/newsfirstlive-kannada/media/post_attachments/wp-content/uploads/2025/07/death.jpg)
ಯಾದಗಿರಿ: ಕಲುಷಿತ ನೀರು ಸೇವನೆ ಮಾಡಿ ಮೂವರು ಜೀವಬಿಟ್ಟಿರೋ ಘಟನೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಡೆದಿದೆ. ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60) ಮತ್ತು ರಾಮಣ್ಣ ಪೂಜಾರಿ (50) ಮೃತ ದುರ್ದೈವಿಗಳು.
ಇದನ್ನೂ ಓದಿ: ನೀವು ಟ್ರೆಕ್ಕಿಂಗ್ ಪ್ರಿಯರೇ..? ಕರ್ನಾಟಕದ ಈ 7 ಬೆಸ್ಟ್ ಪ್ಲೇಸ್ಗಳನ್ನು ಮಿಸ್ ಮಾಡಿಕೊಳ್ಳಬೇಡಿ..!
ಕಳೆದ ಹತ್ತು ದಿನಗಳ ಹಿಂದೆ ಒಂದೇ ಗ್ರಾಮದ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಜೀವಬಿಟ್ಟಿದ್ದಾರೆ. ಇನ್ನೂ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಸುರಪುರ ಡಿಹೆಚ್ಓ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಹೆಚ್ಓ ಮಹೇಶ ಬಿರಾದಾರ ಅವರು ವಾಂತಿ ಭೇದಿ ಪ್ರಕರಣದ ಬಗ್ಗೆ ವರದಿ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ