Advertisment

ಡ್ರಿಂಕ್​ ಆ್ಯಂಡ್​ ಡ್ರೈವ್​ಗೆ ಯುವಕ ಬಲಿ; ಎಸ್ಕೇಪ್​ ಆಗಲು ಹೊರಟ ಕಾರು ಚಾಲಕ ಕೊನೆಗೂ ಅಂದರ್​

author-image
Harshith AS
Updated On
ಡ್ರಿಂಕ್​ ಆ್ಯಂಡ್​ ಡ್ರೈವ್​ಗೆ ಯುವಕ ಬಲಿ; ಎಸ್ಕೇಪ್​ ಆಗಲು ಹೊರಟ ಕಾರು ಚಾಲಕ ಕೊನೆಗೂ ಅಂದರ್​
Advertisment
  • ಇನ್ಸೆಂಟೀವ್ ಸಿಕ್ತು ಎಂದು ಸ್ನೇಹಿತರೊಂದಿಗೆ ಪಾರ್ಟಿ
  • ಕುಡಿದ ಮತ್ತಿನಲ್ಲಿ ಕಾರು ಚಾಲನೆ.. ಬೈಕ್​ ಸವಾರ ಸಾವು
  • ಹಿಟ್ ಆ್ಯಂಡ್​ ರನ್​ಗೆ ಯತ್ನಿಸಿದವನು ಕೊನೆಗೆ ಅಂದರ್​

ಬೆಂಗಳೂರು: ಹಿಟ್ ಆ್ಯಂಡ್​ ರನ್​ಗೆ ಯುವಕ ಬಲಿಯಾದ ಘಟನೆ ಮೈಸೂರು ರಸ್ತೆ ನಾಯಂಡಹಳ್ಳಿ ಸಮೀಪದ ವಿಶ್ವಪ್ರಿಯ ಅಪಾರ್ಟ್​ಮೆಂಟ್ ಮುಂಭಾಗ ನಡೆದಿದೆ. ಹೆಚ್.ಡಿ.ಕೋಟೆ ಮೂಲದ ಪ್ರಸನ್ನ ಕುಮಾರ್ ಸಾವನ್ನಪ್ಪಿದ ಯುವಕ.

Advertisment

ವಿನಾಯಕ್ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಪ್ರಸನ್ನ ಕುಮಾರ್​ಗೆ ಗುದ್ದಿದ್ದಾನೆ. ಪರಿಣಾಮ ಪ್ರಸನ್ನ ಕುಮಾರ್ ಸಾವನ್ನಪ್ಪಿದ್ದಾನೆ. ಅಂದಹಾಗೆಯೇ ಪ್ರಸನ್ನ ಕುಮಾರ್ ಅಂಜನಾನಗರದ ಸ್ವಾತಿ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡ್ತಿದ್ದ. ಬೈಕ್​ನಲ್ಲಿ ತೆರಳುತ್ತಿರುವಾಗ ಈ ಘಟನೆ ಸಂಭವಿಸಿದೆ.

ಕುಡಿದು ಮತ್ತಿನಲ್ಲಿ ಅಪಘಾತ

ವಿನಾಯಕ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದು, ವೀಕ್ ಎಂಡ್ ಆದ್ದರಿಂದ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ. ರಾತ್ರಿ 1.45 ರ ಸುಮಾರಿಗೆ ಸ್ನೇಹಿತ ಸಾಗರ್​ನನ್ನು ಡ್ರಾಪ್​ ಮಾಡಲು ಹೋಗುತ್ತಿದ್ದ. ಆ ವೇಳೆ ಮುಂದೆ ಹೋಗ್ತಿದ್ದ ಪ್ರಸನ್ನ ಕುಮಾರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರಸನ್ನ ಕುಮಾರ್​ ಸುಮಾರು 50 ಮೀಟರ್ ಹಾರಿ ಬಿದ್ದಿದ್ದಾನೆ. ಕುಡಿದ ಅಮಲಿನಲ್ಲಿ ಬೈಕ್ ಅನ್ನು ವಿನಾಯಕ್​ ಮಾರುದ್ದ ಉಜ್ಜಿಕೊಂಡು ಹೋಗಿದ್ದಾನೆ.

publive-image

ಅಪಘಾತದ ಬಳಿಕ ಎಸ್ಕೇಪ್​

ವಿನಾಯಕ್ ಕುಡಿದು ಗುದ್ದಿದ್ದಲ್ಲದೆ ಸೌಜನ್ಯಕ್ಕೂ ಕಾರು ನಿಲ್ಲಿಸದೇ ಎಸ್ಕೇಪ್ ಆಗಿದ್ದಾನೆ. ಅಪಘಾತ ಮಾಡಿ ಕಾರು ನಿಲ್ಲಿಸದೇ ಹೋಗ್ತಿದ್ದಾನೆ. ಇದನ್ನು ಸಾರ್ವಜನಿಕರು ಕಾರು ಬೆನ್ನತ್ತಿ ಅಡ್ಡಗಟ್ಟಿದ್ದಾರೆ. ಕಾರು ಚಾಲಕನ ದುರ್ನಡತೆಗೆ ಆಕ್ರೋಶಗೊಂಡ ಪ್ರತ್ಯಕ್ಷದರ್ಶಿಗಳು ಕಾರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.

Advertisment

ವಿನಾಯಕ್ ಸ್ನೇಹಿತ ಸಾಗರ್ ಹಾಗೂ ಮೂವರು ಯುವತಿಯರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ. ಕಂಪನಿಯಲ್ಲಿ ವರ್ಕ್ ಶಾಪ್ ಮುಗಿದ ಬಳಿಕ ಇನ್ಸೆಂಟೀವ್ ನೀಡಲಾಗಿತ್ತು. ಅದೇ ಹಣದಿಂದ ಪಾರ್ಟಿ ಮಾಡಿ ಸ್ನೇಹಿತರನ್ನ ಡ್ರಾಪ್ ಮಾಡಲು ವಿನಾಯಕ್​ ತೆರಳಿದ್ದರು. ಇನ್ನು ಘಟನೆ ನಡೆಯುತ್ತಿದ್ದಂತೆ ಕಾರು ಚಾಲಕ ವಿನಾಯಕ್​ ಯುವತಿಯರನ್ನ ಆಟೋದಲ್ಲಿ ಎಸ್ಕೇಪ್ ಮಾಡಿಸಿದ್ದಾನೆ. ಸದ್ಯ ಕಾರು ಚಾಲಕ ವಿನಾಯಕ್ ನನ್ನ ಬ್ಯಾಟರಾಯನಪುರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment