ ತಾಯಿ, ಮಗನನ್ನ ಉಳಿಸಿಕೊಳ್ಳೋಕೆ ಎಲ್ಲ ಪ್ರಯತ್ನ ಮಾಡಿದಾಗ ಡ್ರೂ ಕೊಹ್ನ್ ಎಲ್ಲರಂತೆ ಓಡಾಡೋಕೆ, ಕುಳಿತುಕೊಳ್ಳೋಕೆ ಶುರು ಮಾಡಿದ್ದಾನೆ. 2017ರಲ್ಲಿ ಆ್ಯಕ್ಸಿಡೆಂಟ್ ಆದಾಗ, ಆ ಹುಡುಗನಿಗೆ 22 ವರ್ಷ ವಯಸ್ಸಾಗಿತ್ತು. 2024ಕ್ಕೆ 29 ವರ್ಷ ವಯಸ್ಸು. 7 ವರ್ಷಗಳ ಕಾಲ ಬೆಡ್ ಮೇಲೆ ಟ್ರಿಟ್ಮೆಂಟ್, 8 ತಿಂಗಳ ಕಾಲ ಕೋಮಾದಲ್ಲಿದ್ದ ಡ್ರೂ ಕೋಹ್ನ್ ನಾರ್ಮಲ್ ಆಗ್ತಿದ್ದ. ಆದ್ರೆ ಅವನ ಹಾಗೂ ಆ ತಾಯಿಯ ಖುಷಿ ಜಾಸ್ತಿ ದಿನ ಇರಲಿಲ್ಲ.
ಇದೇ ವರ್ಷ ಜುಲೈ 26ರ ಶುಕ್ರವಾರದಂದು ಡ್ರೂ ಕೊಹ್ನ್ ಎಂದಿನಂತೆ ವರ್ಕ್ ಅಂತ ಹೊರಗಡೆ ಹೊರಟಿದ್ದ. ಇದೇ ವೇಳೆ ಪಿಕಪ್ ಲಾರಿ ಬಂದು ಡ್ರೂ ಕೊಹ್ನ್ಗೆ ಗುದ್ದಿದೆ. ಬೈಕ್ ಅಪಘಾತದಿಂದ ಸೀರಿಯಸ್ ಆಗಿ, ಡ್ರೂ ಕೊಹ್ನ್ ಘಟನಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. 8 ವರ್ಷಗಳ ಕಾಲ, ಸಾವು ಬದುಕಿನ ನಡುವೆ ಹೋರಾಟದಲ್ಲಿ ಗೆದ್ದಿದ್ದ ಡ್ರೂ ಕೊಹ್ನ್, ಕೊನೆಗೂ ಸಾವಿನ ಎದುರು ಮಂಡಿಯೂರಲೇಬೇಕಾಯ್ತು.
ಪೊಲೀಸರಿಗೆ ಫೋನ್ ಮಾಡಿದ್ದ ಲಾರಿ ಡ್ರೈವರ್
ಈ ಆ್ಯಕ್ಸಿಡೆಂಟ್ ಬಗ್ಗೆ ಮಾಹಿತಿ ಕೊಟ್ಟ ಪೊಲೀಸರು, ಫ್ಲೋರಿಡಾ ರಾಜ್ಯದ ಜಾಕ್ಸನ್‌ವಿಲ್ಲೆ ಸಿಟಿಯ ರಸ್ತೆಯಲ್ಲಿ ಡ್ರೂ ಕೊಹ್ನ್ ನಡೆದುಕೊಂಡು ಹೋಗ್ತಿದ್ದಾಗ ಆ್ಯಕ್ಸಿಡೆಂಟ್ ಆಗಿದೆ. ಜುಲೈ 26ರ ಶುಕ್ರವಾರ ಅಮೆರಿಕ ಕಾಲ ಮಾನ ಪ್ರಕಾರ, ಸಂಜೆ 5.30ಕ್ಕೆ ಈ ಘಟನೆ ಆಗಿದೆ. ಆ್ಯಕ್ಸಿಡೆಂಟ್ ಮಾಡಿದ್ದ ಲಾರಿ ಡ್ರೈವರ್ರೇ ಆಂಬುಲೆನ್ಸ್ಗೆ, ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ಹೇಳಿದ್ದಾನೆ. ಆದ್ರೆ, ಅಷ್ಟರಲ್ಲಾಗಲೇ ಡ್ರೂ ಕೊಹ್ನ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಅಂತ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಫಿಟ್ನೆಸ್ ಇಲ್ಲದಿದ್ರೆ ಗೇಟ್ಪಾಸ್.. ಗಂಭೀರ್ ಗುಟುರು!
ಮಗನಿಗೋಸ್ಕರ ತನ್ನ ಜೀವನವನ್ನೇ ಪಣಕ್ಕಿಟ್ಟಿದ್ದ ತಾಯಿ, ಡ್ರೂ ಕೊಹ್ನ್ ಸಾವಿನ ಬಗ್ಗೆ ಆಕೆಯ ಮಾತು ಕೇಳಿದ್ರೆ ನಿಜಕ್ಕೂ ಯಾರಿಗೆ ಆದ್ರೂ ಕಣ್ಣಂಚಿನಲ್ಲಿ ನೀರು ಬಂದೇ ಬರುತ್ತೆ. ನನ್ನ ಮಗ ಸುಮಾರು 8 ವರ್ಷ ಸಾವು -ಬದುಕಿನ ನಡುವೆ ಹೋರಾಡಿ ಗೆದ್ದಿದ್ದ. ಆ ದೇವರು ನನ್ನ ಮಗನ ಲೈಫ್ ಅನ್ನ ಅವತ್ತೇ ಮುಗಿಸಬಹುದಿತ್ತು. ಆದರೆ, ನಮಗೆ ಮತ್ತಷ್ಟು ವರ್ಷಗಳ ಕಾಲ ಸಮಯ ಕೊಟ್ಟು, ನನ್ನ ಮಗನನ್ನ ಈಗ ವಾಪಸ್ ಕರೆಸಿಕೊಂಡಿದ್ದಾನೆ. ನನಗೆ ಈಗ ಸಿಟ್ಟು ಬರ್ತಿಲ್ಲ. ನೆಮ್ಮದಿಯ ಭಾವ ಉಂಟಾಗ್ತಿದೆ ಅಂತ ತಾಯಿ ಹೇಳಿದ್ದಾಳೆ.
ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್ ಅಂದ್ರೆ ಇವರಿಗೆ ಭಯ, ಕಾರಣ?
ಒಂದು ಕಡೆ ಸಾವನ್ನೇ ಗೆದ್ದ ಹುಡುಗ, ಮತ್ತೆ ಸಾವಿಗೆ ಆ ವ್ಯಕ್ತಿ ಮಂಡಿಯೂರ ಬೇಕಾಯ್ತು. ಇನ್ನೊಂದು ಕಡೆ ಆ ಮಹಾ ತಾಯಿಯ ಆರೈಕೆ ಫಲವೇ ಆ ಹುಡುಗನ ಬದುಕಿಗೆ ನಂದಾದೀಪವಾಗಿತ್ತು. 7 ವರ್ಷಗಳ ಬೆಡ್ ಮೇಲಿನ ನರಳಾಟ, 244 ದಿನಗಳ ಕೋಮಾ.. ಮತ್ತೆ ವಾಪಸ್. ಎಲ್ಲಾ ಹೊಸ ಪ್ರಾರಂಭ ಅನ್ನೋಷ್ಟುತ್ತಿಗೆ ಬೈಕ್ ಆ್ಯಕ್ಸಿಡೆಂಟ್ನಲ್ಲಿ ಸಾವು. ಅದಿಕ್ಕೆ ಹೇಳೋಕೆ ಯಾವುದೂ ಶಾಶ್ವತವಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ